ಚಾಮರಾಜನಗರ: ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಪ್ರಯಾಣಿಸುತ್ತಿದ್ದ ಕಾರು ಮೈಸೂರಿನ ಹೊರವಲಯದಲ್ಲಿ ಅಪಘಾತಕ್ಕೀಡಾಗಿರುವ ಘಟನೆ ನಿನ್ನೆ ರಾತ್ರಿ ೧೧.೫೦ ರ ಸುಮಾರಿಗೆ ನಡೆದಿದೆ. ಘಟನೆಯಲ್ಲಿ ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ, ಶಾಸಕರ ಆಪ್ತ ಸಹಾಯಕ ಹೊಂಗನೂರು ಚೇತನ್ ಮತ್ತು ವಾಹನ ಚಾಲಕ ಸತೀಶ್ ಪವಾಡಸದೃಶ ರೀತಿಯಲ್ಲಿ ಅಪಾಯದಿಂದ ಪಾರಾಗಿದ್ದಾರೆ.
ಕೊಳ್ಳೇಗಾಲದಿಂದ ಶಾಸಕರು ಮೈಸೂರಿನತ್ತ ತೆರಳುತ್ತಿದ್ದಾಗ ಕಾರಿನ ಟೈರ್ ಬ್ಲಾಸ್ಟ್ ಆದ ಪರಿಣಾಮ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆಬದಿ ಹಳ್ಳಕೆ ಇಳಿದು ನಿಂತಿದೆ. ಯಾವುದೇ ಬೇರೆ ವಾಹನಗಳು ಆ ವೇಳೆ ಇಲ್ಲದಿರುವುದು ಜೊತೆಗೆ ಕಾರು ರಸ್ತೆಬದಿಯ ಹಳ್ಳಕ್ಕೆ ಬಂದು ನಿಂತಿದ್ದರಿಂದ ಎಲ್ಲರೂ ಅಪಾಯದಿಂದ ಪಾರಾಗಿದ್ದೇವೆ. ಯಾರಿಗೂ ಯಾವ ಅಪಾಯವೂ ಆಗಿಲ್ಲ ಎಂದು ಶಾಸಕರ ಆಪ್ತ ಕಾರ್ಯದರ್ಶಿ ಚೇತನ್ ತಿಳಿಸಿದ್ದಾರೆ.