ಮೈಸೂರು: ಕನ್ನಡಿಗರ ಪ್ರಜಾನುಡಿ ದಿನಪತ್ರಿಕೆ ಸಂಪಾದಕರಾದ ವೀರಭದ್ರಪ್ಪ ಬಿಸ್ಲಳ್ಳಿ ಅವರ ಪತ್ನಿ ಕೆ.ಪಿ.ವೀಣಾ ನಿಧನ(47) ಅವರು ಅನಾರೋಗ್ಯದಿಂದ ಶುಕ್ರವಾರ ಸಂಜೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ವಕೀಲರಾಗಿದ್ದ ವೀಣಾ ಅವರಿಗೆ ಪತಿ ವೀರಭದ್ರಪ್ಪ ಬಿಸ್ಲಳ್ಳಿ, ಪುತ್ರ ಆಶಿಕ್ ಸೇರಿದಂತೆ ಅಪಾರ ಬಂಧು ಬಳಗ ಇದ್ದಾರೆ. ಅಂತ್ಯಕ್ರಿಯೆ ಶನಿವಾರ ಮಧ್ಯಾಹ್ನ 12ಗಂಟೆಗೆ ಬೆಂಗಳೂರಿನ ಬನಶಂಕರಿಯ ಲಿಂಗಾಯತರ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ವಿವರಕ್ಕೆ ಮೊ.9448088534 ಸಂಪರ್ಕಿಸುವುದು.