Tuesday, April 8, 2025
Google search engine

Homeಸ್ಥಳೀಯಕೆ.ಆರ್.ನಗರ ಇಂದಿರಾ ಕ್ಯಾಂಟೀನ್ ಗೆ ಪುರಸಭೆ ಮುಖ್ಯ ಅಧಿಕಾರಿ ಹಾಗೂ ಪುರಸಭಾ ಸದಸ್ಯರ ದಿಡೀರ್ ಭೇಟಿ:...

ಕೆ.ಆರ್.ನಗರ ಇಂದಿರಾ ಕ್ಯಾಂಟೀನ್ ಗೆ ಪುರಸಭೆ ಮುಖ್ಯ ಅಧಿಕಾರಿ ಹಾಗೂ ಪುರಸಭಾ ಸದಸ್ಯರ ದಿಡೀರ್ ಭೇಟಿ: ಪರಿಶೀಲನೆ

ಕೆ.ಆರ್.ನಗರ: ಬಡವರಿಗೆ ಕಮ್ಮಿ ದರದಲ್ಲಿ ಪ್ರತಿದಿನ ಮೂರು ಹೊತ್ತು ಉತ್ತಮ ರೀತಿಯ ಉಪಹಾರ ನೀಡುತ್ತಿರುವ ಇಂದಿರಾ ಕ್ಯಾಂಟೀನ್ ಗೆ ಇಂದು ಪುರಸಭಾ ಮುಖ್ಯ ಅಧಿಕಾರಿ ಜಯಣ್ಣ ಹಾಗೂ ಪುರಸಭಾ ಸದಸ್ಯರು ಭೇಟಿ ನೀಡಿ ರುಚಿ ಹಾಗೂ ಸ್ವಚ್ಛತೆಯ ಪರಿಶೀಲನೆ ನಡೆಸಿದರು.

ನಂತರ ಮಾತನಾಡಿದ ಪುರಸಭಾ ಮುಖ್ಯ ಅಧಿಕಾರಿ ಜಯಣ್ಣ, ಸಾರ್ವಜನಿಕರು ಸರ್ಕಾರದ ಬಡವರಿಗಾಗಿ ನೀಡಿರುವ ಇಂದಿರಾ ಕ್ಯಾಂಟೀನ್ ಅನ್ನು ಉಪಯೋಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಸಾರ್ವಜನಿಕರು ಇಲ್ಲಿನ ಆಹಾರದ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದು, ಕೆಲವು ಸಣ್ಣಪುಟ್ಟ ಲೋಪಗಳಿದೆ. ಅದನ್ನು ಕೂಡಲೇ ಸರಿಪಡಿಸುವುದಾಗಿ ತಿಳಿಸಿದರು.

ನಂತರ ಮಾತನಾಡಿದ ವಿನಯ್, ಗ್ರಾಮೀಣ ಪ್ರದೇಶದ ಜನರು ಮತ್ತು ವಿದ್ಯಾರ್ಥಿಗಳ ಉಪಯೋಗಕ್ಕಾಗಿ ಇನ್ನು ಕೆಲವೇ ದಿನಗಳಲ್ಲಿ ಬಸ್ ನಿಲ್ದಾಣ ಹಾಗೂ ಇಂದಿರಾ ಕ್ಯಾಂಟೀನ್ ಗೆ ಹೊಂದಿಕೊಂಡಂತೆ ಇರುವ ಕಾಂಪೌಂಡನ್ನು ತೆರೆವು ಮಾಡಿ, ಈ ಭಾಗದಿಂದಲೂ ಪ್ರವೇಶವನ್ನು ನೀಡಲಾಗುವುದು.ಇದರಿಂದ ಬಸ್ಸಿನಲ್ಲಿ ಬರುವ ಗ್ರಾಮೀಣ ಭಾಗದ ಜನಗರಿಗು ಅನುಕೂಲವಾಗುತ್ತದೆ ಎಂದು ತಿಳಿಸಿದರು.

RELATED ARTICLES
- Advertisment -
Google search engine

Most Popular