ವರದಿ:ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಗ್ಯಾರಂಟಿ ಯೋಜನೆಗೆ ಅನುಧಾನ ನೀಡುತ್ತಿರುವ ಸರ್ಕಾರ ಅಭಿವೃದ್ದಿ ಕಡೆಗಣಿಸಿದೆ ಎಂಬ ವಿರೋದ ಪಕ್ಷಗಳು ಮಾಡುತ್ತಿರುವ ಅಪ್ರಪಚಾರ ನಿಲ್ಲಿಸಲಿ ವಿರೋದ ಪಕ್ಷಗಳ ಕ್ಷೇತ್ರಕ್ಕೆ ನೀಡಿರುವ ಅನುಧಾನ ಬಗ್ಗೆ ಯಾಕೆ ಮಾತಾಡುತ್ತಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೋಳಿ ಪ್ರಶ್ನಿಸಿದರು.
ಸಾಲಿಗ್ರಾಮ ತಾಲೂಕಿನ ಹೊಸಕೋಟೆ ಗ್ರಾಮದಿಂದ ಮಳಲಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 20 ಕೋಟಿ ರೂ ವೆಚ್ಚದ ಲೋಕೋಪಯೋಗಿ ಇಲಾಖೆಯಿಂದ ಕೈಗೊಂಡಿರುವ ರಸ್ತೆ ಅಭಿವೃದ್ದಿ ಕಾಮಗಾರಿಗೆ ಗುದ್ದಲಿ ಪೂಜೆ ನೇರವೇರಿಸಿ ನಂತರ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.

ಗ್ಯಾರಂಟಿ ಯೋಜನೆಗಳಿಗೆ 58 ಸಾವಿರ ಕೋಟಿಯನ್ನು ಮೀಸಲು ಇಟ್ಟಿದ್ದೇವೆ ನಮ್ಮ ಇಲಾಖೆಯಿಂದ ರಾಜ್ಯದ ಎಲ್ಲಾ ಕ್ಷೇತ್ರಗಳಿಗೂ ತಲಾ50 ಕೋಟಿ ಮತ್ತು ಸಚಿವ ಪ್ರಿಯಾಂಕ ಖರ್ಗೆ ಅವರ ಇಲಾಖೆಯ ಮೂಲಕ ಪ್ರತಿ ಕ್ಷೇತ್ರಕ್ಕೆ 10 ಕೋಟಿ ಸೇರಿದಂತೆ ನೂರಾರು ಕೋಟಿ ರೂಗಳನ್ನು ಬಿಡುಗಡೆ ಮಾಡಿದ್ದೇವೆ ಅದರು ಕೂಡ ವಿರೋಧ ಪಕ್ಷಗಳು ಅಭಿವೃದ್ದಿ ಕಡೆಗಣಿಸಿವೆ ಎಂದು ಬೊಬ್ಬೆ ಹಾಕುತ್ತಿವೆ ಎಂದರು.
