ಮದ್ದೂರು : ದೇಶದಲ್ಲಿ ಜಾರಿಯಲ್ಲಿದ್ದ ಬ್ರಿಟಿಷರ ಕಾಲದ ಅಪರಾಧ ನಿಗ್ರಹ ಕಾಯ್ದೆಗಳಿಗೆ ತಿದ್ದುಪಡಿ ತರಲಾಗಿದ್ದು ಹೊಸ ಕಾನೂನುಗಳು ಜುಲೈನಿಂದ ಜಾರಿಯಾಗಲಿದೆ ಎಂದು ಇನ್ ಸ್ಪೆಕ್ಟರ್ ಕೆ ಆರ್ ಪ್ರಸಾದ್ ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಪೊಲೀಸ್ ಇಲಾಖೆ ಸಹಾಯಯೋಗದಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ ಆಯೋಜಿಸಿದ್ದ ನೂತನ ಅಪರಾಧ ಕಾನೂನು ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ಸರ್ಕಾರ ಅಪರಾಧ ನಿಗ್ರಹ ಕಾಯಿದೆಗಳಿಗೆ ಹೊಸ ರೂಪ ನೀಡಿದೆ, ಬ್ರಿಟಿಷರ ಕಾಲದ ಕಾನೂನುಗಳನ್ನು ಬದಲಾವಣೆ ಮಾಡಲಾಗಿದೆ,ಭಾರತೀಯ ದಂಡ ಸಂಹಿತೆ ಅಂತ ಇದ್ದದ್ದನ್ನು ಭಾರತೀಯ ನ್ಯಾಯ ಸಂಹಿತೆ,ಅಪರಾಧ ಪ್ರಕ್ರಿಯಾ ಸಂಹಿತೆ ಎಂಬುದನ್ನ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಅಧಿನಿಯಮ ಎಂಬುದನ್ನ ಭಾರತೀಯ ಸಾಕ್ಷ್ಯ ಕಾಯ್ದೆ ಎಂದು ಬದಲಾವಣೆ ಮಾಡಲಾಗಿದೆ ಎಂದರು.
ಬದಲಾವಣೆಯಾಗಿರುವ ಮೂರು ಕಾನೂನಿನ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳ ಬೇಕು, ಆ ಮೂಲಕ ಕಾನೂನು ಪಾಲನೆಗೆ ಮುಂದಾಗಬೇಕು ಎಂದು ಹೇಳಿದರು.
ಸರ್ಕಾರಿ ಅಭಿಯೋಜಕ ಪ್ರೀತಂ ಡೇವಿಡ್ ನೂತನ ಅಪರಾಧ ಕಾನೂನಿನ ಬಗ್ಗೆ ಉಪನ್ಯಾಸ ನೀಡಿದರು. ಸಿಪಿಐ ವೆಂಕಟೇಗೌಡ, ಪಿಎಸ್ಐ ಮಹೇಶ್, ಮಂಜುನಾಥ, ವೆಂಕಟೇಶ್, ನರೇಶ್, ಸೇರಿದಂತೆ ಪೊಲೀಸ್ ಇಲಾಖೆಯ ಸಿಬ್ಬಂದಿ ಹಾಜರಿದ್ದರು.