Friday, April 11, 2025
Google search engine

Homeರಾಜ್ಯಕೋಲಾರ: ಕೆಎಸ್ ​ಆರ್ ​ಟಿಸಿ ಬಸ್ ಕಂಡಕ್ಟರ್ ಆತ್ಮಹತ್ಯೆ

ಕೋಲಾರ: ಕೆಎಸ್ ​ಆರ್ ​ಟಿಸಿ ಬಸ್ ಕಂಡಕ್ಟರ್ ಆತ್ಮಹತ್ಯೆ

ಕೋಲಾರ: ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಉಪ್ಪುಕುಂಟೆ ಗ್ರಾಮದಲ್ಲಿ ಕೆಎಸ್ ​ಆರ್ ​ಟಿಸಿ ಬಸ್ ಕಂಡಕ್ಟರ್ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಉಪ್ಪುಕುಂಟೆ ಗ್ರಾಮದ ಸೋಮಾಚಾರಿ (50) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ‌.

ಮೃತ ಕಂಡಕ್ಟರ್​ ಇತ್ತೀಚೆಗೆ ಪೆರಾಲಿಸಿಸ್ ಕಾಯಿಲೆಗೆ ತುತ್ತಾಗಿದ್ದರು. ಈ ಮಧ್ಯೆ ಕೆಲಸದ ವೇಳೆ ಶ್ರೀನಿವಾಸಪುರ ಡಿಪೋ ಮ್ಯಾನೇಜರ್ ವೆಂಕಟೇಶ್ ಎಂಬುವವರು ಉದ್ದೇಶಪೂರ್ವಕವಾಗಿ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.

ಇದರಿಂದ ಮಾನಸಿಕವಾಗಿ ನೊಂದಿದ್ದ ಸೋಮಾಚಾರಿ ಅವರು, ಇಂದು(ಜು.21) ಬೆಳಗಿನ ಜಾವ ಅವರ ತೋಟದಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕುರಿತು ಶ್ರೀನಿವಾಸಪುರ ಪೊಲೀಸ್ ಠಾಣಾ‌ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular