Sunday, April 20, 2025
Google search engine

Homeಅಪರಾಧಕೆ.ಆರ್.ನಗರ: ಜೋಡಿ ಕೊಲೆ-ಪ್ಲಾಸ್ಟಿಕ್ ಚೀಲದಲ್ಲಿ ಪತ್ತೆಯಾದ ಶವಗಳು

ಕೆ.ಆರ್.ನಗರ: ಜೋಡಿ ಕೊಲೆ-ಪ್ಲಾಸ್ಟಿಕ್ ಚೀಲದಲ್ಲಿ ಪತ್ತೆಯಾದ ಶವಗಳು

ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಜೋಡಿ ಕೊಲೆ ಮಾಡಿ ಚೀಲದಲ್ಲಿ ತುಂಬಿ ಕಾವೇರಿ ನದಿಗೆ ಬಿಸಾಕಿದ್ದು ಶವವು ಮೈಸೂರು ಜಿಲ್ಲೆ ಕೆ.ಆರ್ ನಗರ ಪೊಲೀಸ್ ಠಾಣಾ ಸರಹದ್ದಿನ ಮೂಲೆಪೆಟ್ಲು ಗ್ರಾಮದ ಸಮೀಪದ ಕೆ‌ಆರ್.ಎಸ್ ಹಿನ್ನೀರಿನಲ್ಲಿ ಪತ್ತೆಯಾಗಿದೆ. ಕೆ.ಆರ್.ನಗರ ತಾಲೂಕು ಮೂಲೆಪೆಟ್ಲು ಸಮೀಪದ ಸಾಗರಕಟ್ಟೆ ಹಿನ್ನೀರಿನಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿದ ಪರಿಸ್ಥಿತಿಯಲ್ಲಿ ಇಬ್ಬರು ಯುವಕರ ಮೃತದೇಹ ಪತ್ತೆಯಾಗಿವೆ.
ಸುಮಾರು 25 ರಿಂದ 30 ವರ್ಷ ವಯಸ್ಸಿನ ಯುವಕರನ್ನ ಮತ್ತೊಂದು ಸ್ಥಳದಲ್ಲಿ ಕೊಂದು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಸಾಗರಕಟ್ಟೆ ಹಿನ್ನೀರಿನಲ್ಲಿ ಬಿಸಾಡಿರುವ ಶಂಕೆ ವ್ಯಕ್ತವಾಗಿದೆ.
ಓರ್ವನ ಕೈ ಮೇಲೆ ನಾಗರಾಜನ್ VR POSTER 4B LEGEND ಎಂದು ಅಚ್ಚೆ ಹಾಕಿರುವುದು ಕಂಡು ಬಂದಿದೆ. ಅದೇ ರೀತಿ ಮತ್ತೊರ್ವನ ಶವ ಬೆಳಗ್ಗೆ ಅದೇ ಸ್ಥಳದಲ್ಲಿ ಪತ್ತೆಯಾಗಿದ್ದು ಮತ್ತೊರ್ವನ ಕೈಯಲ್ಲಿ ಸೂಪರ್ ಮ್ಯಾನ್ , ಅಮ್ಮ ಎಸ್,ಉಪೇಂದ್ರ,VR46 the doctor Legend ಎಂದು ಹಚ್ಚೆ ಹಾಗೂ ಬಲಕೈಯಲ್ಲಿ ಸಿಂಹದ ಚಿತ್ರ ಹಾಗೂ ಶಿಲುಬೆ ಚಿತ್ರ. ಮತ್ತು ಹೃದಯದ ಒಳಗೆ AM ಎಂದು ಹಾಕಲಾಗಿದೆ.
ಈ ಬಗ್ಗೆ ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಬೇಟಿ ನೀಡಿದ ಕೆ.ಆರ್.ನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸಂತೋಷ್ , ಪಿಎಸ್ ಐ ಗಳಾದ ಧನರಾಜು,ನಂಜಪ್ಪ ಸಿಬ್ಬಂದಿಗಳಾದ ಧನಂಜಯ, ಜವರೇಶ್, ಮಂಜು,ದೇವರಾಜು,ರಾಘವೇಂದ್ರ,ಪುನಿತಾ,ಆಲಿ ತಂಡ ತಡರಾತ್ರಿ ಒಬ್ಬನ ಶವ ಮೇಲೆಕ್ಕೆತ್ತಿ ಪರಿಶೀಲನೆ‌ ನಡೆಸಿದರು.
ಬೆಳ್ಳಂಬೆಳಗ್ಗೆ ಮತ್ತೊರ್ವನ ಶವ ಅದೇ ಸ್ಥಳ( ಹಿನ್ನೀರಿನಲ್ಲಿ) ಪತ್ತೆಯಾಗಿದ್ದು ಅಡಿಷನಲ್ ಎಸ್ಪಿ ನಂದಿನಿ ಮತ್ತು ಡಿವೈಎಸ್ಪಿ ಕರೀಂರಾವತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಪೊಲೀಸರು ಮೃತರ ಮಾಹಿತಿ ಕಲೆ ಹಾಕಲು ಮುಂದಾಗಿದ್ದಾರೆ.

