ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಕೆ.ಆರ್.ನಗರ ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷರಾಗಿ ಬಡಕನಕೊಪ್ಪಲು ಮಲ್ಲಿಕಾರ್ಜುನ್ ಅವರು ಅವಿರೋಧವಾಗಿ ಸೋಮವಾರ ಆಯ್ಕೆಯಾದರು. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಡಕನಕೊಪ್ಪಲು ಮಲ್ಲಿಕಾರ್ಜುನ್ ಅವರನ್ನು ಹೊರತು ಪಡಿಸಿ ಬೇರೆಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾದರು.
ಈ ಹಿಂದೆ ಅಧ್ಯಕ್ಷರಾಗಿದ್ದ ಚಂದ್ರೇಗೌಡ ರಾಜಿನಾಮೆ ನೀಡಿದ ಕಾರಣ ತೆರವಾಗಿದ್ದ ಸ್ಥಾನಕ್ಕೆ ಈ ಚುನಾವಣೆ ನಿಗದಿಯಾಗಿತ್ತುನಂತರ ಮಾತನಾಡಿದ ಮಲ್ಲಿಕಾರ್ಜುನ್ ಮಾತನಾಡಿ ರಾಜ್ಯ ಬರಗಾಲ ಪರಿಸ್ಥಿತಿ ಅನುಭವಿಸುತ್ತಿದ್ದು ಈ ಸಂದರ್ಭದಲ್ಲಿ ಸರ್ಕಾರದ ವತಿಯಿಂದ ರೈತರಿಗೆ ದೊರೆಯವು ಸೌಲಭ್ಯಗಳನ್ನು ನಮ್ಮ ಶಾಸಕರಾದ ಡಿ.ರವಿಶಂಕರ್ ಮೂಲಕ ತಾಲೂಕಿನ ರೈತರ ಶ್ರೇಯೋಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಪುಷ್ವರೇವಣ್ಣ, ನಿರ್ದೇಶಕರುಗಳಾದ ಕೆ.ಟಿ.ಚಂದ್ರೇಗೌಡ, ಎನ್.ಸಿ.ಪ್ರಸಾದ್, ಸಿದ್ದೇಗೌಡ, ಕಲಾವತಿ, ಬಿ.ಎಸ್.ಚಂದ್ರಹಾಸ, ಪುಷ್ಪಾ ಡಿ.ಜಿರೇವಣ್ಣ, ಎಂ.ಎಸ್.ಚಿದಂಬರ್, ಪ್ರೇಮಕುಳ್ಳಬೋರೇಗೌಡ, ಸಿ.ಎಸ್.ಚಂದ್ರಶೇಖರ್, ಸಿದ್ದನಾಯಕ, ಪರಶುರಾಮ, ರಾಮೇಗೌಡ, ಪ್ರದೀಪ್ ವ್ಯವಸ್ಥಾಪಕ ಆರ್.ಎಂ.ಗಾಯಿತ್ರಮ್ಮ, ಕ್ಷೇತ್ರ ಅಧಿಕಾರಿ ಕುಮಾರ್, ಗಣಕಯಂತ್ರ ಸಹಾಯಕಿ ಬಿ.ಆರ್.ಉಷಾ, ಹೆಚ್.ಡಿ.ಶೃತಿ, ಪಿಗ್ನಿ ಸಂಗ್ರಹ ಮಂಜುನಾಥ್ ಸಿಬ್ಬಂದಿಗಳಾದ ಡಿ.ಎನ್.ಹಾಲಪ್ಪ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಅಭಿಮಾನಿಗಳು ಹಾಜರಿದ್ದರು.