ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೆ.ಆರ್.ನಗರ ತಾಲೂಕಿನ ಗಂಧನಹಳ್ಳಿಯ ನಿಂಗರಾಜು ಇವರಿಗೆ ಕೊಮೋಡ್ ವೀಲ್ ಚೇರ್ ನ್ನು ಯೋಜನೆಯ ತಾಲೂಕು ಯೋಜನಾಧಿಕಾರಿ ಉಮೇಶ್ ಪೂಜಾರಿ ವಿತರಣೆ ಮಾಡಿದರು.
ಈ ಸಂಧರ್ಭದಲ್ಲಿ ಮುಖಂಡ ಜಿ.ಎನ್.ರಘು, ಗ್ರಾ.ಪಂ. ಅಧ್ಯಕ್ಷೆ ಮಹಾದೇವಿ, ಒಕ್ಕೂಟದ ಅಧ್ಯಕ್ಷೆ ಜ್ಯೋತಿ, ಸುಶೀಲಮ್ಮ, ಮೀನಾಕ್ಷಿ, ಭವ್ಯ, ಸಂದೀಪ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೆ.ಆರ್.ನಗರ ತಾಲೂಕಿನ ಬಾಲೂರಿನ ರಾಮೇಗೌಡರಿಗೆ ವೀಲ್ ಚೇರ್ ನ್ನು ಯೋಜನೆಯ ತಾಲೂಕು ಯೋಜನಾಧಿಕಾರಿ ಉಮೇಶ್ ಪೂಜಾರಿ ವಿತರಿಸಿದರು.
ಈ ಸಂಧರ್ಭದಲ್ಲಿ ಮುಖಂಡ ಸುಬ್ಬೆಗೌಡ, ಒಕ್ಕೂಟದ ಅಧ್ಯಕ್ಷೆ ಪೂರ್ಣಿಮಾ, ಸೇವಾಪ್ರತಿನಿಧಿ ಅಳುಮೇಳಮ್ಮ, ಸದಸ್ಯರಾದ ಶಾಂತಕುಮಾರ್, ಶಶಿರೇಖಾ, ಸುನಂದಾ, ಗೌರಮ್ಮ ಸೇರಿದಂತೆ ಇತರರು ಇದ್ದರು.