Thursday, April 17, 2025
Google search engine

Homeಅಪರಾಧಕೋಲಾರ: ಕೋದಂಡ ರಾಮಸ್ವಾಮಿ ದೇವಾಲಯದಲ್ಲಿ ಕಳ್ಳತನ ಯತ್ನ

ಕೋಲಾರ: ಕೋದಂಡ ರಾಮಸ್ವಾಮಿ ದೇವಾಲಯದಲ್ಲಿ ಕಳ್ಳತನ ಯತ್ನ

ಕೋಲಾರ : ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪ ಇರುವ ಅತ್ಯಂತ ಪುರಾತನ ದೇವಾಲಯವಾದ ಶ್ರೀ ಕೋದಂಡರಾಮ ಸ್ವಾಮಿ ದೇವಾಲಯದಲ್ಲಿ ನಿನ್ನೆ ರಾತ್ರಿ ಕಳ್ಳರು ತಮ್ಮ ಕೈಚಳಕ ಪ್ರದರ್ಶಿಸಿದ್ದಾರೆ.

ನಗರದ ಸಂತೇ ಮೈದಾನದ ಸನಿಹದಲ್ಲೇ ಇರುವ ಈ ದೇವಾಲಯಕ್ಕೆ ಒಳಹೊಕ್ಕಿರುವ ಕಳ್ಳರು ಮುಖ್ಯ ದ್ವಾರದ ಮರದ ಬಾಗಿಲನ್ನು ಬಲವಾದ ಆಯುಧದಿಂದ ಮೀಟಿರುವ ಕಳ್ಳರು ಹಣಕ್ಕಾಗಿ ಹುಂಡಿಯನ್ನು ಹುಡಿಕಿದ್ದಾರೆ. ದೇವಾಲಯದಲ್ಲಿನ ಹುಂಡಿಗಾಗಿ ಓಡಾಡಿ ಏನೂ ಸಿಗದ ಕಾರಣ ಬಾಗಿಲು ಮುಚ್ಚಿ ಪರಾರಿಯಾಗಿದ್ದಾರೆ.

ಎಂದಿನಂತೆ ಅರ್ಚಕರು ದೇವಾಲಯದ ಬಾಗಿಲು ತೆಗೆಯಲು ಹೋದಾಗ ಘಟನೆ ನಡೆದಿರುವುದು ಕಂಡು ಬಂದಿದೆ.

ಸ್ಠಳಕ್ಕೆ ಗಲ್ ಪೇಟೆ ಸಬ್‌ಇನ್ಸ್‌ಪ್ಪೆಕ್ಟರ್ ಅರುಣ್ ಗೌಡ ಪಾಟೀಲ್ ಮತ್ತವರ ತಂಡ ಭೇಟಿ ನೀಡಿದ್ದು ಸುತ್ತ ಮುತ್ತಲ ಅಂಗಡಿ ಮುಗ್ಗಟ್ಟುಗಳಲ್ಲಿ ಸಿಸಿ ಕ್ಯಾಮರಾ ಪರಿಶೀಲಿಸುತ್ತಿದ್ದು ಸ್ಥಳಕ್ಕೆ ಬೆರಳಚ್ಚು ತಜ್ಞರನ್ನು ಕರೆಸಲಾಗಿದೆ.

RELATED ARTICLES
- Advertisment -
Google search engine

Most Popular