Saturday, April 12, 2025
Google search engine

Homeರಾಜ್ಯಸುದ್ದಿಜಾಲಕೆ.ಆರ್.ನಗರ: ವೈಭವದಿಂದ ನಡೆದ ಮಲೆ ಮಹದೇಶ್ವರ ದೇವಾಲಯದ ೫೪ನೇ ವರ್ಷದ ಉತ್ಸವ

ಕೆ.ಆರ್.ನಗರ: ವೈಭವದಿಂದ ನಡೆದ ಮಲೆ ಮಹದೇಶ್ವರ ದೇವಾಲಯದ ೫೪ನೇ ವರ್ಷದ ಉತ್ಸವ

ವರದಿ : ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಪಟ್ಟಣದ ಬಸವೇಶ್ವರ ಬಡಾವಣೆಯಲ್ಲಿರುವ ಮಲೆ ಮಹದೇಶ್ವರ ದೇವಾಲಯದ ೫೪ನೇ ವರ್ಷದ ಉತ್ಸವ ಸೋಮವಾರ ಅತ್ಯಂತ ವೈಭವದಿಂದ ನಡೆಯಿತು.

ಉತ್ಸವಕ್ಕೆ ಗಾವಡಗೆರೆ ಗುರುಲಿಂಗ ಜಂಗಮ ಮಠದ ನಟರಾಜ ಶ್ರೀಗಳು, ಕರ್ಪೂರವಳ್ಳಿ ಜಂಗಮ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ಬೆಟ್ಟದಪುರ ವಿರಕ್ತ ಮಠದ ಚನ್ನವೀರದೇಶಿಕೇಂದ್ರ ಸ್ವಾಮಿಗಳು, ಲಾಳನಹಳ್ಳಿ ಮಠದ ಶರಣೆ ಜಯದೇವಿ ತಾಯಿ ಮತ್ತು ಅರಕೆರೆ ವಿರಕ್ತ ಮಠದ ಸಿದ್ದೇಶ್ವರ ಸ್ವಾಮಿಗಳು ಚಾಲನೆ
ನೀಡಿದರು.

ಉತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅರಣ್ಯ ಸಚಿವರು ಆದ ಅಖಿಲ ಭಾರತ
ವೀರಶೈವ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಈಶ್ವರ ಬಿ.ಖಂಡ್ರೆ ನಮ್ಮ ಪ್ರಾಚೀನ ಸಂಸ್ಕೃತಿ, ಸಂಪ್ರದಾಯಗಳ ಉಳಿವಿಗೆ ಜಾತ್ರೆ, ಉತ್ಸವ, ಧಾರ್ಮಿಕ ಮಹೋತ್ಸವಗಳು ಸಾಕ್ಷಿಯಾಗಿವೆ ಎಂದರು.

ಕಾರ್ತೀಕ ಮಾಸ ಬೆಳಕಿನ ಹಬ್ಬವಾಗಿದ್ದು ಅದು ನಮ್ಮಲ್ಲಿ ಇರುವ ಅಜ್ಞಾನವೆಂಬ ಅಂಧಕಾರವನ್ನು
ತೊಡೆದು ಹಾಕಿ, ಸುಜ್ಞಾನದ ಬೆಳಕನ್ನು ಹಚ್ಚುವ ಮಾಸವಾಗಿದ್ದು ಈ ಸಮಯದಲ್ಲಿ ವಿವಿಧ ಶಿವ
ದೇವಾಲಯಗಳಲ್ಲಿ ವಿಶೇಷ ಪೂಜೆ, ಅರ್ಚನೆ, ಲಕ್ಷ ದೀಪೋತ್ಸವ ಮತ್ತು ಉತ್ಸವಗಳು ನಡೆದು
ಧಾರ್ಮಿಕ ವಿಚಾರಗಳ ವಿನಿಮಯಗಳ ಮೂಲಕ ಸಹಬಾಳ್ವೆಯ ಮಹತ್ವ ಸಾರುತ್ತವೆ ಎಂದು
ಹೇಳಿದರು.

ಶಾಸಕ ಡಿ.ರವಿಶಂಕರ್ ಮಾತನಾಡಿ ಇಲ್ಲಿನ ಬಸವೇಶ್ವರ ಬಡಾವಣೆಯಲ್ಲಿ ನಡೆಯುವ ಕಡೆ ಕಾರ್ತಿಕ ಸೋಮವಾರದ ಮಹದೇಶ್ವರಸ್ವಾಮಿಯ ಉತ್ಸವಕ್ಕೆ ದಶಕಗಳ ಇತಿಹಾಸವಿದ್ದು ಪ್ರತಿ ವರ್ಷ ಸಾವಿರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಪೂಜೆ ಸಲ್ಲಿಸುತ್ತಿದ್ದು ಮುಂದಿನ ದಿನಗಳಲ್ಲಿ ಎಲ್ಲರೂ ಸೇರಿ ಉತ್ಸವವನ್ನು ಮತ್ತಷ್ಟು ವೈಭವದಿಂದ ಆಚರಿಸೋಣ ಎಂದರು.

