ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಕೆ.ಆರ್.ನಗರ ತಾಲ್ಲೂಕಿನ ಗಂಧನಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಮಹದೇವಿ ಬಲರಾಮ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದೆ ಅಧ್ಯಕ್ಷರಾಗಿದ್ದ ತಾರಾಹರೀಶ್ ಅವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮಹದೇವಿಬಲರಾಮ್ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಮಹದೇವಿಬಲರಾಮ್ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾ ಅಧಿಕಾರಿಯಾಗಿದ್ದ ಸಿಡಿಪಿಓ ಅಣ್ಣಯ್ಯ ಅಧಿಕೃತವಾಗಿ ಘೋಷಣೆ ಮಾಡಿದರು.
ಚುನಾವಣಾ ಪ್ರಕ್ರಿಯೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಡಿ.ಅನಂತಕುಮಾರ, ಸದಸ್ಯರುಗಳಾದ ಭಾಗ್ಯಜ್ಯೋತಿ, ಜಿ.ಸಿ.ಸತೀಶ್, ರುಕ್ಮಿಣಿ, ಜಿ.ಆರ್.ಲೋಕೇಶ್, ಜಿ.ಪಿ.ಮಂಗಳಮ್ಮ, ಜಿ.ಎಸ್.ಸಣ್ಣದೊಡ್ಡೇಗೌಡ,
ಜಿ.ಎಸ್.ರಾಜೇಗೌಡ, ಜಿ.ಕೆ.ಕುಮಾರ, ರಾಜಮ್ಮ, ಜಯರಾಮೇಗೌಡ, ಪಿಡಿಓ ಚಂದ್ರಶೇಖರ ಭಾಗವಹಿಸಿದ್ದರು.
ಚುನಾವಣಾ ಫಲಿತಾಂಶ ಪ್ರಕಟಗೊಂಡ ನಂತರ ನೂತನ ಅಧ್ಯಕ್ಷರನ್ನು ಜಿಲ್ಲಾ ಪರಿಷತ್ ಮಾಜಿ ಸದಸ್ಯೆ ಪಾರ್ವತಮ್ಮ, ಯಜಮಾನ ರಘು, ತಾ.ಪಂ. ಮಾಜಿ ಸದಸ್ಯರಾದ ಗಾಂಧಿಶಿವಣ್ಣ, ಮಂಜುನಾಥ್, ಗ್ರಾ.ಪಂ. ಮಾಜಿ ಅಧ್ಯಕ್ಷ ಯೋಗೇಶ್, ಮಾಜಿ ಉಪಾಧ್ಯಕ್ಷ ಕೃಷ್ಣೆಗೌಡ, ತಾಲ್ಲೂಕು ಡೇರಿಗಳ ನೌಕರರ ಸಂಘದ ಅಧ್ಯಕ್ಷ
ಜಿ.ಕೆ.ಮಹದೇವ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯ ಜಿ.ಎಂ.ಹೇಮಂತ್, ನಿವೃತ್ತ ಪ್ರಾಂಶುಪಾಲ ಕೆ.ನಿಂಗೇಗೌಡ, ಮುಖಂಡರಾದ ಜಯರಾಮೇಗೌಡ, ಮಹದೇವ್, ರಂಗೇಗೌಡ, ಲಕ್ಕೂಗೌಡ, ಬಾರ್ ಹರೀಶ್, ಜಿ.ಕೆ.ರಾಮೇಗೌಡ, ಚಿಕ್ಕೇಗೌಡ, ಎಸ್.ರಾಮು, ಜಿ.ಕೆ.ಜವರೇಗೌಡ, ಪೈಲ್ವಾನ್ ರಾಮೇಗೌಡ, ಧರ್ಮ, ಜಯರಾಜ್, ಲೋಹಿತ್, ಗ್ರಾಮ ಪಂಚಾಯಿತಿಯ ಸದಸ್ಯರುಗಳು, ಸಿಬ್ಬಂದಿ ವರ್ಗದವರು, ಮುಖಂಡರುಗಳು ಅಭಿನಂದಿಸಿದರು. ನೂತನ ಅಧ್ಯಕ್ಷರ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ವಿತರಿಸಿ ಸಂಭ್ರಮಿಸಿದರು.