ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್ಸಿ), ೨೦೨೩-೨೪ನೆ ಸಾಲಿನ ಗೆಜೆಟೆಡ್ ಪ್ರೋಬೆಷನರಿ(ಕೆಎಎಸ್) ಗ್ರೂಪ್ ಎ’ ಮತ್ತುಬಿ’ ವೃಂದದ ೩೮೪ ಹುದ್ದೆಗಳ ನೇಮಕಾತಿ ಮುಖ್ಯ ಪರೀಕ್ಷೆಗೆ ನಿಗದಿ ಮಾಡಿದ್ದ ದಿನಾಂಕವನ್ನು ಮುಂದೂಡಲಾಗಿದೆ ಎಂದು ಪ್ರಕಟಿಸಿದೆ.
ಕೆಪಿಎಸ್ಸಿ ಕಾರ್ಯದರ್ಶಿ ಪ್ರಕಟಣೆ ಹೊರಡಿಸಿದ್ದು, ಮುಖ್ಯ ಪರೀಕ್ಷೆಯನ್ನು ಮಾರ್ಚ್ ೨೮, ೨೯, ಎಪ್ರಿಲ್ ೧ ಹಾಗೂ ೨ರಂದು ನಡೆಸಲು ಕೆಪಿಎಸ್ಸಿ, ೨೦೨೫ರ ಫೆಬ್ರವರಿ ೧೩ರಂದು ಪ್ರಕಟಿಸಿದ್ದ ಅಧಿಸೂಚನೆಯಲ್ಲಿ ತಿಳಿಸಿತ್ತು. ಆದರೆ, ಇದೀಗ ಕಾರಣಾಂತರಗಳಿಂದಾಗಿ ಪರೀಕ್ಷೆ ಮುಂದೂಡಿರುವುದಾಗಿ ಹೇಳಿಕೆ ಬಿಡುಗಡೆ ಮಾಡಿದೆ. ಅಲ್ಲದೆ, ಗೆಜೆಟೆಡ್ ಪ್ರೋಬೆಷನರಿ ಪರೀಕ್ಷೆಯ ಪರಿಷ್ಕೃತ ದಿನಾಂಕವನ್ನು ಶೀಘ್ರದಲ್ಲೇ ಆಯೋಗದ ಅಂತರ್ಜಾಲದಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದೆ.