ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳು ಶೇ.೯೮ರಷ್ಟು ಫಲಾನುಭವಿಗಳಿಗೆ ತಲುಪುತ್ತಿದ್ದು ಉಳಿದವರಿಗೂ ಅವುಗಳ ಅನುಕೂಲ ಕಲ್ಪಿಸಿಕೊಡಲು ಕಾರ್ಯಯೋಜನೆ ಹಮ್ಮಿಕೊಳ್ಳುವುದಾಗಿ ಪಂಚ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಎಂ.ಎಸ್.ಮಹದೇವ್ ಹೇಳಿದರು.
ಕೆ.ಆರ್.ನಗರ ಪಟ್ಟಣದ ತಾಲೂಕು ಪಂಚಾಯಿತಿಯ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ನಡೆದ ಗ್ಯಾರಂಟಿ
ಯೋಜನೆಯ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನ್ಯಾಯ ಬೆಲೆ
ಅಂಗಡಿಗಳಲ್ಲಿ ನಿಯಮಾನುಸಾರ ಪಡಿತರ ವಿತರಣೆ ಮಾಡುತ್ತಿಲ್ಲ ಎಂದು ವ್ಯಾಪಕ ದೂರುಗಳು ಕೇಳಿಬಂದಿದ್ದು ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದರು.
ಸಮಿತಿಯ ಪದಾಧಿಕಾರಿಗಳೊಂದಿಗೆ ನಾನು ಕೂಡ ದೂರುಗಳು ಕೇಳಿಬಂದಿರುವ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪಡಿತರದಾರರೊಂದಿಗೆ ಸಂವಾದ ನಡೆಸುವುದಾಗಿ ಪ್ರಕಟಿಸಿದ ಅವರು ಪಂಚ ಗ್ಯಾರಂಟಿ ಯೋಜನೆಗಳು ಅರ್ಹರ ಮನೆ ಬಾಗಿಲಿಗೆ ತಲುಪದಿದ್ದಲ್ಲಿ ಅದಕ್ಕೆ ಸಂಬoಧಿತ ಅಧಿಕಾರಗಳನ್ನೇ ಹೊಣೆಗಾರರನ್ನಾಗಿ
ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಉಚಿತ ವಿದ್ಯುತ್ ಸರಬರಾಜು ಮಾಡಲಾಗುತ್ತಿದ್ದರೂ ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ವಿಪರೀತವಾಗುತ್ತಿರುವುದರೊಂದಿಗೆ ಸೆಸ್ಕಾಂ ಇಲಾಖೆಯ ಅಸಮರ್ಪಕ ಸೇವೆಯ ಬಗೆಯೂ ಗ್ಯಾರಂಟಿ ಸಮಿತಿಗೆ ಹಲವು ದೂರುಗಳು ಬಂದಿದ್ದು ಮುಂದೆ ಸಮರ್ಪಕ ಸೇವೆ ನೀಡಿ ಸಾಲಿಗ್ರಾಮ ಭಾಗಕ್ಕೆ ಹೆಚ್ಚು ಗಮನ ಹರಿಸಬೇಕು ಎಂದು ಅಧ್ಯಕ್ಷರು ತಾಕೀತು ಮಾಡಿದರು.
ಶಕ್ತಿ ಯೋಜನೆಯಡಿ ಸಾರಿಗೆ ಬಸ್ಸುಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡುತ್ತಾರೆ ಎಂಬ ಮನೋಭಾವನೆಯನ್ನು ಚಾಲಕರು ಮತ್ತು ನಿರ್ವಹಕರು ಬಿಟ್ಟು ಅವರಿಗೆ ಉತ್ತಮ ಸೇವೆ ನೀಡಬೇಕು ಅದರೊಂದಿಗೆ ಆಧಾರ್ ಕಾರ್ಡ್ ಮರೆತು ಬಂದು ಮೊಬೈಲ್‌ಗಳಲ್ಲಿ ಪೋಟೋ ತೋರಿಸಿದರೆ ಟಿಕೇಟ್ ಹರಿದು ಪ್ರಯಾಣಕ್ಕೆ ಸಹಾಯ ಮಾಡದಿದ್ದಲ್ಲಿ ಅಂತಹವರ ವಿರುದ್ದ ಸರ್ಕಾರಕ್ಕೆ ದೂರು ನೀಡುವುದಾಗಿ ನುಡಿದರು.
