Saturday, April 19, 2025
Google search engine

Homeಸ್ಥಳೀಯಕೆ.ಆರ್.ನಗರ ಮತ್ತು ಸಾಲಿಗ್ರಾಮ ನನ್ನ ಎರಡು ಕಣ್ಣುಗಳು ಇದ್ದಹಾಗೆ

ಕೆ.ಆರ್.ನಗರ ಮತ್ತು ಸಾಲಿಗ್ರಾಮ ನನ್ನ ಎರಡು ಕಣ್ಣುಗಳು ಇದ್ದಹಾಗೆ


ಸಾಲಿಗ್ರಾಮ: ಕೆ.ಆರ್.ನಗರ ಮತ್ತು ಸಾಲಿಗ್ರಾಮ ೨ ತಾಲೂಕುಗಳು ನನ್ನ ಎರಡು ಕಣ್ಣುಗಳು ಇದ್ದಹಾಗೆ, ಈ ಅವಳಿ ತಾಲೂಕುಗಳನ್ನು ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಸಮಗ್ರವಾಗಿ ಅಭಿವೃದ್ಧಿ ಪಡಿಸುವುದು ನಮ್ಮ ಗುರಿಯಾಗಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಅವರು ತಾಲೂಕಿನ ಮಲುಗನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಕೃತಜ್ಞತಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ನನ್ನನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ ಗ್ರಾಮದ ಜನತೆಗೆ ನಾನು ಎಂದಿಗೂ ಆಭಾರಿಯಾಗಿರುತ್ತೇನೆ. ಗ್ರಾಮದ ಅಭಿವೃದ್ಧಿಯನ್ನು ಹಂತ ಹಂತವಾಗಿ ಮಾಡುವ ಮೂಲಕ ಸಮಗ್ರ ಅಭಿವೃದ್ಧಿ ಮಾಡಲಾಗುವುದು. ಗ್ರಾಮದ ಸಮಸ್ಯೆಗಳನ್ನು ಮುಂದಿನ ದಿನಗಳಲ್ಲಿ ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ಪರಿಹರಿಸುವ ಕೆಲಸವನ್ನು ಮಾಡಲಾಗುವುದು. ಮೊದಲಿಗೆ ಗ್ರಾಮದ ರಸ್ತೆಯ ಅಭಿವೃದ್ಧಿಗೆ ಆದ್ಯತೆಯನ್ನು ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಗ್ರಾಮಸ್ಥರುಗಳು ಶಾಸಕ ಡಿ.ರವಿಶಂಕರ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಿದರು.
ಶಾಸಕರಾಗಿ ಆಯ್ಕೆಯಾದ ನಂತರ ಗ್ರಾಮಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ ಶಾಸಕ ಡಿ.ರವಿಶಂಕರ್ ಅವರನ್ನು ಗ್ರಾಮಸ್ಥರು ಆತ್ಮೀಯವಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳು, ಕಾರ್ಯಕರ್ತರುಗಳು ಪಟಾಕಿ ಸಿಡಿಸಿ ಜಯ ಘೋಷಣೆಗಳನ್ನು ಮೊಳಗಿಸಿದರು.

ಗ್ರಾಮದಲ್ಲಿನ ವಿವಿಧ ದೇವಸ್ಥಾನಗಳಿಗೆ ಶಾಸಕರು ಭೇಟಿ ನೀಡಿ ಪೂಜಿಯನ್ನು ಸಲ್ಲಿಸಿದರು. ಸಭೆಯಲ್ಲಿ ತಾ.ಪಂ. ಮಾಜಿ ಅಧ್ಯಕ್ಷರಾದ ಹೆಚ್.ಟಿ.ಮಂಜಪ್ಪ, ಹಾಡ್ಯ ಮಹದೇವಸ್ವಾಮಿ, ಚಂದ್ರಶೇಖರ್, ಮಾಜಿ ಸದಸ್ಯ ಏ.ಟಿ.ಗೋವಿಂದೇಗೌಡ, ಗ್ರಾ. ಪಂ. ಸದಸ್ಯರಾದ ಶಿಲ್ಪ ಗಣೇಶ್, ಆಶಾ ರವಿ, ಯೋಗೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ಸಾಲಿಗ್ರಾಮ ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಭಾಕರ್, ಮುಖಂಡರುಗಳಾದ ಗಾಯನಳ್ಳಿ ನಟರಾಜ್, ಪರೀಕ್ಷಿತ್, ಲಕ್ಕಿಕುಪ್ಪೆ ಮಂಜೇಗೌಡ, ಮುಂಡೂರು ಸಂತೋಷ್, ದೊಡ್ಡ ಕೊಪ್ಪಲು ಶಂಕರೇಗೌಡ, ಕಾಂತರಾಜು, ಹೊನ್ನೇನಹಳ್ಳಿ ಜವರಯ್ಯ, ಮಲುಗನಹಳ್ಳಿ ಗ್ರಾಮದ ಮುಖಂಡರುಗಳಾದ ಡಿ.ದೇವರಾಜು, ನರೇಂದ್ರ, ಎಂ.ಎಸ್.ದೇವರಾಜು, ಮೂರ್ತಿ, ಶ್ರೀನಿವಾಸ, ಚಂದ್ರಶೇಖರ, ಕಾಂತರಾಜು, ಸಂತೋಷ್, ಸುದಿನ, ಸಂಪತ್, ಗೋವಿಂದ ಸೇರಿದಂತೆ ಹಲವರು ಇದ್ದರು.

RELATED ARTICLES
- Advertisment -
Google search engine

Most Popular