- ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಶಿಕ್ಷಣ ಅದಾಲತ್ ಗುರು ಸ್ಪಂದನ ಕಾರ್ಯಕ್ರಮ ಕೃಷ್ಣರಾಜನಗರ ತಾಲೂಕಿನ ಕಾಳೇನಹಳ್ಳಿ ಆದರ್ಶ ವಿದ್ಯಾನಿಲಯದಲ್ಲಿ ಎರಡು ದಿನಗಳ ಕಾಲ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕಿನ ಎಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರಗಳಿಗೆ ಶಿಕ್ಷಣ ಅದಾಲತ್ ಮತ್ತು ಗುರು ಸ್ಪಂದನಾ ನಡೆಯಿತು .
ಸರ್ಕಾರದ ನಿರ್ದೇಶನದಂತೆ ತಾಲೂಕಿನ ಶಾಲಾ ಶಿಕ್ಷಣ ಇಲಾಖೆಯ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹ ಯೋಗದೊಂದಿಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಶಾಸಕರಾದ ಡಿ ರವಿಶಂಕರ್ ಉದ್ಘಾಟಿಸಿದರು.
ನಂತರ ಮಾತನಾಡಿದ ಶಾಸಕ ಡಿ.ರವಿಶಂಕರ್ ಶಿಕ್ಷಕರ ಕುಂದು ಕೊರತೆಗಳನ್ನು ಹಾಗೂ ಸೇವಾ ಸೌಲಭ್ಯಗಳನ್ನು ದೊರಕಿಸಿ ಕೊಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿ ಶಿಕ್ಷಕರು ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಿ ಕೊಂಡು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವಂತೆ ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಕೃಷ್ಣಪ್ಪ ಅವರ ನೇತೃತ್ವದಲ್ಲಿ ಎಲ್ಲಾ ಶಿಕ್ಷಕರ ಸೇವಾ ಪುಸ್ತಕಗಳ ಪರಿಶೀಲನೆ ಮತ್ತು ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳುವ ವ್ಯವಸ್ಥೆ ನಡೆಯಿತು
ಈ ಗುರು ಸ್ಪಂದನ ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಅಧ್ಯಕ್ಷರಾದ ಚೆನ್ನಂಗೆರೆ ಸಿ.ಎನ್. ಪ್ರಭು ಅವರಿಗೆ ಶಾಸಕ ಡಿ.ರವಿಶಂಕರ್ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಕೆ.ಆರ್.ನಗರ ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದ ಲಕ್ಕಿಕುಪ್ಪೆ ಶಂಕರೇಗೌಡ, ಕಲ್ಯಾಣಪುರ ರಾಜಶೇಖರ್, ಮಹಾದೇವ,ಲೋಕೇಶ್ ಬಿ.ಇ.ಓ ಕಚೇರಿಯ ವ್ಯವಸ್ಥಾಪಕ ವೇದವ್ಯಾಸಭಟ್ಟ, ಹಿರಿಯ ಅದೀಕ್ಷಕರಾದ ಲಕ್ಷ್ಮಣಗೌಡ, ಇಂದುಮತಿ, ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಿಕ್ಕಕೊಪ್ಪಲು ಸಿ ಎನ್ ಸ್ವಾಮಿ, ಖಜಾಂಚಿ ಕೆ.ಎಸ್.ನಾಗರಾಜ್, ಗೌರವಾಧ್ಯಕ್ಷರಾದ ಎಸ್. ಆರ್. ಸಿದ್ದಯ್ಯ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಪಿ ಭಾರತಿ, ಉಪಾಧ್ಯಕ್ಷರಾದ ಕೃಷ್ಣ ನಾಯಕ್, ಸಹದರ್ಶಿಯಾದ ಕಮಲಮ್ಮ, ಉಪಾಧ್ಯಕ್ಷರಾದ ಮೀನಾಕ್ಷಿ ಬಾಯಿ, ಕೆ.ಜೆ ಬೋಜೇಗೌಡ, ಜಿ.ರಮಾಮಣಿ , ಎಸ್.ಕೆ.ಸುರೇಶ್ , ಎಸ್ ಎಲ್.ರವಿ, ಎಂಜೆ.ವಿನೋಬಾ ಇದ್ದರು.