ಉತ್ಸವದ ಅಂಗವಾಗಿ ಮುಂಜಾನೆಯಿoದಲೇ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿ ಭಕ್ತರಿಗೆ ಪ್ರಸಾದ ವಿತರಿಸಲಾಯಿತಲ್ಲದೆ ದೇವಾಲಯದ ಒಳಾಂಗಣವನ್ನು ಬಗೆಯ ಹೂಗಳಿಂದ ವಿಶೇಷವಾಗಿ ಅಲಂಕಾರ ಮಾಡುವುದರ ಜತೆಗೆ ಮಹದೇಶ್ವರಸ್ವಾಮಿಗೆ ಪುಷ್ಪಾಲಂಕಾರ ಮಾಡಲಾಗಿತ್ತು. ಈ ಸಂಧರ್ಭದಲ್ಲಿ ಭಕ್ತರು ಸರತಿ
ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ದೇವಾಲಯದ ಬಳಿಯಿಂದ ಹೊರಟ ಮಲೆ ಮಹದೇಶ್ವರ ಸ್ವಾಮಿಯ ಮುತ್ತಿನ ಪಲ್ಲಕ್ಕಿ ಉತ್ಸವ ಬಸವೇಶ್ವರ ಬಡಾವಣೆ, ಮೈಸೂರು-ಹಾಸನ ಮುಖ್ಯ ರಸ್ತೆ, ಬಜಾರ್ ರಸ್ತೆ, ೭ನೇ ರಸ್ತೆಯ ಮೂಲಕ ದೇವಾಲಯದವರೆಗೆ ಸಾವಿರಾರು ಮಂದಿ ಭಕ್ತರ ಜಯಘೋಷದ ನಡುವೆ ನಡೆಯಿತು.

ಮೆರವಣಿಗೆಯಲ್ಲಿ ನಂದಿಧ್ವಜ, ನಾಸಿಕ್‌ಬ್ಯಾಂಡ್, ಪೂಜಾಕುಣಿತ, ವೀರಭದ್ರಕುಣಿತ, ತಮಟೆ ಪ್ರದರ್ಶನ, ಚಂಡೆಮೇಳ, ಮಂಗಳವಾದ್ಯ, ಕಂಸಾಳೆ, ವೀರಗಾಸೆ, ಹುಲಿವೇಷ, ಡೊಳ್ಳುಕುಣಿತ, ಗೊಂಬೆಕುಣಿತ, ಯಕ್ಷಗಾನ ಮತ್ತು ಕೀಲುಕುದುರೆ, ಕಲಾವಿದರು ಎಲ್ಲರ ಗಮನ ಸೆಳೆದರು. ಸಂಜೆ ಬಸವೇಶ್ವರ ದೇವಾಲಯದ ಮುಂಬಾಗ ಕೊಂಡೋತ್ಸವ ನಡೆಸಲಾಯಿತು. ನಂತರ ಶಿವಾನುಭವ ಕಲ್ಯಾಣ ಮಂಟಪದ ಆವರಣದಲ್ಲಿ ಪಟಾಕಿ ಪ್ರದರ್ಶನ ನಡೆಸಿ ದೇವೀರಮ್ಮ ಶಿಶುವಿಹಾರದ ಮೈದಾನದಲ್ಲಿ ಸಾಲುಪಂಕ್ತಿ ಅನ್ನದಾಸೋಹ ನಡೆಸಲಾಯಿತ್ತಲ್ಲದೆ. ಈ ಸಂಧರ್ಭದಲ್ಲಿ ಕೆ.ಆರ್.ನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ೫೦ ಸಾವಿರಕ್ಕೂ ಅಧಿಕ ಮಂದಿ ಭಕ್ತರು ಪಾಲ್ಗೊಂಡಿದ್ದರು.

ಮಾಜಿ ಸಚಿವ ಸಾ.ರಾ.ಮಹೇಶ್ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿ ಉತ್ಸವ ಸಮಿತಿಯಿಂದ ಗೌರವ ಸ್ವೀಕರಿಸಿದರು.

ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಗಡ್ಡಮಹೇಶ್, ನವ ನಗರ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಪಿ.ರಮೇಶ್
ಕುಮಾರ್, ತಾ.ಪಂ.ಮಾಜಿ ಅಧ್ಯಕ್ಷ ಹಾಡ್ಯಮಹದೇವಸ್ವಾಮಿ ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನ ಮತ್ತು ಉತ್ಸವ ಸಮಿತಿಯ ಅಧ್ಯಕ್ಷ ಬೋಜರಾಜು, ಗೌರವಾಧ್ಯಕ್ಷ ಆರ್.ಹೆಚ್.ನಟರಾಜು, ಉಪಾಧ್ಯಕ್ಷ ಕೆ.ಎಸ್.ಸೋಮೇಶ್, ಕಾರ್ಯದರ್ಶಿ ಕೆ.ಬಿ.ಮಂಜುನಾಥ್, ಖಜಾಂಚಿ ಎ.ಎಸ್.ಗಣೇಶ್, ತಾಲೂಕು
ಕುರುಬರ ಸಂಘದ ಅಧ್ಯಕ್ಷ ಜೆ.ಶಿವಣ್ಣ, ಪುರಸಭೆ ಸದಸ್ಯರಾದ ಮಂಜುಳಚಿಕ್ಕವೀರು, ತೋಂಟದಾರ್ಯ,
ವೀಣಾವೃಷಬೇಂದ್ರ, ಕೆ.ಪಿ.ಪ್ರಭುಶಂಕರ್, ನಟರಾಜು, ಮಾಜಿ ಅಧ್ಯಕ್ಷ ಹರ್ಷಲತಾಶ್ರೀಕಾಂತ್ ಮತ್ತು ಸಮಿತಿ
ಪದಾಧಿಕಾರಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular