ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಕೆ.ಆರ್.ನಗರ ತಾಲೂಕಿನ ಮಳಲಿ ಅರಣ್ಯ ಶಾಖೆಗೆ ಸೇರಿದ ಹುರುಳಿಕಾಮೇನಹಳ್ಳಿ ಗ್ರಾಮದ ಬಳಿ
ಚಿರತೆ ಬೋನಿಗೆ ಬಿದ್ದಿದೆ. ಹಲವಾರು ದಿನಗಳಿಂದ ಈ ಭಾಗದಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿರತೆಯನ್ನು ಕಂಡು ಗ್ರಾಮಸ್ಥರು ಭಯ ಬೀತಿಗೊಂಡಿದ್ದರು . ಈ ಬಗ್ಗೆ ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ಧರು. ಈ ಹಿನ್ನಲೆಯಲ್ಲಿ ಕೆ.ಆರ್.ನಗರ ಅರಣ್ಯ ಇಲಾಖೆಯವರು ಸ್ಥಳ ಪರಿಶೀಲನೆ ನಡೆಸಿ ಚಿರತೆ ಸೆರೆಗೆ ಬೋನು ಇರಿಸಿದ್ದರು.

ಶುಕ್ರವಾರ ರಾತ್ರಿ ಬೋನಿಗೆ ಬಿದ್ದ ಸುಮಾರು ಮೂರು ವರ್ಷ ಪ್ರಾಯದ ಚಿರತೆಯನ್ನು ನಂತರ ಸುರಕ್ಷಿತವಾಗಿ ನಾಗರಹೊಳೆಗೆ ಅರಣ್ಯ ಬಿಡಲಾಯಿತು.
ಈ ಸಂದರ್ಭದಲ್ಲಿ ಕೆ.ಆರ್.ನಗರ ತಾಲೂಕು ಅರಣ್ಯಧಿಕಾರಿ ಹರಿಪ್ರಸಾದ್, ಹಾಗೂ ವಲಯದ ಇತರೆ ಅಧಿಕಾರಿಗಳಾದ ಪ್ರಸನ್ನ, ಸಂಪತ್, ಮಠದಕೊಪ್ಪಲು ಮಹದೇವ್ ,ಸುನೀಲ್,ಹಾಗೂ ಸಿಬ್ಬಂದಿ ಕಾಂತರಾಜು ,ಸುಭಾಶ್ ಇದ್ದರು.