ನಾಗಮಂಗಲ: ಗುರುವಿನಿಂದ ಕಲಿತ ವಿದ್ಯೆಯನ್ನು ತಾನು ಅನುಭವಿಸಿ ತನ್ನ ಶಿಷ್ಯ ಪೀಳಿಗೆಗೂ ವರ್ಗಾಯಿಸುವುದೇ ನಿಜವಾದ ಶಿಕ್ಷಣ ಎಂದು ಡಾ. ಎ ಟಿ ಶಿವರಾಮುಅಭಿಪ್ರಾಯಪಟ್ಟರು.
ಅವರಿಂದು ತಾಲ್ಲೂಕಿನ ಬಿಜಿ ನಗರದ ಬಿಜಿಎಸ್ ಶಿಕ್ಷಣ ಮಹಾವಿದ್ಯಾಲಯಕ್ಕೆ ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ಶೈಕ್ಷಣಿಕ ಮತ್ತು ಮೌಲ್ಯಮಾಪನ ಮೇಲ್ವಿಚಾರಣ ಸಮಿತಿ (ಒಂಂಅ) ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿಕ್ಷಕರಾಗುತ್ತಿರುವ ನೀವು ಉತ್ಸಾಹದಿಂದ ಶ್ರೇಷ್ಠ ಗುರಿ ಹೊಂದಿದರೆ ಮುಂದೆ ಸಾರ್ಥಕ ಸಾಧನೆಯ ಹರಿಕಾರರಾಗುತ್ತೀರಿ, ಈ ನಿಟ್ಟಿನಲ್ಲಿ ಸಾಗಿ ಯಶಸ್ವಿ ಸಾಧಕರಾಗಿ ಎಂದು ಆಶಿಸಿದರು.
ಬೆಂಗಳೂರಿನ ಅಲ್ ಅಮೀನ್ ಬಿಎಡ್ ಕಾಲೇಜಿನ ಪ್ರಾಂಶುಪಾಲೆ ಡಾ. ಎಚ್ ಆರ್ ಸುಧಾ ಮಾತನಾಡಿ ಕಲಿಕೆಗೆ ಸದಾ ಪೂರಕ ವಾತಾವರಣ, ಶಿಸ್ತು ಬದ್ಧತೆ, ವಸ್ತ್ರ ಸಂಹಿತೆಯೊಂದಿಗೆ ಉದಾತ್ತ ಮನೋಭಾವ ವಿರಬೇಕು. ಇದರಿಂದ ವೃತ್ತಿಯ ಘನತೆ ಹಾಗೂ ಬದುಕಿನಲ್ಲೂ ಯಶಸ್ಸು ಸಾಧ್ಯವಾಗುತ್ತದೆ ಎಂದು ತರಬೇತಿ ಆಧಾರಿತ ಶಿಕ್ಷಣದ ರೂಪುರೇಷೆಗಳನ್ನು ತಿಳಿಸಿದರು.
ಒಂಂಅ ಸಮಿತಿಯ ಸದಸ್ಯರಾಗಿ ಆಗಮಿಸಿದ್ದ ಮೈಸೂರಿನ ಸೇಂಟ್ ಜೋಸೆಫ್ ಕಾಲೇಜಿನ ಪ್ರಾಂಶುಪಾಲೆ ಡಾ. ಪ್ರಿಯ ಮ್ಯಾಥ್ಯೂ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲೆ ಅನಿತಾ ಜಿ ಬಿ ಹಾಗೂ ಬಿಜಿಎಸ್ ಕಾಲೇಜಿನ ಪ್ರಾಧ್ಯಾಪಕ ಎ ಸಿ ದೇವಾನಂದ್ ಇವರು ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳ ದಾಖಲೆಗಳನ್ನು ಪರಿಶೀಲಿಸಿ ಮಾತನಾಡಿ ಶೈಕ್ಷಣಿಕ ಪ್ರಗತಿಯ ಉನ್ನತಿಗೆ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಸಂಯೋಜಕರಾದ ವಿ ಲೋಕೇಶ್ ಕುಮಾರ್, ಪ್ರಾಧ್ಯಾಪಕರುಗಳಾದ ಎ ಎಚ್ ಗೋಪಾಲ್, ವಿ ಪುಟ್ಟಸ್ವಾಮಿ, ಎಂ ಶೋಭಾ, ಟಿ ಎನ್ ಶ್ರೀನಿವಾಸ್, ವಿ ಹರೀಶ್, ರವಿಕುಮಾರ್, ಸಿ ಎಲ್ ಶಿವಣ್ಣ, ಜಿ ಹಂಪೇಶ್ ಹಾಗೂ ಇತರರಿದ್ದರು.