Tuesday, April 8, 2025
Google search engine

Homeರಾಜ್ಯಕೆಪಿಎಸ್ ಸಿ ಪರೀಕ್ಷೆಯನ್ನ ಒಂದು ತಿಂಗಳು ಮುಂದೂಡಿ-ವೈ.ಎಸ್.ವಿ ದತ್ತಾ ಆಗ್ರಹ

ಕೆಪಿಎಸ್ ಸಿ ಪರೀಕ್ಷೆಯನ್ನ ಒಂದು ತಿಂಗಳು ಮುಂದೂಡಿ-ವೈ.ಎಸ್.ವಿ ದತ್ತಾ ಆಗ್ರಹ

ಬೆಂಗಳೂರು: ಕೆಪಿಎಸ್ ಸಿ ನಡೆಸುತ್ತಿರೋ 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆ ನೇಮಕಾತಿ ಪರೀಕ್ಷೆಯನ್ನು ಒಂದು ತಿಂಗಳು ಮುಂದೂಡಿಕೆ ಮಾಡಬೇಕು. ಸಿಎಂ ಸಿದ್ದರಾಮಯ್ಯ ಪರೀಕ್ಷೆ ಮುಂದೂಡಲು ಆದೇಶ ಮಾಡಬೇಕು ಅಂತ ಜೆಡಿಎಸ್ ನಾಯಕ, ಮಾಜಿ ಶಾಸಕ ವೈ.ಎಸ್.ವಿ ದತ್ತಾ ಆಗ್ರಹಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೆಪಿಎಸ್ ಸಿ ಅಂದರೆ ಪರೀಕ್ಷೆಗಳ ನಿಧಾನವಾಗಿ ಮಾಡೋದಕ್ಕೆ ಹೆಸರುವಾಸಿ. ಆದರೆ ಈಗ 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಪರೀಕ್ಷೆ ನಡೆಸಲು ಎಲ್ಲಿಲ್ಲದ ಅವಸರ ಮಾಡ್ತಿದೆ. ಆಗಸ್ಟ್ 25ಕ್ಕೆ ಬ್ಯಾಂಕಿಂಗ್ ಪರೀಕ್ಷೆ ಇದೆ. ಹೀಗಾಗಿ ಒಂದು ತಿಂಗಳು ಪರೀಕ್ಷೆ ಮುಂದೂಡಲು ಅಭ್ಯರ್ಥಿಗಳು ಮನವಿ ಮಾಡಿದ್ರು‌. ಸಿಎಂ ಮಧ್ಯೆ ಪ್ರವೇಶದಿಂದ ಆಗಸ್ಟ್‌ 25ಕ್ಕೆ ಪರೀಕ್ಷೆ ರದ್ದು ಮಾಡಿ ಆಗಸ್ಟ್ 27ಕ್ಕೆ ಪರೀಕ್ಷೆ ಮಾಡೋದಾಗಿ ಕೆಪಿಎಸ್ ಸಿ ಹೇಳ್ತಿದೆ. ಇದರಿಂದ 1 ಲಕ್ಷ ಅಭ್ಯರ್ಥಿಗಳಿಗೆ ಅನ್ಯಾಯ ಆಗ್ತಿದೆ. 1 ತಿಂಗಳು ಪರೀಕ್ಷೆ ಮುಂದೂಡಿ ಅಂತ ಮನವಿ ಮಾಡಿದರೂ ಕೇಳುತ್ತಿಲ್ಲ ಅಂತ ಆರೋಪ ಮಾಡಿದರು.

ಸಿಎಸ್ (ರಾಜ್ಯ ಮುಖ್ಯಕಾರ್ಯದರ್ಶಿ) ಅವರನ್ನು ಕೇಳಿದ್ರೆ ಈಗಾಗಲೇ ಪ್ರಶ್ನೆ ಪತ್ರಿಕೆ ಮುದ್ರಣ ಆಗಿದೆ. ಪರೀಕ್ಷೆ ಆಗಲೇಬೇಕು ಅಂತ ಹೇಳ್ತಿದ್ದಾರೆ. ಪರೀಕ್ಷೆಗೆ ಒಂದು ವಾರ ಮುಂಚೆ ಪ್ರಶ್ನೆ ಪತ್ರಿಕೆ ಮುದ್ರಣ ಆಗಬೇಕು. ಇಷ್ಟು ಬೇಗ ಯಾಕೆ ಕೆಪಿಎಸ್ ಸಿ ಪ್ರಶ್ನೆ ಪತ್ರಿಕೆ ಮುದ್ರಣ ಮಾಡಿತು‌. ಇದು ಅನುಮಾನಕ್ಕೆ ಕಾರಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಅನೇಕ ಜನ ಕೆಪಿಎಸ್ ಸಿ ಸದಸ್ಯರು ನಿವೃತ್ತಿ ಆಗ್ತಿದ್ದಾರೆ. ನಿವೃತ್ತಿ ಆಗೋದ್ರೊಳಗೆ ಪರೀಕ್ಷೆ ಮುಗಿಸುವ ಪ್ಲ್ಯಾನ್ ಮಾಡ್ತಿದ್ದಾರೆ ಅನ್ನೋ ಅನುಮಾನ ಇದೆ. ಇದೆಲ್ಲ ನೋಡಿದರೆ ಕೆಪಿಎಸ್ ಸಿ ಮೇಲೆ ದೊಡ್ಡ ಅನುಮಾನ ಬರ್ತಿದೆ ಅಂತ ತಿಳಿಸಿದರು. ಒಂದು ತಿಂಗಳು ಪರೀಕ್ಷೆ ಮುಂದೂಡಬೇಕು‌. ಸಿಎಂ ಸಿದ್ದರಾಮಯ್ಯ ಮಧ್ಯೆ ಪ್ರವೇಶ ಮಾಡಿ ಸಮಸ್ಯೆ ಪರಿಹಾರ ಮಾಡಬೇಕು ಅಂತ ಸಿಎಂಗೆ ಒತ್ತಾಯ ಮಾಡಿದರು.

RELATED ARTICLES
- Advertisment -
Google search engine

Most Popular