Friday, April 4, 2025
Google search engine

Homeರಾಜ್ಯಸುದ್ದಿಜಾಲಕೆ.ಆರ್.ನಗರ: ತಾಲೂಕು ಒಕ್ಕಲಿಗರ ಸಂಘದ ಪದಾಧಿಕಾರಿಗಳು, ಸದಸ್ಯರು ಮತ್ತು ಮುಖಂಡರ ಸಭೆ

ಕೆ.ಆರ್.ನಗರ: ತಾಲೂಕು ಒಕ್ಕಲಿಗರ ಸಂಘದ ಪದಾಧಿಕಾರಿಗಳು, ಸದಸ್ಯರು ಮತ್ತು ಮುಖಂಡರ ಸಭೆ

  • ವರದಿ : ವಿನಯ್ ದೊಡ್ಡಕೊಪ್ಪಲು

ಕೆ.ಆರ್‌.ನಗರ : ಕೆ.ಆರ್.ನಗರ ತಾಲೂಕು ಒಕ್ಕಲಿಗರ ಸಂಘವನ್ನು ವಿಸರ್ಜನೆ ಮಾಡಿ ಹೊಸದಾಗಿ ಆಡಳಿತ ಮಂಡಳಿ ರಚಿಸುವ ಪರಮಾಧಿಕಾರವನ್ನು ಮಾಜಿ ಸಚಿವ ಸಾ.ರಾ. ಮಹೇಶ್ ಅವರಿಗೆ ನೀಡಲಾಯಿತು.

ಪಟ್ಟಣದ ಹೆಚ್‍.ಡಿ. ದೇವೇಗೌಡ ಸಮುದಾಯ ಭವನದಲ್ಲಿ ಭಾನುವಾರ ಸಾ.ರಾ. ಮಹೇಶ್ ನೇತೃತ್ವದಲ್ಲಿ ನಡೆದ ತಾಲೂಕು ಒಕ್ಕಲಿಗರ ಸಂಘದ ಪದಾಧಿಕಾರಿಗಳು, ಸದಸ್ಯರು ಮತ್ತು ಸಮಾಜದ ಮುಖಂಡರ ಸಭೆಯಲ್ಲಿ ಈ ನಿರ್ಧಾರ ಕೈಗೊಂಡು ನೂತನ ಆಡಳಿತ ಮಂಡಳಿಗೆ ಸಮರ್ಥರನ್ನು ನೇಮಿಸುವಂತೆ ಸಭೆಯಲ್ಕಿ ಹಾಜರಿದ್ದವರು ಮನವಿ ಮಾಡಿದರು.

ಸಭೆಯಲ್ಲಿ ಮಾತನಾಡಿದ ಬಹುತೇಕ ಮುಖಂಡರು ಸಮುದಾಯ ಭವನ ಸೂಕ್ತ ನಿರ್ವಹಣೆ ಇಲ್ಲದೆ ಆದಾಯಕ್ಕೆ ಕತ್ತರಿ ಬಿದ್ದಿದ್ದು ಅದನ್ನು ನಿರ್ವಹಿಸುವುದರ ಜತೆಗೆ ಸಂಘವನ್ನು ಸದೃಢವಾಗಿ ಕಟ್ಟಬೇಕೆಂದು ಸಲಹೆ ನೀಡಿದರು.
ಸಮಾಜದ ಮುಖಂಡರ ಸಲಹೆ ಆಲಿಸಿ ಮಾತನಾಡಿದ ಮಾಜಿ ಸಚಿವ ಸಾ.ರಾ.ಮಹೇಶ್ ಸಮಾಜದ ಪ್ರಮುಖರೊಂದಿಗೆ ಚರ್ಚಿಸಿ ನೂತನ ಆಡಳಿತ ಮಂಡಳಿ ನೇಮಕ ಮಾಡುವುದಾಗಿ ಘೋಷಿಸಿದರು.

ಸಮಾಜದ ಹಿತಕ್ಕೆ ಪೂರಕವಾಗಿ ಕೆಲಸ ಮಾಡುವವರನ್ನು ನೇಮಕ ಮಾಡಿ ಮುಂದಿನ ದಿನಗಳಲ್ಲಿ ಭವನ ನಿರ್ವಹಣೆ ಮಾಡಿ ಇತರ ಅಭಿವೃದ್ದಿ ಕೆಲಸ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಿದ್ದು ಇದಕ್ಕೆ ಸರ್ವರೂ ನೀಡಬೇಕೆಂದರು.

ಸಭೆಯ ನಿರ್ಣಯಕ್ಕೆ ಬದ್ದರಾದ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಟಿ.ಅಣ್ಣೇಗೌಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಈ ಸಂದರ್ಭದಲ್ಲಿ ರಾಷ್ಟ್ರಕವಿ ಕುವೆಂಪು ಅವರ 121 ನೇ ಜಯಂತಿ ಅಚರಿಸಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.

ನವ ನಗರ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಜಿ.ಪಂ.ಮಾಜಿ ಸದಸ್ಯ ಎಂ.ಟಿ.ಕುಮಾರ್, ಒಕ್ಕಲಿಗ ಸಮಾಜದ ಹಿರಿಯ ಮುಖಂಡರಾದ ಎಸ್.ಪಿ.ತಮ್ಮಯ್ಯ, ಡಾ.ಎಸ್.ಪಿ.ಯೋಗಣ್ಣ, ಮೆಡಿಕಲ್ ರಾಜಣ್ಣ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಟಿ‌.ಅಣ್ಣೇಗೌಡ, ಹಿರಿಯ ಉಪಾಧ್ಯಕ್ಷರಾದ ಮಿರ್ಲೆಶ್ರೀನಿವಾಸಗೌಡ, ಹೆಚ್.ಪಿ.ಪರಶುರಾಂ, ಕಾರ್ಯದರ್ಶಿ ಸಿ.ಎಸ್.ರಾಮಲಿಂಗು, ಎಂಡಿಸಿಸಿ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಮಂಜುಗೌಡ, ವಕೀಲ ಎ.ತಿಮ್ಮಪ್ಪ, ಒಕ್ಕಲಿಗರ ಸಮಾಜದ ಮುಖಂಡರಾದ ಎಸ್.ಎಸ್.ಸಂದೇಶ್, ಎಂ.ಜೆ.ರಮೇಶ್, ಎಂ.ಜೆ.ಕುಮಾರ್, ಕೆ.ಎಲ್.ರಮೇಶ್, ಹೆಚ್.ಪಿ.ಶಿವಣ್ಣ, ಹಳಿಯೂರುಮದುಚಂದ್ರ, ಅನೀಪ್ ಗೌಡ, ಬಿ.ರಮೇಶ್, ಬಿ.ಆರ್.ಕುಚೇಲ, ಹೆಚ್.ಕೆ.ಸುಜಯ್, ಎಸ್.ಟಿ.ಕೀರ್ತಿ, ಸಾ.ರಾ.ತಿಲಕ್, ಮಿರ್ಲೆಧನಂಜಯ್, ರಾಧಾಕೃಷ್ಣ, ರಾಮಪ್ರಸಾದ್, ನಿವೃತ್ತ ಮುಖ್ಯ ಶಿಕ್ಷಕ ಹೊಸೂರು ಕುಚೇಲ್ ಮತ್ತಿತರರು ಇದ್ದರು.

RELATED ARTICLES
- Advertisment -
Google search engine

Most Popular