ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಹಿಂದುಳಿದ ನಾಯಕಿ ಮತ್ತು ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿ ಹಾಗೂ ಶಕ್ತಿ ದೇವತೆ ನಮ್ಮ ಇಂದಿರಾ ಗಾಂಧಿ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹಾಗೂ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಜಿ.ಆರ್.ರಮೇಗೌಡ ಕಾರ್ಯವೈಖರಿಯ ಬಗ್ಗೆ ಸ್ಮರಿಸಿದರು.
ಕೆ.ಆರ್.ನಗರ ಪಟ್ಟಣದ ಕಾಳೇನಹಳ್ಳಿ ರಸ್ತೆಯಲ್ಲಿರುವ ಪಕ್ಷದ ಕಛೇರಿಯಲ್ಲಿ ಎರಡು ಬ್ಲಾಕ್ ವತಿಯಿಂದ ಹಮ್ಮಿಕೊಂಡಿದ ಇಂದಿರಾಗಾಂಧಿ ಅವರ ೪೦ನೇ ವರ್ಷದ ಪುಣ್ಯ ಸ್ಮರಣೆಯ ಕಾರ್ಯಕ್ರಮವನ್ನು ಅವರ ಭಾವಚಿತ್ರಕ್ಕೆ ಪುಷ್ಪರ್ಚನೆಯ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತ ದೇಶದ ಉಕ್ಕಿನ ಮಹಿಳೆ ಇಂದಿರಾಗಾಂಧಿಯವರು ಸಮರ್ಥವಾಗಿ ಪ್ರಧಾನ ಮಂತ್ರಿ ಹುದ್ದೆಯನ್ನು ನಿರ್ವಹಿಸಿ ನೇರ ನಡೆನುಡಿಗೆ,ನಿರ್ಧಾರಗಳಿಗೆ ಹೆಸರಾದಂತ ದಿಟ್ಟ ಮಹಿಳೆ ಹಲವು ವಿರೋಧಗಳ ನಡುವೆಯೂ ಊಳುವವನೇ ಭೂಮಿಯ ಒಡೆಯ ಎಂಬ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವಲ್ಲಿ ದಿಟ್ಟ ನಿರ್ಧಾರ ತೆಗೆದುಕೊಂಡು ಹಲವಾರು ಬಡ ರೈತ ಕುಟುಂಬಗಳ ಏಳಿಗೆಗೆ ಕಾರಣಕರ್ತರಾದವರು ಎಂದು ಗುಣಗಾನ ಮಾಡಿದರು.
ಈ ಕಾರ್ಯಕ್ರಮದಲ್ಲಿ ಬ್ಲಾಕ್ ಅಧ್ಯಕ್ಷ ಹಾಗೂ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಸ್. ಮಹದೇವ, ಸಾಲಿಗ್ರಾಮ ಬ್ಲಾಕ್ ಅಧ್ಯಕ್ಷ ಉದಯ್ ಶಂಕರ್, ತಾಲೂಕು ವಕ್ತಾರ ಸೈಯದ್ ಜಾಬೀರ್, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಲತಾ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಗಡ್ಡ ಮಹೇಶ್, ಆರೋಗ್ಯ ರಕ್ಷಾ ಸಮೀತಿ ಸದಸ್ಯ ಹೆಬ್ಬಾಳು ನಾಗೇಂದ್ರ, ಪುರಸಭಾ ಮಾಜಿ ಅಧ್ಯಕ್ಷ ನರಸಿಂಹರಾಜು, ಓಬಿಸಿ ತಾಲೂಕು ಘಟಕದ ಅಧ್ಯಕ್ಷ ದೆಗ್ಗನಹಳ್ಳಿ ಆನಂದ, ತಾಲೂಕ ಸೇವಾ ದಳದ ಅಧ್ಯಕ್ಷ ಕುಮಾರ್, ಕಾಂಗ್ರೆಸ್ ಮುಖಂಡರಾದ ಸುಧಾಕರ್, ರವಿಕುಮಾರ್, ಮಂಜುನಾಥ್, ಮಹಾಲಿಂಗಪ್ಪ, ಸುಧಾಕರ್, ಪ್ರಜ್ವಲ್ ಸೇರಿದಂತೆ ಮತ್ತಿತರರು ಭಾಗವಹಿಸಿದರು.