ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಕೆ.ಆರ್.ನಗರ ಆರೋಗ್ಯ ಇಲಾಖೆಯ ಕ್ರಿಕೆಟ್ ತಂಡವು ಉಡುಪಿಯಲ್ಲಿ ನಡೆದ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ಕೊಂಡಿದೆ. ಕ್ಷಯ ಮುಕ್ತ ಭಾರತ ಸ್ವಾಸ್ಥ್ಯ ಟ್ರೋಪಿ 2025 ಹೆಸರಿನಲ್ಲಿ ನಡೆದ ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸುಮಾರು ರಾಜ್ಯದ ವಿವಿಧ ಭಾಗದ ಆರೋಗ್ಯ ಇಲಾಖೆಯ 17 ತಂಡಗಳು ಭಾಗವಹಿಸಿದ್ದವು.
ಕೆ.ಆರ್.ನಗರ ತಂಡವು ಲೀಗ್ ಹಂತದಲ್ಲಿ ಚಿಕ್ಕಮಗಳೂರು ಕೆಪಿ ನೆಟರ್ಸ್ , ದಕ್ಷಿಣ ಕನ್ನಡ, ಉಡುಪಿಯ ಅಕ್ಟಿವ್ ಬಾಯ್ಸ್ ತಂಡಗಳನ್ನು ಎದುರಿಸಿ ಎರಡು ಪಂದ್ಯವನ್ನು ಗೆದ್ದು ಕ್ವಾಟರ್ ಪೈನಲ್ ಪ್ರವೇಶ ಮಾಡಿತು.
ಕ್ವಾಟರ್ ಫೈನಲ್ ನಲ್ಲಿ ಮೈಸೂರು ಡಿಎಚ್ಓ ತಂಡದ ವಿರುದ್ದ ಗೆಲುವು ಸಾಧಿಸಿ ನಂತರ ನಡೆದ ಸೆಮಿ ಫೈನಲ್ ನಲ್ಲಿ ಹೊಯ್ಸಳ ತಂಡವನ್ನು ಮಣಿಸಿ ಪೈನಲ್ ಅರ್ಹತೆ ಪಡೆದು ಕೊಂಡಿತು.
ಫೈನಲ್ ಪಂದ್ಯಾವಳಿಯಲ್ಲಿ ಬೆಂಗಳೂರಿನ ಬಿಬಿಎಂಪಿ ತಂಡದ ವಿರುದ್ದ ಬ್ಯಾಟಿಂಗ್ ಮಾಡಿದ ಕೆ.ಆರ್.ನಗರ ತಂಡವು 40 ರನ್ ಗಳಿಸಿತು. ಆನಂತರ ಗೆಲುವಿನ ಗುರಿ ಬೆನ್ನತ್ತಿದ್ದ ಬಿಬಿಎಂಪಿ ತಂಡ 27 ರನ್ ಅಷ್ಟೆ ಗಳಿಸಿ ಪರಾಜಿತ ಗೊಂಡಿತು.
ಕೆ.ಆರ್.ನಗರ ತಂಡದ ಪರ ಅಡಿದ ಹೇಮಂತ್ ಅವರಿಗೆ ಮ್ಯಾನ್ ಅಪ್ ದಿ ಮ್ಯಾಚ್ ಪ್ರಶಸ್ತಿ ಮತ್ತು ಪೂರ್ಣಚಂದ್ರ ಅವರಿಗೆ ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ನೀಡಲಾಯಿತು. ಈ ತಂಡಕ್ಕೆ 33 ಸಾವಿರ ನಗದು ಮತ್ತು ಟ್ರೋಪಿಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಕೆ.ಆರ್.ನಗರ ತಂಡದ ನಾಯಕ ಡಾ.ರವಿಚಂದ್ರನ್ ಮತ್ತು ಆಟಗಾರರಾದ ಡಾ.ನವೀನ್, ಕುಪ್ಪೆಸಚಿನ್, ರವಿ, ಯೋಗೇಶ್,ವಿನೋದ್,ಪದ್ಮರಾಜ್, ಚೇತನ್, ಮಧುಶಂಕರ್, ರಂಗಸ್ವಾಮಿ, ನಾರಾಯಣ್, ಮಹೇಂದ್ರ, ಕೃಷ್ಣಮೂರ್ತಿ ಇದ್ದರು.