ಕೊಡಗು: ಕೊಡಗಿನಲ್ಲಿ ಆನೆ ದಾಳಿ ಮುಂದುವರೆದಿದ್ದು, ಕಾರ್ಮಿಕ ಮಹಿಳೆ ಗಾಯಗೊಂಡಿರುವ ಘಟನೆ ವೀರಾಜಪೇಟೆ ತಾ ಅಮ್ಮತ್ತಿ ಕಣ್ಣಂಗಾಲ ಗ್ರಾಮದಲ್ಲಿ ನಡೆದಿದೆ.
ಜಾನಕಿ(44) ಗಾಯಗೊಂಡ ಮಹಿಳೆ.
ಕೆ. ಅಯ್ಯಪ್ಪ ಅವರ ತೋಟದಲ್ಲಿ ಆನೆ ದಾಳಿ ನಡೆಸಿದ್ದು, ಮಹಿಳೆಗೆ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.