ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಚಿಬುಕಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸಿ.ಕೆ.ಮಹೇಶ್ ಮತ್ತು ಉಪಾಧ್ಯಕ್ಷರಾಗಿ ಸಣ್ಣರಾಮಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬುಧವಾರ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಿ.ಕೆ.ಮಹೇಶ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸಣ್ಣರಾಮಯ್ಯ ಅವರನ್ನು ಹೊರತು ಪಡಿಸಿ ಬೇರೆಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸಹಕಾರ ಇಲಾಖೆಯ ಅಧಿಕಾರಿ ರವಿ ಪ್ರಕಟಿಸಿದರು .
ಜಿಲ್ಲಾ ಸಹಕಾರ ಬ್ಯಾಂಕಿನ ಮೇಲ್ವಿಚಾರಕ ಮೂಡಲಕೊಪ್ಪಲು ದಿನೇಶ್ ಪ್ರಕಟಿಸಿದರು. ಹಾಲಿ ಅಧ್ಯಕ್ಷರಾಗಿದ್ದ ಕೆ.ಎನ್.ತಮ್ಮೇಗೌಡ, ಮತ್ತು ಉಪಾಧ್ಯಕ್ಷರಾಗಿದ್ದ ನಿಂಗರಾಜು ಅವರ ರಾಜೀನಾಮೆ ಇಂದ ತೆರವಾದ ಈ ಸ್ಥಾನಗಳಿಗೆ ಈ ಚುನಾವಣೆ ನಡೆಯಿತು. ನಂತರ ಮಾತನಾಡಿದ ನೂತನ ಅಧ್ಯಕ್ಷ ಜಿಲ್ಲಾ ಸಹಕಾರ ಬ್ಯಾಂಕ್ ನಿಂದ ಸಿಗುವ ಸಾಲ ಮತ್ತು ವಿವಿಧ ಸವಲತ್ತುಗಳನ್ನು ಷೇರುದಾರ ರೈತರಿಗೆ ಒದಗಿಸಿ ಕೊಡುವುದರ ಜತಗೆ ಗುದ್ದಲಿ ಪೂಜೆ ಅಗಿರುವ ಸಂಘದ ನೂತನ ಕಟ್ಟಡ ನಿರ್ಮಿಸಲು ತಾವು ಆದ್ಯತೆ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಹಕಾರ ಬ್ಯಾಂಕಿನ ಮೇಲ್ವಿಚಾರಕ ಮೂಡಲ ಕೊಪ್ಪಲು ದಿನೇಶ್, ಸಂಘದ ನಿರ್ದೇಶಕರಾದ ಕೆ.ಎನ್.ತಮ್ಮೇಗೌಡ, ನಿಂಗರಾಜು, ಎಚ್.ಎಸ್.ವೆಂಕಟೇಶ್, ಭಾರತಿ, ಕೆ.ಶ್ವೇತಾ, ಸಿ.ಎ.ಗಣೇಶ, ಸಂಘದ ಸಿಇಓ ಎಚ್.ಎಸ್.ಕೃಷ್ಣೇಗೌಡ ,ಸಿಬ್ಬಂದಿಗಳಾದ ನಾಗರಾಜು,ಕುಮಾರ್ ಸೇರಿದಂತೆ ಮತ್ತಿತರರು ಹಾಜರಿದ್ದರು.