ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಚಿಬುಕಹಳ್ಳಿ ಗ್ರಾಮದಲ್ಲಿ ಇದೇ ಪ್ರಥಮ ಬಾರಿಗೆ ನಡೆದ CPl – ಸೀಜನ್ 1 ಕ್ರಿಕೇಟ್ ಪಂದ್ಯಾವಳಿಯಲ್ಲಿ ರಾಯಲ್ ಸ್ಟೈಕರ್ ತಂಡ ಪ್ರಥಮ ಸ್ಥಾನವನ್ನು ಪಡೆದು ಕೊಂಡು ಗೆಲುವಿನ ನಗೆ ಬೀರಿತು. 4 ಓವರ್ ಗಳ ಪಂದ್ಯಾವಳಿಯಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಸ್ಟೈಕರ್ ತಂಡ 27 ರನ್ ಗಳಿಗೆ ಆಲ್ ಔಟ್ ಆಯಿತು.
ರಾಯಲ್ ಸ್ಟೈಕರ್ ತಂಡದ ಪರವಾಗಿ ಬ್ಯಾಟಿಂಗ್ ಮಾಡಿದ ನಂದನ್ ಕುಮಾರ್ 9 ಮತ್ತು ಸಿ.ಜೆ.ಕುಮಾರ್ 10 ರನ್ ಗಳಿಸಿದರೇ ಸೋಮೇಶ್ವರ ತಂಡದ ಪರವಾಗಿ ಬೌಲಿಂಗ್ ದಾಳಿ ನಡೆಸಿದ ಅರುಣ್ 4 ವಿಕೆಟ್, ಬಲರಾಮ ಮತ್ತು ಮಧು ತಲಾ ಮೂರು ವಿಕೇಟ್ ಗಳನ್ನು ಪಡೆದರು.
ಆದರೆ ಗೆಲ್ಲಲು 28 ರನ್ ಗಳ ಗುರಿಯೊಂದಿಗೆ ಬ್ಯಾಂಟಿಗ್ ಮಾಡಿದ ಸೋಮೇಶ್ವರ ಬಾಯ್ಸ್ ತಂಡವನ್ನು 18 ರನ್ ಗಳಿಗೆ ಕಟ್ಟಿ ಹಾಕಿದ ರಾಯಲ್ಸ್ ಸ್ಟೈಕರ್ ತಂಡದ ಪರವಾಗಿ ಬೌಲಿಂಗ್ ಮಾಡಿದ ಪುಟ್ಟು 3 ವಿಕೆಟ್, ದರ್ಶನ್ 2 ವಿಕೆಟ್ ಪಡೆಯುವ ಮೂಲ ಗೆಲುವಿಗೆ ಕಾರಣರಾದರೇ ಸೋಮೇಶ್ವರ ತಂಡದ ಪರವಾಗಿ ಬ್ಯಾಟಿಂಗ್ ಮಾಡಿದ
ಬಲರಾಮ 10 ರನ್ ಗಳಿಸಿದರು.
ಈ ಮೂಲಕ ಇದೇ ಪ್ರಥಮವಾಗಿ ಗ್ರಾಮದಲ್ಲಿ ನಡೆದ ನಡೆದ CPl – ಸೀಜನ್ 1 ಕ್ರಿಕೇಟ್ ಪಂದ್ಯಾವಳಿಯ ಪ್ರಶಸ್ತಿ ಯನ್ನು ರಾಯಲ್ ಸ್ಟೈಕರ್ ತಂಡ ತನ್ನದಾಗಿಸಿ ಕೊಂಡಿತು.
