Friday, April 11, 2025
Google search engine

Homeರಾಜ್ಯಸುದ್ದಿಜಾಲಕೆ.ಆರ್.ನಗರ:ವಲಯ ಅರಣ್ಯಾಧಿಕಾರಿ ರಶ್ಮಿಪ್ರವೀಣ್ ಗೆ ದಿ.ಎಸ್.ನಂಜಪ್ಪ ಅಭಿಮಾನಿ ಬಳಗದ ವತಿಯಿಂದ ಸನ್ಮಾನ

ಕೆ.ಆರ್.ನಗರ:ವಲಯ ಅರಣ್ಯಾಧಿಕಾರಿ ರಶ್ಮಿಪ್ರವೀಣ್ ಗೆ ದಿ.ಎಸ್.ನಂಜಪ್ಪ ಅಭಿಮಾನಿ ಬಳಗದ ವತಿಯಿಂದ ಸನ್ಮಾನ

ಕೆ.ಆರ್.ನಗರ: ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ ಎರಡು ತಾಲೂಕುಗಳಲ್ಲೂ ಕಳೆದ ಒಂದೂವರೆ ವರ್ಷದಿಂದ ಉಪಟಳ ನೀಡುತ್ತಿದ್ದ 4 ಚಿರತೆಗಳನ್ನು ಸೆರೆಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರೈತರು ಮತ್ತು ಸಾರ್ವಜನಿಕರು ನಿರಾಳರಾಗುವಂತೆ ಮಾಡಿದ ಕೆ.ಆರ್.ನಗರ ವಲಯ ಅರಣ್ಯಾಧಿಕಾರಿ ರಶ್ಮಿಪ್ರವೀಣ್ ಅವರನ್ನು ಅವರ‌ ನಿವಾಸದಲ್ಲಿ ಮಾಜಿ ಸಚಿವರಾದ ದಿ.ಎಸ್.ನಂಜಪ್ಪ ಅಭಿಮಾನಿ ಬಳಗದ ವತಿಯಿಂದ ಸನ್ಮಾನಿಸಲಾಯಿತು. ನಂಜಪ್ಪ ಅವರ ಪುತ್ರ ನಿವೃತ್ತ ತಂಬಾಕು ಅಧಿಕಾರಿ ಕೆ.ಎನ್.ದಿನೇಶ್ ಅವರು ರಶ್ಮಿ ಅವರನ್ನು ಸನ್ಮಾನಿಸಿ ಗೌರವಿಸಿ ಶುಭಹಾರೈಸಿದರು.

ನಂತರ ಮಾತನಾಡಿದ ಕೆ.ಎನ್.ದಿನೇಶ್ ಕೆ.ಆರ್.ನಗರ ಕ್ಷೇತ್ರದಲ್ಲಿ ಚಿರತೆಗಳ ಹಾವಳಿಯಿಂದ ರೈತರು ಹಗಲು -ರಾತ್ರಿ ವೇಳೆ ತಮ್ಮ ಜಮೀನುಗಳಿಗೆ ತೆರಳು ಭಯಪಡುವಂತೆ ಆಗಿತ್ತು. ಇಂತಹ ಸಂದರ್ಭದಲ್ಲಿ ಅರಣ್ಯಧಿಕಾರಿ ರಶ್ಮಿ ಅವರು ತಮ್ಮ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನ ಮತ್ತು ಸಿಬ್ಬಂದಿಗಳ ಸಹಕಾರದೊಂದಿಗೆ ಚಿರತೆಗಳನ್ನು ಸೆರೆಹಿಡಿಯುವ ಕೆಲಸ ಮಾಡಲು ಶ್ರಮಿಸಿದ್ದು ಇದಕ್ಕಾಗಿ ಇವರನ್ನು ಕ್ಷೇತ್ರದ ರೈತರು ಮತ್ತು ಸಾರ್ವಜನಿಕರ ಪರವಾಗಿ ಅಭಿನಂದಿಸುತ್ತಿರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಸಮಾಜ ಸೇವಕರಾದ ಕೆ.ಎಲ್.ರಮೇಶ್, ಪತ್ರಕರ್ತ ಕರ್ಪೂರವಳ್ಳಿ ಮಹದೇವ್ ಉದ್ಯಮಿ ರಂಗನಾಥ್ ,ಶಿಕ್ಷಕರಾದ ಫಾಲಾಕ್ಷ, ಡಾ.ದೀಪು, ಪ್ರತೀಮಾ,ಡೆಲ್ಲಿಮಂಜು,ಸಚಿನ್,ಪ್ರವೀಣ್ ಮುಸ್ಲಿಂ ಸಮಾಜದ ಮುಖಂಡರಾದ ಆಸ್ಲಂ ಇದ್ದರು.

RELATED ARTICLES
- Advertisment -
Google search engine

Most Popular