ಕೆ.ಆರ್.ನಗರ: ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕು ಆರೋಗ್ಯಾಧಿಕಾರಿಯಾಗಿ ಡಾ.ಡಿ.ನಟರಾಜ್ ಅವರು ಇಂದು ಸೋಮವಾರ ತಾಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ನಾಗೇಂದ್ರ ಹಾಗೂ ಡಾ.ಶಿವಶಂಕರ್, ಮಳಲಿ ಆಸ್ಪತ್ರೆ ವೈದ್ಯ ಡಾ.ರವಿಚಂದ್ರನ್, ತಾ. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ವಿ.ರಮೇಶ್ ಸೇರಿದಂತೆ ಸಿಬ್ಬಂದಿಗಳು ಪುಷ್ಪಗುಚ್ಚ ನೀಡಿ ಶುಭ ಕೋರಿದರು.
ಅಧಿಕಾರ ಸ್ವೀಕರಿಸಿ ಬಳಿಕ ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜು ಮಾತನಾಡಿ, ಕೆ.ಆರ್.ನಗರ ಮತ್ತು ಸಾಲಿಗ್ರಾಮ ಅವಳಿ ತಾಲ್ಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಯಾವುದೇ ದೂರು, ಸಮಸ್ಯೆಗಳು ಇದ್ದರೆ ತಿಳಿಸಿ, ಅದೇ ರೀತಿ ಸಮಸ್ಯೆ ಬಗೆ ಹರಿಸಲು ನಿಮ್ಮಗಳ ಸಹಕಾರ ಇರಲಿ ಚುನಾಯಿತ ಪ್ರತಿನಿಧಿಗಳಲ್ಲಿ ಮತ್ತು ಸಾರ್ವಜನಿಕರಲ್ಲಿ ಎಂದು ಮನವಿ ಮಾಡಿದರು.
ಸಂದರ್ಭದಲ್ಲಿ ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ನಾಗೇಂದ್ರ ಹಾಗು ಡಾ.ಶಿವಶಂಕರ್, ಮಳಲಿ ಆಸ್ಪತ್ರೆ ವೈದ್ಯ ಡಾ.ರವಿಚಂದ್ರನ್, ತಾ. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ವಿ.ರಮೇಶ್, ಇಲಾಖೆಯ ಸಿಬ್ಬಂದಿಗಳಾದ ಮಹೇಶ್ ಸಮುದ್ರ, ಗಂಗಾಧರ,ಆನಂದಕಿತ್ತೂರ್,ದುರ್ಗದತ್ತ,ಎಸ್.ಜೆ.ಮಹೇಶ್,ಶೃತಿ,ನಾಗವೇಣಿ,ಲತಾ,ಪಾರ್ವತಿ,ಲಕ್ಷ್ಮಿಬಾಯಿ, ಬೇಬಿರೇಖಾ,ಸಂತೋಷ್,ಹೇಮೇಸ್, ಸೇರಿದಂತೆ ಸಿಬ್ಬಂದಿಗಳು ಪುಷ್ಪಗುಚ್ಚ ನೀಡಿ ಶುಭ ಕೋರಿದರು.
ನಂತರ ನವ ನಗರ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಮಾಜಿ ನಿರ್ದೇಶಕ ಹೆಬ್ಬಾಳು ವೇಣು, ತಾಲೂಕು ಜಾದಳ ವಕ್ತಾರ ಕೆ.ಎಲ್ .ರಮೇಶ್, ಪೇಪರ್ ಶಿವಣ್ಣ, ಪುರಸಭೆ ಸದಸ್ಯರಾದ ಕೆ.ಎಲ್.ಜಗದೀಶ್, ಕೆ.ಪಿ.ಪ್ರಭುಶಂಕರ್, ಕಾಂಗ್ರೆಸ್ ಮುಖಂಡ ಗಡ್ಡಮಹೇಶ್, ವಕೀಲರಾದ ಶರತ್, ಸಾಗರ್, ಆರೋಗ್ಯ ರಕ್ಷ ಸಮಿತಿ ಸದಸ್ಯರಾದ ಕೆಂಚಿ ಮಂಜು,ಲೋಕೇಶ್, ಜಾದಳ ಮುಖಂಡರಾದ ರಂಗನಾಥ್,ನಿಂಗರಾಜು, ಅನೇಕರು ಹಾರ ಹಾಕಿ ಅಭಿನಂದಿಸಿ ಶುಭಾಶಯ ಕೋರಿದರು.