Tuesday, April 15, 2025
Google search engine

Homeಸ್ಥಳೀಯಗುರುವಿನಿಂದ ಕಲಿತ ವಿದ್ಯೆ ಶ್ರೇಷ್ಠವಾದುದು: ಹಿರಿಯ ವಕೀಲ ಕೆ ಆರ್ ಶಿವಶಂಕರ್

ಗುರುವಿನಿಂದ ಕಲಿತ ವಿದ್ಯೆ ಶ್ರೇಷ್ಠವಾದುದು: ಹಿರಿಯ ವಕೀಲ ಕೆ ಆರ್ ಶಿವಶಂಕರ್

ಗುರುಪೂರ್ಣಿಮೆ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಹಾಗೂ ಉಚಿತ ಕಣ್ಣಿನ ತಪಾಸಣೆ ಶಿಬಿರ

ಮೈಸೂರು: ಗುರು ಶಿಷ್ಯರ ಸಂಬಂಧ ಅನಾದಿ ಕಾಲದಿಂದಲೂ ಇದ್ದು,ಜ್ಞಾನದ ಭಂಡಾರವಾಗಿರುವ ಗುರುವಿನ ಬಳಿ ಕಲಿತ ವಿದ್ಯೆ ಶ್ರೇಷ್ಠವಾಗಿದೆ ಎಂದು ಹಿರಿಯ ವಕೀಲರಾದ ಕೆ ಆರ್ ಶಿವಶಂಕರ್ ಹೇಳಿದರು.

ನಗರದ ಟಿ ಕೆ ಲೇಔಟ್ ನಲ್ಲಿರುವ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದ ಪೀಠ, ಶೃಂಗೇರಿ, ಮೈಸೂರು ಶ್ರೀ ಶಂಕರಮಠ ಅಭಿನವ ಶಂಕರಾಲಯ ಹಾಗೂ ಶ್ರೀ ಗುರುರಾಘವೇಂದ್ರ ಸೇವಾ ಟ್ರಸ್ಟ್ ಮತ್ತು ಮೈಸೂರು ಜಿಲ್ಲಾ ಮತ್ತು ನಗರ ಬ್ರಾಹ್ಮಣ ಸಂಘ ಗುರುಪೂರ್ಣಿಮೆ ಅಂಗವಾಗಿ ಜೀವದಾರ ರಕ್ತ ನಿಧಿ ಕೇಂದ್ರದ ಸಹಯೋಗದೊಂದಿಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗೂ ಎ ಎಸ್ ಜಿ ಕಣ್ಣಿನ ಆಸ್ಪತ್ರೆಯ ಸಂಯುಕ್ತಶ್ರಯದಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬೆಳಕು ಹರಿಸಿ ವ್ಯಕ್ತಿಯನ್ನು ಸುಜ್ಞಾನದ ಕಡೆ ಕೊಂಡಯ್ಯುವ ಮಹಾನ್ ದೈವಿ ಗುರು. ಸನಾತನ ಧರ್ಮ ಸಂಸ್ಕೃತಿಯಲ್ಲಿ ತಂದೆ-ತಾಯಿ ನಂತರದ ಸ್ಥಾನವನ್ನು ಗುರುವಿಗೆ ನೀಡಲಾಗಿದೆ. ಕೇವಲ ಶಿಕ್ಷಣ ನೀಡಿದ ಗುರುಗಳಲ್ಲದೆ ನಮಗೆ ಸನ್ಮಾರ್ಗ ನೀತಿ ಮತ್ತು ನಮ್ಮ ಏಳಿಗೆ ಬಯಸುವ ಪ್ರತಿಯೊಬ್ಬರು ಗುರುಗಳಾಗಿರುತ್ತಾರೆ. ಪರಮಾತ್ಮಾನ  ಅವತಾರ ರೂಪವಾಗಿದ್ದಾರೆ. ಸ್ಥಳ, ಸಮಯ ಹಾಗೂ ವ್ಯಕ್ತಿ ಬದಲಾದರು ಗುರುವಿನ ಸ್ಥಾನ ಬದಲಾಗದು. ಗುರುವಿನ ಮಾರ್ಗದಲ್ಲಿ ನಡೆದು ಸುಜ್ಞಾನ ಬೆಳೆಸಿಕೊಂಡರೆ ಜೀವನ ಪಾವನವಾಗುತ್ತದೆ ಎಂದರು.

ನೂರಕ್ಕೂ ಹೆಚ್ಚು ಜನ ಉಚಿತ ಕಣ್ಣಿನ ತಪಾಸಣೆ ಶಿಬಿರ ಸದ್ಬಳಿಕೆ ಮಾಡಿಕೊಂಡರು ಹಾಗೂ 30 ಜನ ಸ್ವಯಂ ಪ್ರೇರಿತ ರಕ್ತದಾನವನ್ನು ನೀಡಿದರು.

ಇದೇ ಸಂದರ್ಭದಲ್ಲಿ ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ , ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಗೌರವಾಧ್ಯಕ್ಷರು ಎಸ್ ಜಯರಾಮ್, ಅಧ್ಯಕ್ಷರು ಸುಬ್ಬರಾವ್, ಕಾರ್ಯದರ್ಶಿ ವಿಜಯ್ ಕುಮಾರ್, ಸಹ ಕಾರ್ಯದರ್ಶಿ ಪದ್ಮನಾಭ ರಾವ್, ಖಜಾಂಚಿ ನರಹರಿ ರಾವ್, ಸಂಘದ ಟ್ರಸ್ಟಿಗಳಾದ ಕೆ ಆರ್ ಶಿವಶಂಕರ್, ಸತ್ಯಮೂರ್ತಿ, ಮುಕುಂದ, ಕೃಷ್ಣಮೂರ್ತಿ, ವೇಣುಗೋಪಾಲ್ ರಾವ್, ನರಸಿಂಹರಾಜು, ದ್ವಾರಕನಾಥ್, ಮುಕುಂದಾಚಾರ್, ನಂದನ್, ಹಾಗೂ ಇನ್ನಿತರರು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular