ಕೆ ಆರ್ ನಗರ: ನಗರದ ಗರುಡಗಂಬ ವೃತ್ತದ ಬಳಿ ರೈತ ಹೋರಾಟಗಾರ ಗರುಡಗಂಬ ಸ್ವಾಮಿ ರವರಿಂದ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಯಿತು.
ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮತ್ತು ಸಮಾಜ ಸೇವೆ ಮಾಡುತ್ತಿರುವ ಗಣ್ಯರನ್ನು ಗುರುತಿಸಿ ತಮ್ಮ ಸ್ವಂತ ಹಣ ಹಣದಲ್ಲಿ ಸನ್ಮಾನಿಸಿದರು.

ನಮ್ಮ ಯುವ ಪೀಳಿಗೆ ಕನ್ನಡದ ಬಗ್ಗೆ ನಮ್ಮ ಸಂಸ್ಕೃತಿಯ ಬಗ್ಗೆ ಹೆಚ್ಚು ಹೆಚ್ಚು ಗಮನವಹಿಸಬೇಕು ಮತ್ತು ನಮ್ಮ ಜಲ ನೆಲದ ಬಗ್ಗೆ ಗೌರವ ಹೊಂದಿರಬೇಕು ನಮ್ಮ ನೆಲದ ಬಗ್ಗೆ ಇತರರಿಗೆ ತಿಳಿಸಬೇಕು ಎಂದು ತಿಳಿಸಿದರು.