Tuesday, April 15, 2025
Google search engine

Homeರಾಜ್ಯಸುದ್ದಿಜಾಲಕೆ.ಆರ್.ನಗರ:ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದ ಐವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಕೃಷ್ಣಪ್ಪ

ಕೆ.ಆರ್.ನಗರ:ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದ ಐವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಕೃಷ್ಣಪ್ಪ

ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ೨೦೨೩-೨೪ ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕೆ.ಆರ್.ನಗರ ಮತ್ತು ಸಾಲಿಗ್ರಾಮ ಅವಳಿ ತಾಲ್ಲೂಕು ಜಿಲ್ಲೆಯಲ್ಲಿ ನಾಲ್ಕುನೇ ಸ್ಥಾನ ಪಡೆದಿದ್ದು ಪ್ರಶಂಸೆಗೆ ಪಾತ್ರವಾಗಿದೆ. ಕಳೆದ ಐದು ವರ್ಷಗಳಿಂದ ಹಿನ್ನಡೆ ಸಾಧಿಸಿದ್ದ ವಿದ್ಯಾರ್ಥಿಗಳು ಈ ಬಾರಿ ಮೇಲುಗೈ ಸಾಧಿಸಿರುವುದು ಪೋಷಕರಲ್ಲಿ ಸಂತಸ ತರಿಸಿದೆ.
ತಾಲ್ಲೂಕಿನಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದ ಐವರು ವಿದ್ಯಾರ್ಥಿಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಕೃಷ್ಣಪ್ಪ ಅಭಿನಂದನೆ ಸಲ್ಲಿಸಿದ್ದಾರೆ.

ಪಟ್ಟಣದ ಸೆಂಟ್ ಜೊಸೆಫ್ ಪ್ರೌಢಶಾಲೆಯ ವಿದ್ಯಾರ್ಥಿ ಪ್ರತೀಕ್ಷ ಎಂ.ಕೆ. ೬೨೫ಕ್ಕೆ ೬೧೩, ಜ್ಞಾನಶ್ರೀ ಕೆ.ಎಲ್. ೬೧೧, ಅದರ್ಶ ವಿದ್ಯಾಲಯದ ವಿಕಾಸ್ ೬೦೯, ಮಾದಪ್ಪ ವಿದ್ಯ ಸಂಸ್ಥೆಯ ವಿಶಾಂತ್.ಎನ್ ಗೌಡ ೬೦೭, ಆದರ್ಶ ವಿದ್ಯಾಲಯದ ತಿಲಕ್ ರಾಜು ೬೦೬ ಉನ್ನತ ಅಂಕ ಪಡೆದು ಕೊಂಡು ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ.

ಕೆ.ಆರ್.ನಗರ ಮತ್ತು ಸಾಲಿಗ್ರಾಮ ಆವಳಿ ತಾಲ್ಲೂಕಿನಲ್ಲಿ ಒಟ್ಟು ೭೦ ಸರ್ಕಾರಿ ಮತ್ತು ಖಾಸಾಗಿ ಶಾಲೆ ಪ್ರೌಢಶಾಲೆಗಳ ಪೈಕಿ ಶೇಕಡ ೧೦೦% ಸಾಧನೆ ಪಡೆದ ೧೭ ಶಾಲೆಗಳು, ಸೇರಿವೆ ಎಂದು ಮಾಹಿತಿ ನೀಡಿದ ಬಿಇಓ ಆರ್.ಕೃಷ್ಣಪ್ಪ. ೨೦೨೩-೨೪ ನೇ ಸಾಲಿನಲ್ಲಿ ಕೆ.ಆರ್.ನಗರ ಮತ್ತು ಸಾಲಿಗ್ರಾಮ ಆವಳಿ ತಾಲ್ಲೂಕಿನ ಸರ್ಕಾರಿ ಮತ್ತು ಖಾಸಗಿ ಪ್ರೌಢಶಾಲೆ ಸೇರಿದಂತೆ ಒಟ್ಟು ೨೮೧೩ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಇದರಲ್ಲಿ ಪಾಸಾದ ವಿದ್ಯಾರ್ಥಿಗಳು ೨೫೩೨ ಶೇಕಡ ೯೦.೦೧ ಬಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಎಸ್ ಎಸ್ ಎಲ್ ಸಿ ಪರೀಕ್ಷಾ ಬರೆದ ಎಲ್ಲ ವಿದ್ಯಾರ್ಥಿಗಳು ಯಾವಾಗ SSLC Result 2024 ಫಲಿತಾಂಶ ಬರುತ್ತದೆ ಎಂದು ಕಾಯುತ್ತಾ ಕುಳಿತಿದ್ದರು ಇದೀಗ ಪರೀಕ್ಷೆಯ ಫಲಿತಾಂಶ ಬಿಡುಗಡೆಯಾಗಿದೆ. ನಿರೀಕ್ಷೆಗೂ ಮೀರಿ ಉತ್ತಮ ಅಂಕಗಳ ಪಡೆದ ಪಡೆದ ವಿದ್ಯಾರ್ಥಿಗಳು ಖುಷಿಯಲ್ಲಿ ತೇಲಾಡುತ್ತಿದ್ದಾರೆ. ಹಾಗೂ ಕಡಿಮೆ ಅಂಕಗಳನ್ನು ಪಡೆದು ಪೇಲಾದ ವಿದ್ಯಾರ್ಥಿಗಳು ಮರು ಪರೀಕ್ಷೆಗೆ ಅರ್ಜಿ ಸಲ್ಲಿಸಿ ಮತ್ತೊಮ್ಮೆ ಪರೀಕ್ಷೆ ಬರೆಯಬಹುದಾಗಿದೆ. ಎಂದು ಮಾಹಿತಿ ನೀಡಿದರು.

“ಅಭಿನಂದನೆ ಸಲ್ಲಿಸುವೆ “
ಕೆ.ಆರ್.ನಗರ ಮತ್ತು ಸಾಲಿಗ್ರಾಮ ಆವಳಿ ತಾಲ್ಲೂಕಿನಲ್ಲಿ ಕಳೆದ ಐದು ವರ್ಷಗಳಿಕ್ಕಿಂತ ಈ ಬಾರಿ ಜಿಲ್ಲೆಯಲ್ಕಿ ಕೆ.ಆರ್.ನಗರ ತಾಲ್ಲೂಕು ನಾಲ್ಕನೇ ಸ್ಥಾನ ಪಡೆದಿರುವುದು ಸಂತಸ ತಂದಿದೆ. ಇದಕ್ಕಾಗಿ ಶ್ರಮಿಸಿದ ಬಿಇಓ, ಶಿಕ್ಷಣ ಇಲಾಖೆಯ ಎಲ್ಲ ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ಪೋಷಕರನ್ನು ಅಭಿನಂದನೆ ಸಲ್ಲಿಸುತ್ತೇನೆ

ಡಿ.ರವಿಶಂಕರ್, ಶಾಸಕರು.ಕೆ.ಆರ್.ನಗರ

RELATED ARTICLES
- Advertisment -
Google search engine

Most Popular