ಗೃಹಲಕ್ಷಿö್ಮ ಯೋಜನೆಯಡಿ ಸರ್ಕಾರದ ವತಿಯಿಂದ ನೀಡುತ್ತಿರುವ ೨ ಸಾವಿರ ಹಣ ತಲುಪದಿದ್ದವರನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು ಗುರುತಿಸಿ ಅವರ ಮನೆ ಬಾಗಿಲಿಗೆ ತೆರಳಿ ದಾಖಲೆ ಪರಿಶೀಲಿಸಿ ಹಣ ಬರುವಂತೆ ನೋಡಿಕೊಂಡು ಈ ಸಂಬoಧ ಯಾವುದೇ ಸಮಸ್ಯೆಗಳಿದ್ದರೂ ನಮ್ಮ ಗಮನಕ್ಕೆ ತರಬೇಕೆಂದು ಆದೇಶಿಸಿದ ಅಧ್ಯಕ್ಷರು ಈ ಸಂಬoಧ ಸಹಕಾರ ಬಯಸಿ ಕಛೇರಿಗೆ ಬರುವವರೊಂದಿಗೆ ಸೌಜನ್ಯದಿಂದ ವರ್ತಿಸಬೇಕೆಂದರು.
ಕೆ.ಆರ್.ನಗರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿದ ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳ ವ್ಯಾಪ್ತಿಯ ೫೯೭ ಮಂದಿ ನಿರುದ್ಯೋಗಿ ಪದವಿಧರರು ನೋಂದಣಿ ಮಾಡಿಸಿಕೊಂಡಿದ್ದು ೩೫೭ ಮಂದಿ ಹಣ ಪಡೆಯುತ್ತಿದ್ದು ಉಳಿದವರಿಗೂ ಯೋಜನೆಯ ಅನುಕೂಲ ದೊರೆಯಲು ಈ ಬಗ್ಗೆ ಹೆಚ್ಚು ಪ್ರಚಾರ ಮಾಡಬೇಕು ಎಂದರಲ್ಲದೆ ನಿಯಮಾನುಸಾರ ಪ್ರತಿ ತಿಂಗಳು ಸ್ವಯಂ ಘೋಷಣೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಸಾಲಿಗ್ರಾಮ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಉದಯಶಂಕರ್, ಸದಸ್ಯರಾದ ಸೈಯದ್‌ಜಾಬೀರ್, ಜಿ.ಎಂ.ಹೇಮoತ್, ಕೆಂಚಿಮoಜು, ಮಹದೇವನಾಯಕ, ಕುಮಾರ್, ಸರಿತಾಜವರಪ್ಪ, ಜಯಮ್ಮ, ಮಹಾಲಿಂಗು, ಮಂಚನಹಳ್ಳಿಧನು, ತಾ.ಪಂ. ಇಒ ವಿ.ಪಿ.ಕುಲದೀಪ್, ಕೌಶಲ್ಯಾಭಿವೃದ್ದಿ ಇಲಾಖೆಯ ಜಿಲ್ಲಾ ನಿರ್ದೇಶಕಿ ರಾಣಿ, ಸಿಡಿಪಿಒ ಸಿ.ಎಂ.ಅಣ್ಣಯ್ಯ, ಸೆಸ್ಕಾಂ ಎಇಇ ಅರ್ಕೇಶ್‌ಮೂರ್ತಿ, ಮಧುಸೂದನ್, ಆಹಾರ ಶಿರಸ್ತೇದಾರ್ ಮಂಜುನಾಥ್, ಸಾರಿಗೆ ಸಂಚಾರ ನಿಯಂತ್ರಣಾಧಿಕಾರಿ ಸುರೇಶ್ , ತಾ.ಪಂ.ಮ್ಯಾನೇಜರ್ ಕರ್ತಾಳ್ ಸತೀಶ್ ಮತ್ತಿತರರು ಇದ್ದರು.