ಕೊಪ್ಪಳ: ವಿದೇಶದಿಂದ ಗಾಂಜಾ ತಂದು ಮಾರುತ್ತಿದ್ದಂತ ಎಂಟು ಮಂದಿಯನ್ನು ಕೊಪ್ಪಳದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ಪೊಲೀಸರು ವಿದೇಶದಿಂದ ಗಾಂಜಾ ತಂದು ಮಾರಾಟ ಮಾಡುತ್ತಿದ್ದಂತ ಎಂಟು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರನ್ನು ಸೌಜೇಶ್, ಸಲೀಂ, ಬಿ.ದುರ್ಗಾ, ಬಾದ್ ಷಾ, ಮದನ್, ಸೂರ್ಯ ಪ್ರತಾಪ್ ರೆಡ್ಡಿ, ಹಮೀದ್ ಮತ್ತು ಮಣಿಕಂಠ ಎಂಬುದಾಗಿ ತಿಳಿದು ಬಂದಿದೆ.
ಬಂಧಿತ ಆರೋಪಿಗಳಿಂದ 18 ಲಕ್ಷ ಮೌಲ್ಯದ 1,806 ಗ್ರಾಂ ಹೈಡ್ರೋ ಗಾಂಜಾವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಥೈಲ್ಯಾಂಡ್ ನಿಂದ ಸಲೀಂ ಗಂಗಾವತಿಗೆ ಗಾಂಜಾ ತಂದಿದ್ದನು. ಪಾರ್ಟಿಗಾಗಿ ಥೈಲ್ಯಾಂಡ್ ನಿಂದ ಗಾಂಜಾವನ್ನು ಸಲೀಂ ತಂದಿದ್ದಾಗಿ ತಿಳಿದು ಬಂದಿದೆ. ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.