ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಹೊಸೂರು ಕೃಷಿಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಹಳಿಯೂರು ಎಚ್.ಆರ್.ಕೃಷ್ಣಮೂರ್ತಿ(ಕೋಳಿಕಿಟ್ಟಿ) ಮತ್ತು ಉಪಾಧ್ಯಕ್ಷರಾಗಿ ಕೆಂಪನಾಯಕ ಸೋಮವಾರ ಅವಿರೋಧವಾಗಿ ಆಯ್ಕೆಯಾದರು.
ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಚ್.ಕೃಷ್ಣಮೂರ್ತಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕೆಂಪನಾಯಕ ಅವರನ್ನು ಹೊರತು ಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾದರು.
ಸಂಘದ ಹಾಲಿ ಅಧ್ಯಕ್ಷರಾಗಿದ್ದ ಕಮಲಮ್ಮಶಿವಣ್ಣ ಮತ್ತು ಉಪಾಧ್ಯಕ್ಷ ಎಚ್.ಬಿ.ನವೀನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಕಾರಣ ಈ ಚುನಾವಣೆ ನಿಗದಿಯಾಗಿತ್ತು .ಚುನಾವಣಾಧಿಕಾರಿಯಾಗಿ ಕೆ.ಆರ್.ನಗರ ಸಹಕಾರ ಇಲಾಖೆಯ ಸಿ.ಡಿ.ಓ. ಎಸ್. ರವಿದೊಡ್ಡೇಕೊಪ್ಪಲು ಕಾರ್ಯ ನಿರ್ವಹಿಸಿದರು.
ನಂತರ ಮಾತನಾಡಿದ ನೂತನ ಅಧ್ಯಕ್ಷ ಎಚ್.ಆರ್.ಕೃಷ್ಣಮೂರ್ತಿ ಮಾತನಾಡಿ ಸಂಘದ ಎಲ್ಲಾ ನಿರ್ದೇಶಕರ ಸಹಕಾರ ದೊಂದಿಗೆ ನೂತನವಾಗಿ ರೈತರಿಗೆ ರಸಗೊಬ್ಬರ, ಜೊತಗೆ ಟ್ಯಾಕ್ಟರ್ ಮತ್ತು ಹೊಸ ಸದಸ್ಯರಿಗೆ ಸಾಲ ವಿತರಿಸುವುದರ ಜತಗೆ ಹೊಸ ಕಟ್ಟಡ ನಿರ್ಮಾಣಕ್ಕೆ ಅಧ್ಯತೆ ನೀಡುವುದಾಗಿ ತಿಳಿಸಿದರು.
ಚುನಾವಣಾ ಸಭೆಯಲ್ಲಿ ಸಂಘದ ನಿರ್ದೇಶಕರಾದ ಎಚ್.ಆರ್.ಮಹೇಶ್, ಎಸ್.ಬಿ.ಹುಚ್ಚೇಗೌಡ, ಕಮಲಮ್ಮ,ಪಾರ್ಥಯ್ಯ,ಎಚ್.ಬಿ.ನವೀನ್,ರಾಜೇಗೌಡ ಸಂಘದ ಕಾರ್ಯದರ್ಶಿ ಚಂದ್ರಕಲಾಪಾಪೇಗೌಡ ಸೇರಿದಂತೆ ಮತ್ತಿತತರು ಹಾಜರಿದ್ದರು.
ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆಯನ್ನು ಪ್ರಕಟಿಸುತ್ತಿದ್ದಂತೇ ನಿವೃತ್ತ ಮುಖ್ಯಶಿಕ್ಷಕ ಎ.ಕುಚೇಲ್, , ಪಿ.ಎಲ್.ಡಿ.ಬ್ಯಾಂಕ್ ಮಾಜಿ ಅಧ್ಯಕ್ಷ ಹರಿಚಿದಂಬರ್, ಎಪಿಎಂಸಿ ಮಾಜಿ ನಿರ್ದೇಶಕ ಶಿವಸ್ವಾಮಿ, ಹಳಿಯೂರು ಗ್ರಾ.ಪಂ.ಮಾಜಿ ಅಧ್ಯಕ್ಷ ದಿಡ್ಡಹಳ್ಳಿ ಕೃಷ್ಣ, ಮಾಜಿ ಉಪಾಧ್ಯಕ್ಷ ಭಾಸ್ಕರ್, ಮಾಜಿ ಸದಸ್ಯ ಜಯಣ್ಣ ಮುಖಂಡರಾದ ಬಿ.ರಮೇಶ್, ಶಿವಣ್ಣ, ಎಚ್.ಯಶವಂತ್,ರಾಘವೇಂದ್ರ , ಡಿಚ್ಚಿಕೃಷ್ಣ, ರಾಮೇಗೌಡ, ಮದಿ, ಬುಡ್ಡನರಾಮಣ್ಣ, ಎಂಟುಮನೆ ವೆಂಕಟೇಗೌಡ , ಪುಟ್ಟ ಉಮೇಶ್, ಸೇರಿದಂತೆ ಮತ್ತಿತರರು ಅಭಿನಂಧಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.