ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ತಾಲೂಕಿನ ಚೌಕಹಳ್ಳಿ ಗ್ರಾಮದ ಶನೈಶ್ಚರ ಸ್ವಾಮಿ ದೇವಾಲಯದ ರಾಜಗೋಪುರ ಉದ್ಘಾಟನಾ ಕಾರ್ಯಕ್ರಮ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅತ್ಯಂತ ವೈಭವದಿಂದ ನೆರವೇರಿತು.
ಆದಿ ಚುಂಚನಗಿರಿ ಮೈಸೂರು ಶಾಖಾ ಮಠದ ಡಾ.ಸೋಮೇಶ್ವರನಾಥ ಸ್ವಾಮೀಜಿ, ಗಾವಡಗೆರೆ ಗುರುಲಿಂಗ ಜಂಗಮ ಮಠದ ನಟರಾಜಸ್ವಾಮೀಜಿ, ಕಾಗಿನೆಲೆ ಕನಕಗುರು ಪೀಠದ ಕೆ.ಆರ್.ನಗರ ಶಾಖಾ ಮಠದ ಶಿವಾನಂದಪುರಿಸ್ವಾಮೀಜಿ, ಶಾಸಕ ಡಿ.ರವಿಶಂಕರ್ ಮತ್ತಿತರರು ಭಾಗವಹಿಸಿದ್ದರು.
ರಾಜಗೋಪುರ ಉದ್ಘಾಟನಾ ಅಂಗವಾಗಿ ಬೆಳಗ್ಗೆ ದೇವರ ಪ್ರತಿಷ್ಠಾಪನೆ, ಕಳಸಪ್ರತಿಷ್ಠಾಪನೆ, ಪೂರ್ಣಾಹುತಿ ಮತ್ತು ಮಹಾಮಂಗಳಾರತಿ ನಡೆಸಿ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಕೆ.ಆರ್.ನಗರ ಸೇರಿದಂತೆ ಜಿಲ್ಲೆಯ ವಿವಿದೆಡೆಗಳಿಂದ ಸಾವಿರಾರು ಮಂದಿ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಶನೈಶ್ಚರ ಸ್ವಾಮಿಯ ದರ್ಶನ ಪಡೆದು
ಪೂಜೆ ಸಲ್ಲಿಸಿದರು.
ದೇವಾಲಯಕ್ಕೆ ಸುತ್ತೂರು ಶಿವರಾತ್ರಿದೇಶೀಕೇಂದ್ರಸ್ವಾಮೀಜಿ ಭೇಟಿ ನೀಡಿ ದೇವಾಲಯದ ಸ್ವಾಗತ ಕಮಾನು ಉದ್ಘಾಟಿಸಿ ಶ್ರೀ ಸೂರ್ಯಪುತ್ರ ಸಭಾ ಭವನದ ಪ್ರಸಾದ ಭವನಕ್ಕೆ ಭೂಮಿ ಪೂಜೆ ನೆರವೇರಿಸಿದರು.
ರಾಜಗೋಪುರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ಡಿ.ರವಿಶಂಕರ್ ಮಾತನಾಡಿ
ಮನುಷ್ಯ ಆಧುನಿಕ ಯುಗದಲ್ಲಿ ಒತ್ತಡದ ಜೀವನ ನಡೆಸುತ್ತಿದ್ದು ಅದರಿಂದ ಹೊರ ಬರಲು ದೇವಾಲಯಗಳಿಗೆ ಭೇಟಿ ನೀಡಿ ಮನಸ್ಸನ್ನು ಶುದ್ದ ಮಾಡಿಕೊಳ್ಳಬೇಕು ಎಂದರು.
ಕಳೆದ ೬೦ ವರ್ಷಗಳಿಂದ ಚೌಕಹಳ್ಳಿ ಗ್ರಾಮದಲ್ಲಿ ಶ್ರೀ ಸೂರ್ಯಪುತ್ರ ಸೇವಾಡಳಿತ ಟ್ರಸ್ಟ್ ಮತ್ತು ಶ್ರೀ ಶಕ್ತಿ ಛಾಯಾದೇವಿ ಸೂರ್ಯಪುತ್ರ ಸೇವಾಟ್ರಸ್ಟ್ ವತಿಯಿಂದ ನಿರ್ವಹಣೆಯಾಗುತ್ತಿರುವ ಇಲ್ಲಿನ ಶನೈಶ್ಚರ ಸ್ವಾಮಿ ದೇವಾಲಯದವರು ಸಮಾಜ ಮುಖಿ ಕೆಲಸಗಳಿಗೂ ಆದ್ಯತೆ ನೀಡುತ್ತಿದ್ದು ಪ್ರಧಾನ ಅರ್ಚಕರಾದ ರಾಘವೇಂದ್ರಗುಡ್ಡಪ್ಪ ಅವರು ಇತರರಿಗೆ ಮಾದರಿ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ತಾ.ಪಂ. ಮಾಜಿ ಅಧ್ಯಕ್ಷ ಹಾಡ್ಯಮಹದೇವಸ್ವಾಮಿ, ಜಿ.ಪಂ. ಮಾಜಿ ಸದಸ್ಯ ಜಿ.ಆರ್.ರಾಮೇಗೌಡ, ರಾಷ್ಟಿçÃಯ ಮಾನವ ಹಕ್ಕುಗಳ ತನಿಖಾ ಸಮಿತಿ ಜಿಲ್ಲಾಧ್ಯಕ್ಷ ಪಿ.ಮಹದೇವ್,
ಗ್ರಾ.ಪಂ. ಸದಸ್ಯರಾದ ಶೇಖರ್, ಸುನೀತಾರಾಮೇಗೌಡ, ಜಿಲ್ಲಾ ಕಾಂಗ್ರೆಸ್ ಮುಖಂಡ ಜಿ.ಎಸ್.ವೆಂಕಟೇಶ್,
ಗ್ರಾಮದ ಮುಖಂಡರಾದ ನಾಗರಾಜು, ಗಣೇಶ್, ಜಯರಾಮು ಮತ್ತಿತರರು ಇದ್ದರು.