Friday, April 18, 2025
Google search engine

Homeರಾಜ್ಯಸುದ್ದಿಜಾಲಕೆ.ಆರ್.ನಗರ: ಹೊಸಅಗ್ರಹಾರ ಗ್ರಾಪಂ ನೂತನ ಅಧ್ಯಕ್ಷರಾಗಿ ಹೆಚ್.ಎಂ.ರಾಮಚಂದ್ರ ಅವಿರೋಧ ಆಯ್ಕೆ

ಕೆ.ಆರ್.ನಗರ: ಹೊಸಅಗ್ರಹಾರ ಗ್ರಾಪಂ ನೂತನ ಅಧ್ಯಕ್ಷರಾಗಿ ಹೆಚ್.ಎಂ.ರಾಮಚಂದ್ರ ಅವಿರೋಧ ಆಯ್ಕೆ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಕೆ.ಆರ್.ನಗರ ತಾಲೂಕಿನ ಹೊಸಅಗ್ರಹಾರ ಪಂಚಾಯಿತಿಯ ಅಧ್ಯಕ್ಷರಾಗಿ ಹೆಚ್.ಎಂ. ರಾಮಚಂದ್ರ ಅವಿರೋಧವಾಗಿ ಆಯ್ಕೆಯಾದರು.

ಈವರೆಗೆ ಅಧ್ಯಕ್ಷರಾಗಿದ್ದ ಸೌಮ್ಯಶಿವಕುಮಾರ್ ಅವರ ರಾಜೀನಾಮೆ ಯಿಂದ ತೆರವಾದ ಸ್ಥಾನಕ್ಕೆ ಇಂದು ಚುನಾವಣಾ ನಡೆಯಿತು. ಅಧ್ಯಕ್ಷ ಸ್ಥಾನ ಸಾಮಾನ್ಯವಾಗಿರುವ ವರ್ಗ ಮೀಸಲಾಗಿದ್ದರಿಂದ ಹರಂಬಳ್ಳಿ ಗ್ರಾಮದ ಸದಸ್ಯ ಹೆಚ್.ಎಂ.ರಾಮಚಂದ್ರು ಒಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಬಿಇಓ ಆರ್.ಕೃಷ್ಣಪ್ಪ ಪ್ರಕಟಿಸಿದರು. ಪಿಡಿಓ ಶಲ್ಯ ಸಹಕಾರ ನೀಡಿದರು.

ನೂತನ ಅಧ್ಯಕ್ಷ ಹೆಚ್.ಎಂ.ರಾಮಚಂದ್ರ ಮಾತನಾಡಿ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳನ್ನು ಸಮರ್ಪಕವಾಗಿ ಅಭಿವೃದ್ಧಿ ಮಾಡುವುದು, ಕುಡಿಯುವ ನೀರು ಸೇರಿದಂತೆ ಅನೇಕ ಮೂಲಭೂತ ಸೌಕರ್ಯಗಳು ಹೆಚ್ಚಾಗಿ ಅಭಿವೃದ್ಧಿ ಮಾಡಲಾಗುವುದು ಎಂದರು.

ಉಪಾಧ್ಯಕ್ಷೆ ಆಶಾ ರಾಣಿ, ಸದಸ್ಯರಾದ ಮಾಹದೇವಮ್ಮ, ಸುಕನ್ಯಾ, ಜಯಲಕ್ಷ್ಮಿ, ಬೇಬಿಮಹೇಶ್, ಪುಪ್ಷಜಯರಾಮ್, ಬಿ.ಎಸ್.ಯೋಗೇಶ್, ಮಲ್ಲಿಕಾರ್ಜುನ್, ಶೇಖರ್, ಮಂಜೇಗೌಡ ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular