ಗರಡುಗಂಬ ವೃತ್ತದಲ್ಲಿ ವಖ್ಫ್ ಬಚಾವು ಆಂದೋಲನ ಸಭೆ
ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ನಮ್ಮ ಸಮುದಾಯವು ನಿರಂತರವಾಗಿ ತುಳಿತಕ್ಕೊಳಪಟ್ಟಿದೆ ಆದರೆ ವಖ್ಫ್ ಆಸ್ತಿ-ಪಾಸ್ತಿಯಿಂದ ಒಂದು ಚೂರು ಪ್ರಯೋಜನವನ್ನು ಪಡೆದುಕೊಂಡಿಲ್ಲ ಅದರ ವಖ್ಫ್ ಉಳಿವಿಗಾಗಿ ಆಂದೋಲನ ಮಾಡುತ್ತಿದ್ದು ಏಕೆಂದರೆ ನಮ್ಮ ಅಜ್ಜ-ತಾತಂದಿರು ಅಲ್ಲಾಹನ ಹೆಸರಿನಲ್ಲಿ ಮೀಸಲಿಟ್ಟ ಜಾಗಕ್ಕೆ ಇಂದು ಹೋರಾಟ ಮಾಡಲಾಗುತ್ತಿದೆ ಎಂದು ಸೋಶಿಯಲ್ ಡೆಮಾಕ್ರೆಟಿ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಸಂಯೋಜಕ ಫೈರೋಜ್ ಉಲ್ಲಾ ಷರೀಫ್ ತಿಳಿಸಿದರು.
ಪಟ್ಟಣದ ಗರಡುಗಂಬ ವೃತ್ತದಲ್ಲಿ ವಖ್ಫ್ ಬಚಾವು ಆಂದೋಲನ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ದೇಶದಲ್ಲಿ ನರೇಂದ್ರ ಮೋದಿ ಸರ್ಕಾರವು ವಖ್ಫ್ ತಿದ್ದುಪಡಿ ಕಾಯ್ದೆಯನ್ನು ಅನುಮೋದಿಸುವುದಕ್ಕಾಗಿ ಸಂಚುರೂಪಿಸುತ್ತಿದ್ದು ವಖ್ಫ್ ಸುಧಾರಣೆಯ ಹೆಸರಿನಲ್ಲಿ ಮುಸ್ಲಿಂ ಸಮುದಾಯದ ಸಂಪತ್ತುಗಳಿಗೆ ನಷ್ಟ ಉಂಟು ಮಾಡಲು ಯತ್ನಿಸುವ ಸಂವಿಧಾನಿಕ ವಿರೋಧಿ ವಖ್ಫ್ ತಿದ್ದುಪಡಿ ಮಸೂದೆ ಎಂದು ತಮ್ಮ ಆಕ್ರೋಶವನ್ನು ಹೊರ ಹಾಕಿದರು.
ವಖ್ಫ್ ಬೋರ್ಡಿನಲ್ಲಿ ಆಡಳಿತ ಮಾಡುವವರು ಈ ವಸ್ತುವನ್ನು ನಿಮ್ಮದು ಎಂದು ಭಾವಿಸಿ ಕಾರ್ಯ ನಿರ್ವಹಿಸುತ್ತಿದ್ದಾರೆ ಇಂದು ವಖ್ಫ್ ನ ಆಸ್ತಿ-ಪಾಸ್ತಿ ಒಂದು ಇಂಚು ಕೂಡ ಫ್ಯಾಸಿಸ್ಟ್ ಶಕ್ತಿಗಳ ಕೈಗೆಟ್ಟುತ್ತಿರಲಿಲ್ಲ ಆದರೆ ಇದು ತುಂಬಾ ದುಃಖಕರ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ವಖ್ಫ್ ಬೋರ್ಡ್ ಮುಸ್ಲಿಂ ಸಮುದಾಯದ ಮಕ್ಕಳ ಏಳಿಗೆಗಾಗಿ ಇದೆ. ಇಲ್ಲಿಗೆ ಅನೇಕ ಮುಸ್ಲಿಂ ಸಮದಾಯದ ಮುಖಂಡರು ತಮ್ಮ ಆಸ್ತಿಯನ್ನು ದಾನಮಾಡಿದ್ದಾರೆ.
ವಕ್ಫ್ ಬೋರ್ಡ್ ಆಸ್ತಿ 20 ಕೋಟಿ ಭಾರತೀಯ ಮುಸ್ಲಿಂ ಸಮುದಾಯಕ್ಕೆ ಸೇರಿದ್ದು ಈ ಕಾಯ್ದೆಗೆ ತಿದ್ದುಪಡಿ ತಂದರೆ ಮುಸ್ಲಿಂ ಸಮುದಾಯ ಮತ್ತು ಸಂಘಟನೆಗಳು ವಿರೋಧ ಮಾಡಲ್ಲ ಎಂದು ತಪ್ಪು ಕಲ್ಪನೆಯನ್ನು ಇಟ್ಟು ಕೊಳ್ಳಬೇಡಿ ಈ ತಿದ್ದುಪಡಿ ಕಾಯ್ದೆಯನ್ನು ಕೇಂದ್ರ ಸರ್ಕಾರ ಇಲ್ಲಿಯೇ ಕೈ ಬಿಡಬೇಕು ಇಲ್ಲದಿದ್ದರೆ ನಮ್ಮಗಳ ಜೀವಕ್ಕಿಂತ ಹೆಚ್ಚು ಆಸ್ತಿಯ ಉಳಿವಿಗಾಗಿ ನಿರಂತರ ಹೋರಾಟದ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ನದೀ ಉಲ್ಲಾ ಖಾನ್, ಕಾರ್ಯದರ್ಶಿ ಮೊಹಮ್ಮದ್ ನವಾಜ್, ಸಂಘಟನಾ ಕಾರ್ಯದರ್ಶಿ ಸುಹೇಲ್ ಶರೀಫ್, ಖದೀರ್ ಅಹ್ಮದ್, ಮುಖಂಡರಾದ ಇಸ್ರಾರ್, ಮುಹಿಬ್, ಹಿದಾಯತ್, ಮಹಮ್ಮದ್ ಅವೇಸ್, ಪರ್ವಿಜ್, ಮತೀನ್, ಶಾಕಿರ್ ಖನ್ನೂಲಿ, ರಹೀಮ್ ಅಬ್ದುಲ್ ಫಹೀದ್, ಮುಬಾರಕ್ ಹಾಗೂ ವಿವಿಧ ಸಂಘಟನೆಯ ಮುಖಂಡರು ಮತ್ತು ಕಾರ್ಯಕರ್ತರು ಈ ಆಂದೋಲದಲ್ಲಿ ಭಾಗವಹಿಸಿದರು.