Tuesday, April 22, 2025
Google search engine

Homeಸ್ಥಳೀಯಕೆ.ಆರ್.ನಗರ: ಒಂದೇ ರಾತ್ರಿ 9 ಹೆರಿಗೆ ಮಾಡಿಸುವ ಮೂಲಕ ಇತಿಹಾಸ ನಿರ್ಮಿಸಿದ ವೈದ್ಯೆ ಡಾ.ಭವಾನಿ

ಕೆ.ಆರ್.ನಗರ: ಒಂದೇ ರಾತ್ರಿ 9 ಹೆರಿಗೆ ಮಾಡಿಸುವ ಮೂಲಕ ಇತಿಹಾಸ ನಿರ್ಮಿಸಿದ ವೈದ್ಯೆ ಡಾ.ಭವಾನಿ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಒಂದೇ ರಾತ್ರಿಯಲ್ಲಿಯೇ ಒಂದಲ್ಲ- ಎರಡಲ್ಲ ಬರೋಬ್ಬರಿ 9 ಹೆರಿಗೆ ಮಾಡಿಸುವ ಮೂಲಕ ವೈದ್ಯರೊಬ್ಬರು ಕೆ.ಆರ್.ನಗರ ತಾಲೂಕಿನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ

ಕೆ.ಆರ್.ನಗರ ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞರಾಗಿ ಕೆಲಸ ನಿರ್ವಹಿಸುತ್ತಿರುವ ಡಾ.ಭವಾನಿ ಅವರೇ 9 ಹೆರಿಗೆ ಮಾಡಿಸಿ ವೈದ್ಯ ವೃತ್ತಿಯಲ್ಲಿ ಕೀರ್ತಿಗೆ ಪಾತ್ರರಾಗಿದ್ದಾರೆ

ಮಂಗಳವಾರ ರಾತ್ರಿ ರಾತ್ರಿಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇವರು ಆಸ್ವತ್ರಯಲ್ಲಿ  ದಾಖಲಾಗಿದ್ದ ಸುಮಾರು 9 ಮಂದಿಗೆ ಗರ್ಭಿಣಿಯರಿಗೆ ಹೆರಿಗೆ ಮಾಡಿಸಿ  ತಮ್ಮ ವೃತ್ತಿಪರವನ್ನು ಮೆರೆದಿದ್ದಾರೆ.

ಅದರಲ್ಲು ಶಸ್ತ್ರಚಿಕಿತ್ಸೆಯ ಮೂಲಕ 9 ಮಂದಿ ಮಹಿಳೆಯರಿಗೆ ಹೆರಿಗೆ ಮಾಡಿಸಿರುವುದು ಒಂದು ವಿಶೇಷವಾಗಿದ್ದರೇ, ಇದರಲ್ಲಿ 3 ಗಂಡು ಮತ್ತು 6 ಹೆಣ್ಣು ಮಕ್ಕಳು ಜನ್ಮ ತಾಳಿವೆ.

ಡಾ.ಭವಾನಿ ಅವರು ಸಾಲಿಗ್ರಾಮದ ಎಸ್.ಕೆ ಯೋಗಣ್ಣ ಅವರ ಪುತ್ರಿ ಆಗಿರುವ ಇವರು ಈ ಆಸ್ವತ್ರೆಯಲ್ಲಿ 7 ವರ್ಷಗಳಿಂದ ಪ್ರಸುತಿ ವೈದ್ಯರಾಗಿ ಕೆಲಸ ನಿರ್ವಹಿಸುತ್ತಿದ್ದು, ವೃತ್ತಿಯಲ್ಲಿ ಸಾಕಷ್ಟು ಪರಿಣತಿ ಹೊಂದಿರುವ ಇವರು  ಕೆ.ಆರ್.ನಗರ ಕ್ಷೇತ್ರದಲ್ಲದೇ ಇಲ್ಲಿಗೆ ಬರುವ ಹುಣಸೂರು,ಪಿರಿಯಾಪಟ್ಟಣ, ಹೊಳೆನರಸೀಪುರ, ಕೆ.ಆರ್.ಪೇಟೆ, ಮೈಸೂರು ತಾಲೂಕಿನಲ್ಲಿ ಗರ್ಭಿಣಿ ಮಹಿಳೆಯರ ಆಪತ್ಬಾಂಧವರಾಗಿದ್ದಾರೆ.

 ಈ ಬಗ್ಗೆ “ರಾಜ್ಯಧರ್ಮ”ದೊಂದಿಗೆ ಮಾತನಾಡಿದ ಅವರು, ರಾತ್ರಿವೇಳೆಯಲ್ಲಿ ಸಿಬ್ಬಂದಿಗಳ ಕೊರತೆಯ ನಡುವೆಯು ಶಸ್ತ್ರಚಿಕಿತ್ಸೆಯ ಮೂಲಕ ಹೆರಿಗೆ ಮಾಡಿಸುವುದು ಸವಾಲಿನ ಕೆಲಸ ಅದರು ಯಶಸ್ವಿಯಾಗಿ ಹೆರಿಗೆ ಮಾಡಿಸಿದ ತೃಪ್ತಿ ನನಗೆ ಇದೆ ಎಂದರು.

ಗುರುವಾರ ಬೆಳಿಗ್ಗೆ ಕೆ.ಆರ್.ನಗರ ತಾಲೂಕು ಆರೋಗ್ಯಧಿಕಾರಿ ನಟರಾಜು ಅವರು, ಡಾ.ಭವಾನಿ ಅವರನ್ನು ಅಭಿನಂದಿಸಿದ ಅವರು ಭವಾನಿ ಅವರು ಮುಂದಿನ ದಿನಗಳಲ್ಲಿ ತಮ್ಮ ಕಾರ್ಯದಕ್ಷತೆಯಿಂದ ಈ ಆಸ್ಪತ್ರೆಗೆ ಇನ್ನಷ್ಟು ಹೆಸರು ಬರಲಿ ಇದಕ್ಕೆ ನನ್ನ ಸಹಕಾರ ಇರಲಿದೆ ಎಂದು ಶುಭ ಹಾರೈಸಿದರು

ಈ ಹಿಂದೆ  ಶಾಸಕರಾಗಿದ್ಧ  ಸಾ.ರಾ.ಮಹೇಶ್ ಅವರು ಈ ಆಸ್ವತ್ರೆಯನ್ನು ಮಂಜೂರು ಮಾಡಿಸಿದ್ದು, ಉದ್ಘಾಟನೆ ಗೊಂಡ ನಂತರ ಸಿಬ್ಬಂದಿಗಳ ಕೊರತೆಯ ನಡುವೆಯು ಉತ್ತಮ ಸೇವೆಯಿಂದ ಈ ಆಸ್ವತ್ರೆಯು ರಾಜ್ಯದಲ್ಲಿಯೇ  ನಂ -1ಅತ್ಯುತ್ತಮ ಆಸ್ವತ್ರೆ ಎಂದು ಆರೋಗ್ಯ ಇಲಾಖೆಯಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ಹೆಸರು ಪಡೆದಿದೆ.

RELATED ARTICLES
- Advertisment -
Google search engine

Most Popular