ಈರ್ವರನ್ನು ಬೇರೆ ಎಲ್ಲೋ ಕೊಲೆ ಮಾಡಿ ನಂತರ ಚೀಲದಲ್ಲಿ ಕಟ್ಟಿ ಕಾವೇರಿ ನದಿಗೆ ಬಿಸಾಡಿ ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಶವಗಳನ್ನು‌ ಮೈಸೂರಿನ ಕೆ.ಆರ್.ಆಸ್ವತ್ರೆಯ ಹಳೇಶವಗಾರಕ್ಕೆ ಸಾಗಿಸಲಾಗಿದ್ದು ಯಾರಾದರು ವಾರಸುದಾರರು ಇದ್ದರೆ ಕೆ.ಆರ್.ನಗರ ಪೊಲೀಸರನ್ನ ಸಂಪರ್ಕಿಸುವಂತೆ ಕೋರಲಾಗಿದೆ.

ಇದಕ್ಕೂ ಮೊದಲು ಹಿನ್ನೀರಿನಲ್ಲಿ ಬೆಳಗ್ಗೆ ಪತ್ತೆಯಾದ ಶವವನ್ನು ಬೆರಳಚ್ಚು ತಜ್ಞರು, ಎಫ್.ಎಸ್.ಐ.ಎಲ್. ತಂಡ, ಶ್ವಾನದಳ ಸೇರಿದಂತೆ ಪೊಲೀಸ್ ಅಧಿಕಾರಿಗಳ ತಂಡ ಆಗಮಿಸಿ ಪರಿಶೀಲನೆ ನಡೆಸಿದರು.

ಕೊಲೆಯಾದವರ ವಾರಸ್ಸುದಾರರು ಪತ್ತೆಯಾದರೇ ಸುಲಭವಾಗಿ ಕೊಲೆಗಾರರನ್ನು ಕಂಡು ಹಿಡಿಯಲಾಗವುದು ಎಂದು ಪೊಲೀಸ್ ಇನ್ಸ್ ಪೆಕ್ಟರ್ ಪಿ.ಪಿ.ಸಂತೋಷ್ ತಿಳಿಸಿದರು.

ಒಂದೇ ತಂಡದಿಂದಲೇ ಕೃತ್ಯ..?ಪೊಲೀಸರಿಗೆ ತಲೆ ನೋವಾದ ಪ್ರಕರಣ :
ಕೊಲೆ ಮಾಡಿ ಎರಡು ಶವಗಳನ್ನು ಚೀಲದಲ್ಲಿ ತುಂಬಿ ಬಿಸಾಕಿರುವ ಪ್ರರಣ ನೋಡಿದರೇ ಒಂದೇ ತಂಡ ದಿಂದಲೇ ಈ ಕೊಲೆ ನಡೆದಿರುವ ಅನುಮಾನ ಪೊಲೀಸ್ ಇಲಾಖೆಯಿಂದ ವ್ಯಕ್ತವಾಗುತ್ತಿದೆ.
ಕೆ.ಆರ್.ನಗರ ತಾಲೂಕಿನ ಮೂಲೆಪೆಟ್ಲು ಬಳಿ ಕಾವೇರಿ ಹಿನ್ನೀರಿನ ಬಳಿ ಕೊಲೆ ಮಾಡಿ ಎರಡು ಶವಗಳನ್ನು ಚೀಲಗಳಲ್ಲಿ ತುಂಬಿ ಕಟ್ಟು ಹಾಕಿ ಬಿಸಾಡಿ ಹೋಗಿದ್ದು ಈ ಶವಗಳನ್ನು ತುಂಬಿದ ಚೀಲಗಳು ತೇಲುತ್ತಿರುದನ್ನು ನೋಡಲಾಗಿ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ
ಈ ಎರಡು ಶವಗಳು ಮತ್ತು ಚೀಲಗನ್ನು ಕಟ್ಟು ಹಾಕಿರುವುದನ್ನು ನೋಡಿದರೇ ಯಾವುದೋ ಒಂದು ತಂಡ ಈ ಇಬ್ಬರನ್ನು ಕೊಲೆ ಮಾಡಿ ನಂತರ ಇವುಗಳನ್ನು ಚೀಲದಲ್ಲಿ ತುಂಬಿ ಕಟ್ಟು ಹಾಕಿ ನಂತರ ತಂದು ಇಲ್ಲಿಗೆ ಎಸೆದು ಹೋಗಿರು ಶಂಕೆ ವ್ಯಕ್ತವಾಗಿದೆ.
ಇದೀಗ ಕೊಲೆಯಾಗಿರುವ ಶವಗಳು ಮೂಲೆ ಪೆಟ್ಟು ಬಳಿ ಸಿಕ್ಕಿರುವ ಪರಿಣಾಮ ಇದೀಗ ಕೊಲೆಗಳ ಪ್ರಕರಣದವನ್ನು ಭೇದಿಸಬೇಕಾದ ಜವಬ್ದಾರಿ ಕೆ.ಆರ್.ನಗರ ಪೊಲೀಸರ ಮೇಲೆ ಬಿದ್ದು ಇದೀಗ ಕೊಲೆ ಆಗಿರುವ ವ್ಯಕ್ತಿಗಳು ಹಾಕಿಸಿ ಕೊಂಡಿರುವ ಹಚ್ಚೆಗುರುತುಗಳು ಪೊಲೀಸರಿಗೆ ಯಾವ ರೀತಿ ತನಿಖೆ ಸಹಕರಿಸಲಿದೆ ಎಂಬುದು ನಿಗೂಡವಾಗಿದ್ದರು ಪೊಲೀಸರು ತಮ್ಮದೇ ಅದ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ.

RELATED ARTICLES
- Advertisment -
Google search engine

Most Popular