ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಹೋಬಳಿಯ ದೊಡ್ಡಕೊಪ್ಪಲು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಡಿ.ಆರ್ ನಾಗರಾಜ್ ಮತ್ತು ಉಪಾಧ್ಯಕ್ಷರಾಗಿ ದೇವರಾಜನಾಯಕ ಅವಿರೋಧವಾಗಿ ಆಯ್ಕೆಯಾದರು.
ಬುಧವಾರ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಡಿ.ಆರ್.ನಾಗರಾಜು ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ದೇವರಾಜು ಅವರನ್ನು ಹೊರತು ಪಡಿಸಿ ಬೇರೆಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಅಯ್ಕೆಯನ್ನು ಚುನಾವಣಾಧಿಕಾರಿಯಾಗಿದ್ದ ಕೆ.ಆರ್.ನಗರ ಸಹಕಾರ ಇಲಾಖೆಯ ಎಸ್.ರವಿ ಘೋಷಣೆ ಮಾಡಿದರು.
ಚುನಾವಣಾ ಸಭೆಯಲ್ಲಿ ಸಂಘದ ನಿರ್ದೇಶಕರಾದ ಡಿ.ಬಿ.ಸುಜೇಂದ್ರ, ಡಿ.ದಿವಾಕರ, ಡಿ.ಸಿ.ವಿಶ್ವನಾಥ್, ಡಿ.ಎನ್.ಕುಮಾರ್, ಡಿ.ಈ.ಅಪ್ಪಾಜಿಗೌಡ, ಡಿ.ಕೆ.ಭರತ್ ಕುಮಾರ್, ಲಲಿತಮ್ಮಶಿವಣ್ಣ, ಅನಿತಾಜಯಪ್ಪ, ಸಂಘದ ಕಾರ್ಯದರ್ಶಿ ಡಿ.ಆರ್.ಶಿವಲಿಂಗೇಗೌಡ,ಹಾಲು ಪರೀಕ್ಷಕಾ ಡಿ.ಎಸ್.ರಘು ಹಾಜರಿದ್ದರು.
ನಂತರ ನೂತನ ಅಧ್ಯಕ್ಷ ನಾಗರಾಜು ಮತ್ತು ಉಪಾಧ್ಯಕ್ಷ ದೇವರಾಜನಾಯಕ ಅವರನ್ನು ಗ್ರಾಮದ ಮುಖಂಡರಾದ ಡಿ.ಜೆ.ಕೃಷ್ಣೆಗೌಡ,ಮಹೇಶ್ ಕೊಂಗಣ್ಣ, ಏಳನೀರು ರಾಜು, ಡಿ.ಎಲ್.ಸತೀಶ್,ತುಳಸಿ,ಡಿಪೋ ವೆಂಕಟೇಶ್, ದತ್ತ ದಿಲೀಪ್, ಸೋಮ,ಮಧು, ಮಂಜಣ್ಣ, ಕಾಯಿಮೋಹನ್ ಮೊದಲಾದರವರು ಅಭಿನಂಧಿಸಿದರು.