ಕೋಲಾರ: ಕೆಜಿಎಫ್ ನಗರದ ರಾಬರ್ಟ್ ಸನ್ ಪೇಟೆ ಮೆಟರ್ನಿಟಿ ಆಸ್ಪತ್ರೆ ಹಿಂಭಾಗದಲ್ಲಿನ ಆಸ್ಪತ್ರೆಯ ತ್ಯಾಜ್ಯಕ್ಕೆ ಕಿಡಿಗೇಡಿಗಳು ಬೆಂಕಿ ಹಾಕಿದ ಪರಿಣಾಮ ದುರ್ವಾಸನೆಯ ಹೊಗೆಯಿಂದ ರೋಗಿಗಳು ಪರದಾಡಿದ್ದಾರೆ.
ಆಸ್ಪತ್ರೆ ತ್ಯಾಜ್ಯಕ್ಕೆ ಬೆಂಕಿ ಹಾಕಿರುವ ಹಿನ್ನೆಲೆ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿದೆ. ಹೊಗೆಯಿಂದಾಗಿ ಮಕ್ಕಳು ಹಾಗೂ ಸ್ಥಳೀಯರ ಪರದಾಡಿದ್ದಾರೆ.
ನಗರಸಭೆ ನಿರ್ಲಕ್ಷ್ಯ ದಿಂದ ಈ ಅವಾಂತರ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.