ಮೈಸೂರು ಜಿಲ್ಲೆಯ ಭಾಗದ ಎಲ್ಲಾ ಕ್ಷೇತ್ರಗಳಿಗೂ ಅನುದಾನ ಕೊಡಲಾಗಿದೆ, ಮಸೀದಿ, ಸ್ಮಶಾನ, ಸೇರಿದಂತೆ ಮನೆಗಳಿಗೆ ಹಣ ಕೊಡಲಾಗುತ್ತಿದೆ, ಸಿದ್ದರಾಮಯ್ಯನವರು ಸರ್ಕಾರ ಜನಪರ ಸರ್ಕಾರ ಜನರ ಬಳಿ ಹೋಗುವ ಸರ್ಕಾರ ವಾಗಿದ್ದು ೨೦೨೮ ಕ್ಕೆ ಶಾಸಕ ಡಿ.ರವಿಶಂಕರ್ ಗೆಲುವುಗೆ ಸರ್ಕಾರದ ಸಂಪುಟದಿಂದ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡುತ್ತೇವೆ ಎಂದು, ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಸಿದ್ದರಾಮಯ್ಯನವರ ಸರ್ಕಾರದ ಮೇಲೆ ಇರಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಡಿ.ರವಿಶಂಕರ್ ಮಾತನಾಡಿ ಶಾಸಕ ಡಿ.ರವಿಶಂಕರ್ ಮಾತಾನಡಿ ವಿಧಾನಸಭಾ ಚುನಾವಣೆಗೆ ಮುಂಚೆ ಜನಾರ್ಶೀವಾದ ಯಾತ್ರೆಯ ಸಂದರ್ಭದಲ್ಲಿ ಹಳ್ಳಿಗಳಿಗೆ ಬೇಟಿ ನೀಡಿದಾಗ ಕ್ಷೇತ್ರದ ಹಲವಾರು ಗ್ರಾಮದಲ್ಲಿ ರಸ್ತೆಗಳ ಸಮಸ್ಯೆ ಹೇಳಿ ಕೊಂಡಿದ್ದರು. ಅದರಂತೆ ೨೦ ಕೋಟಿ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೇ ಸಿಕ್ಕಿದೆ, ಅದೇ ರೀತಿ ಪುರಸಭೆ ವೃತ್ತದಿಂದ ಚೀರ್ನಹಳ್ಳಿ ವರಗೆ ನಾಲ್ಕು ಪಥದ ರಸ್ತೆ ನಿರ್ಮಾಣ ಹಲವಾರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಇಂದು ವಿದ್ಯುಕ್ತವಾಗಿ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆ ಮಾಡಲಾಗಿದೆ ಎಂದರು.
ಅದೇ ರೀತಿ ಲೋಕೋಪಯೋಗಿ ಇಲಾಖೆಯ ವಸತಿ ಗೃಹಗಳನ್ನು ಅಪಾರ್ಟ್ ಮೆಂಟ್ ಮಾದರಿಯಲ್ಲಿ ಕಟ್ಟಡ ನಿರ್ಮಾಣ, ವಕೀಲರ ಸಂಘಕ್ಕೆ ಭವನ ನಿರ್ಮಾಣಕ್ಕೆ ಭರವಸೆ ಕೊಟ್ಟಿದ್ಸಾರೆ, ಕೆ.ಆರ್.ನಗರ ಕ್ಷೇತ್ರಕ್ಕೆ ಮೊದಲ ಬಾರಿಗೆ ರಸ್ತೆಗಳಿಗೆ ಅನುದಾನ ಕೊಟ್ಟಿದ್ದಾರೆ, ಕಪ್ಪಡಿ ಮತ್ತು ಗಂಧನಹಳ್ಳಿ ಸಂಪರ್ಕ ಸೇತುವೆಯನ್ನು ಕಬ್ಬಿಣದ ಸೇತುವೆಯಾಗಿ ೨೫ ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಮಾರ್ಚ್ ೧ ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಂಕುಸ್ಥಾಪನೆ ಮಾಡಲಿದ್ದಾರೆ ಅಂದೇ ಪಟ್ಟಣದ ಪುರಸಭೆ ಬಯಲು ರಂಗಮಂದಿರಲ್ಲಿ ಬೃಹತ್ ವೇದಿಕೆಯಲ್ಕಿ ಕ್ಷೇತ್ರದ ವಿವಿದ ಸಮಗ್ರ ಅಭಿವೃದ್ಧಿ ಕಾಮಗಾರಿಗೆ ಚಾಲನೇ ನೀಡಿಲಿದ್ದಾರೆ ಎಂದು ಪ್ರಕಟಿಸಿದರು.
