ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಕೆ.ಆರ್.ನಗರ ಪಟ್ಟಣದಲ್ಲಿ ಇರುವ ನಂ 5 ಹಾರಂಗಿ ವಿತರಣಾ ನಾಲಾ ಉಪವಿಭಾಗ ನೂತನ ಎಇಇ ಆಗಿ ಆಯಾಜ್ ಪಾಷ ಅಧಿಕಾರ ಸ್ವೀಕರಿಸಿದರು. ಹಾಲಿ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗುರುರಾಜ್ ಅವರನ್ನು ಮೈಸೂರು ಮೂಡಾ ಗೆ ಸರ್ಕಾರ ವರ್ಗಾವಾಣೆ ಮಾಡಿತ್ತು ಇದರಿಂದ ಇಲ್ಲಿನ ಎಇಇ ಸ್ಥಾನ ಖಾಲಿ ಇದ್ದು ಪ್ರಭಾರ ಎಇಇ ಅಗಿ ಆಯಾಜ್ ಪಾಷ ಕಾರ್ಯನಿರ್ವಹಿಸುತ್ತಿದ್ದರು.
ಇದೀಗ ಸರ್ಕಾರ ಎಇಇ ಅಗಿ ಆಯಾಜ್ ಪಾಷ ಅವರಿಗೆ ಬಡ್ತಿ ನೀಡಿ ಈ ಕಚೇರಿಯ ಎಇಇ ಅಗಿ ಆದೇಶ ಹೊರಡಿಸಿದೆ. ಈ ಹಿನ್ನಲೆಯಲ್ಲಿ ಅಧಿಕಾರ ಸ್ವೀಕರಿಸಿ ನಂತರ ಮಾತನಾಡಿದ ಎಇಇ ಆಯಾಜ್ ಪಾಷ ಶಾಸಕ ಡಿ.ರವಿಶಂಕರ್ ಮತ್ತು ನಾಲಾ ವ್ಯಾಪ್ತಿಯ ರೈತರ ಸಹಕಾರ ದೊಂದಿಗೆ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಹೊಸೂರು ಹಾರಂಗಿ ವಿಭಾಗದ ನಿವೃತ್ತ ಎಇಇ ಕಂಚಗಾರಕೊಪ್ಪಲು ಕೆ.ಬಿ.ಪ್ರಕಾಶ್ ನೂತನ ಎಇಇ ಆಯಾಜ್ ಪಾಷ ಅವರನ್ನು ಅಭಿನಂಧಿಸಿ ರೈತರ ನೀರಿನ ಸಮಸ್ಯೆಗಳನ್ನ ನಿವಾರಿಸಲು ಶ್ರಮಿಸುವಂತೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಸಾಲಿಗ್ರಾಮ ಹಾರಂಗಿ ವಿಭಾಗದ ಇಇ ಕುಶ ಕುಮಾರ್, ನಂ 5- ನೀರಾವರಿ ಇಲಾಖೆಯ ಇಂಜಿನಿಯರ್ ಗಳಾದ ಶಂಕರೇಗೌಡ, ಕಿರಣ್, ಶ್ರೀಮತಿ ಬಿಂದು, ಕುಮಾರಿ ಕನ್ನಿಕಾ ಮತ್ತಿತರರು ಹಾಜರಿದ್ದರು.