ಗ್ರಾಮದ ಸೋಮೇಶ್ವರ ದೇವಾಲಯದ ಮುಂಭಾಗದ ಮೈಧಾನದಲ್ಲಿ ನಡೆದ ಈ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ನಡೆದ ರಾಯಲ್ ಸ್ಟೈಕರ್ ತಂಡಕ್ಕೆ 15 ಸಾವಿರ ಮತ್ತು ಟ್ರೋಪಿ, ಎರಡನೇ ಸ್ಥಾನ ಪಡೆದ ಸೋಮೇಶ್ವರ ಬಾಯ್ಸ್ ತಂಡಕ್ಕೆ 10 ಸಾವಿರ ಮತ್ತು ಟ್ರೋಪಿ, ಮೂರನೇ ಸ್ಥಾನ ಪಡೆದ ಎಸ್.ಆರ್.ಎಸ್ ತಂಡಕ್ಕೆ 5 ಸಾವಿರ ನಗದು ಮತ್ತು ಟ್ರೋಪಿಯನ್ನು ವಿತರಿಸಲಾಯಿತು.

ಇನ್ನು ಈ ಪಂದ್ಯಾವಳಿಯಲ್ಲಿ ಭಾಗವಹಿಸಿ ಸಮಧಾನಕರ ಪ್ರಶಸ್ತಿ ಪಡೆದ ರಾಯಲ್ ಚಾಲೆಂಜರ್ಸ್ ಮತ್ತು ಭರ್ಜರಿ ಬಾಯ್ಸ್ ತಂಡಗಳಿಗೆ ಟ್ರೋಪಿ ವಿತರಿಸಲಾಯಿತು. ರಾಯಲ್ ಸ್ಟೈಕರ್ ತಂಡಕ್ಕೆ ದೀಲಿಪ್ ಮತ್ತು ದರ್ಶನ್ , ಸೋಮೇಶ್ವರ ಬಾಯ್ಸ್ ತಂಡಕ್ಕೆ ಮಧು ಮತ್ತು ಬಲರಾಮ್, ಎಸ್.ಅರ್.ಎಸ್ ತಂಡಕ್ಕೆ
ಸಿ.ವಿ.ರವೀಶ್, ರಾಯಲ್ ಚಾಲೆಂಜರ್ಸ್ ತಂಡಕ್ಕೆ ಚೆಲುವರಾಜ್, ಭರ್ಜರಿ ಬಾಯ್ಸ್ ತಂಡಕ್ಕೆ
ಮಂಜೇಶ್ ಮತ್ತು ಭದ್ರ ಪ್ರಾಂಚೈಸಿಯಾಗಿದ್ದರು.
ನಂತರ ನಡೆದ ಕಾರ್ಯಕ್ರಮದಲ್ಲಿ ಪಂದ್ಯಾವಳಿಯಲ್ಲಿ ವಿಜೇತರಾದ ತಂಡಗಳಿಗೆ ಗ್ರಾಮದ ಮುಖಂಡ ರಾದ ಸಿ.ಟಿ.ಶಿವರಾಜು, ಸಿ.ಆರ್.ಆಶೋಕ್, ಗ್ರಾ.ಪಂ.ಸದಸ್ಯ ಮಾದೇಗೌಡ,ಮಾಜಿ ಸದಸ್ಯ ಸಿ.ಎಂ.ಶಿವಕುಮಾರ್ ಮುಖಂಡರಾದ ಬೀರೇಗೌಡ,ಚಿಕ್ಕೇಗೌಡ,ರಂಗೇಗೌಡ,ಪಾಪಣ್ಣ,ಸಿ.ಎಸ್.ಚೆಲುವರಾಜು, ಸಿ.ಆರ್.ಪಿ.ಎಫ್ ಯೋಧ ಹರೀಶ್,ದೇವೇಂದ್ರ ಸೋಮೇಗೌಡ, ಬಾಲ್ ಸುಂದರ್, ಡೈರಿ ಕಾರ್ಯದರ್ಶಿ ಸಿ.ಕೆ. ಲೋಕೇಶ್, ಮಂಜೇಶ್, ಚೆಸ್ಕಾಂ ಬಿಲ್ ಕಲೆಕ್ಟರ್ ಪ್ರಕಾಶ್, ಅವರು ಬಹುಮಾನ ವಿತರಿಸಿ ಮುಂದಿನ ನಡೆಯುವ ಈ ಪಂದ್ಯಾವಳಿಗೆ ತಮ್ಮ ಸಹಕಾರ ನೀಡುವುದಾಗಿ ತಿಳಿಸಿದರು.