ಇದಕ್ಕು ಮೊದಲು ರಾಷ್ಟ್ರೀಯ ಹೆದ್ದಾರಿ ರಸ್ತೆ ಕೆ.ಆರ್.ನಗರ ಪಟ್ಟಣದಿಂದ ಚೀರನಹಳ್ಳಿ ಮಾರ್ಗವಾಗಿ ಕೆಸ್ತೂರು ಗೇಟ್ ವರಿಗೆ ಆಯ್ದ ಭಾಗದಲ್ಲಿ 6ಕೋಟಿ ವೆಚ್ಚದ ವರಗಿನ ರಸ್ತೆ ಅಭಿವೃದ್ದಿ ಕಾಮಗಾರಿಗೆ ಸಚಿವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕಾಂಗ್ರೇಸ್ ಮುಖಂಡ ದೊಡ್ಡಸ್ವಾಮೇಗೌಡ, ಜಿ.ಪಂ.ಮಾಜಿ ಅಧ್ಯಕ್ಷ ಬಸವರಾಜು, ತಾ.ಪಂ.ಮಾಜಿ ಅಧ್ಯಕ್ಷ ಹಾಡ್ಯಮಹದೇವಸ್ವಾಮಿ, ಪುರಸಭೆ ಅಧ್ಯಕ್ಷ ಶಿವುನಾಯಕ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಉದಯಶಂಕರ್, ಎಂ.ಎಸ್.ಮಹದೇವ್, ವಕ್ತಾರ ಸಯದ್ ಜಾಬೀರ್ ರಮೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ರಮೇಶ್, ಕುರುಬರ ಸಂಘದ ಅಧ್ಯಕ್ಷ ಚೀರನಹಳ್ಳಿ ಶಿವಣ್ಣ, ಪರಿಶಿಷ್ಟ ಪಂಗಡ ವಿಭಾಗದ ಅಧ್ಯಕ್ಷ ತಿಪ್ಪೂರು ಮಹದೇವನಾಯಕ ಕಾಂಗ್ರೇಸ್ ಮುಖಂಡರಾದ ಸಿ.ಪಿ.ರಮೇಶ್, ದಿಡ್ಡಹಳ್ಳಿ ಬಸವರಾಜು, ಮಿರ್ಲೆ ನಾಗರಾಜು,ವೈ.ಎಸ್.ಜಯಂತ್ ಡೈರಿಮಾದು ಎಚ್.ಜೆ.ರಮೇಶ್, ಚಿಕ್ಕಕೊಪ್ಪಲು ಗಿರೀಶ, ಹೊಸಕೋಟೆ ಚೆಲುವರಾಜು, ಸೋಮಶೇಖರಪ್ಪ, ಯೋಗೇಶ್, ಮಂಗಳರಮೇಶ, ಮಧು, ರವಿನಾಮದಾರಿ, ಜಯಣ್ಣನಾಯಕ, ರವಿನಾಯಕ, ಶೊಭರಾಣಿಮಹದೇವ್, ಚಿಬುಕಹಳ್ಳಿ ಸಹಕಾರ ಸಂಘದ ನಿರ್ದೇಶಕ ಶಿವು, ವೆಂಕಟೇಶ್, ತಹಸೀಲ್ದಾರ್ ನರಗುಂದ ಇಇ ಮುತ್ತುರಾಜ್, ಎಇಇ ಸುಮೀತಾ,ಇಂಜಿನಿಯರ್ ಸಿದ್ದೇಶ್ವರ ಪ್ರಸಾದ್, ಇನ್ಸ್ಪೆಕ್ಟರ್ ಕೃಷ್ಣರಾಜು, ಶಿವಪ್ರಕಾಶ್, ಎಸ್.ಬಿ.ಗಳಾದ ಪರುಶುರಾಮ್, ರಾಘು ಸೇರಿದಂತೆ ಮತ್ತಿತರರು ಹಾಜರಿದ್ದರು.
ಕಳೆದ ಒಂದುವರೆ ವರ್ಷದಿಂದ ಕ್ಷೇತ್ರಕ್ಕೆ ಹೆಚ್ಚಿನ ಅನುಧಾನ ