Monday, April 21, 2025
Google search engine

Homeರಾಜ್ಯಕೋಲಾರ ಟು ಬೆಂಗಳೂರು ಇಂಜಿನಿಯರ್ ಪಾದಯಾತ್ರೆ

ಕೋಲಾರ ಟು ಬೆಂಗಳೂರು ಇಂಜಿನಿಯರ್ ಪಾದಯಾತ್ರೆ

ಬೆಂಗಳೂರು: ರಾಜ್ಯದಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ೨ಬಿ ಮೀಸಲಾತಿಯನ್ನು ಮರುಸ್ಥಾಪಿಸುವಂತೆ ಕೋರಿ ಸಾಫ್ಟ್‌ವೇರ್ ಟೆಕ್ಕಿ ೨೬ ವರ್ಷದ ಫಾರೂಕ್ ಜುನೈದಿ ಕೋಲಾರದಿಂದ ಬೆಂಗಳೂರಿಗೆ ಪಾದಯಾತ್ರೆ ಕೈಗೊಂಡಿದ್ದಾರೆ.

ಬಸವರಾಜ ಬೊಮ್ಮಾಯಿ ನೇತೃತ್ವದ ಹಿಂದಿನ ಬಿಜೆಪಿ ಸರ್ಕಾರ ಮೀಸಲಾತಿಯನ್ನು ರದ್ದುಗೊಳಿಸಿತ್ತು. ಮೀಸಲಾತಿಯನ್ನು ರದ್ದುಪಡಿಸಿದ ನಂತರ, ಸಮುದಾಯದ ಅನೇಕ ವಿದ್ಯಾರ್ಥಿಗಳು ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ ಮತ್ತು ಮೆರಿಟ್ ಆಧಾರಿತ ವಿದ್ಯಾರ್ಥಿವೇತನದಿಂದ ವಂಚಿತರಾಗಿದ್ದಾರೆ ಎಂದು ಜುನೈದಿ ಹೇಳಿದ್ದಾರೆ.
ಅಲ್ಲದೆ ಸಾಲ ಪಡೆದು ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೂ ಇದು ಪರಿಣಾಮ ಬೀರಿದ್ದು, ದೀರ್ಘಾವಧಿಯಲ್ಲಿ ಸಮುದಾಯ ಸಂಕಷ್ಟಕ್ಕೆ ಸಿಲುಕಲಿದೆ. ಇದು ಪಾದಯಾತ್ರೆ ಕೈಗೊಳ್ಳುವಂತೆ ಪ್ರೇರೇಪಿಸಿತ್ತು ಎಂದು ಜುನೈದಿ ಹೇಳಿದ್ದಾರೆ.


ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಎಂಜಿನಿಯರ್‌ಗಳ ಸಂಘದ ಅಧ್ಯಕ್ಷರೂ ಆಗಿರುವ ಜುನೈದಿ ೨ಬಿ ವರ್ಗದಡಿ ಮುಸ್ಲಿಮರಿಗೆ ಅಲ್ಪಸಂಖ್ಯಾತ ಮೀಸಲಾತಿಯನ್ನು ಮರುಸ್ಥಾಪಿಸಲು ನಾನು ಫೆಬ್ರವರಿ ೨೪ರಂದು ಕೋಲಾರದಿಂದ ಬೆಂಗಳೂರಿಗೆ ಮತ್ತು ಜಾಗೃತಿ ಮೂಡಿಸಲು ಪಾದಯಾತ್ರೆಯನ್ನು ಪ್ರಾರಂಭಿಸಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಮತ್ತು ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಅವರನ್ನು ಭೇಟಿ ಮಾಡಿ ತಮ್ಮ ಪ್ರಸ್ಥಾಪನೆಯನ್ನು ನೀಡಲು ಯೋಜಿಸಿದ್ದಾರೆ.

ಮುಸ್ಲಿಮರಿಗೆ ಶೇಕಡಾ ೪ರಷ್ಟು ಮೀಸಲಾತಿ ನೀಡುತ್ತಿದ್ದ ೨ಬಿ ಕೋಟಾವನ್ನು ಮರುಸ್ಥಾಪಿಸುವುದು ಮಾತ್ರವಲ್ಲದೆ, ಅದನ್ನು ಶೇಕಡಾ ೧೦ಕ್ಕೆ ಹೆಚ್ಚಿಸುವುದು, ಜೊತೆಗೆ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಶೇಕಡಾ ೭ರಷ್ಟು ಸೂಪರ್ನ್ಯೂಮರಿಕ್ ಕೋಟಾಗೂ ಸಹ ಆಗ್ರಹಿಸುತ್ತೇನೆ ಎಂದು ಜುನೈದಿ ಹೇಳಿದರು.

RELATED ARTICLES
- Advertisment -
Google search engine

Most Popular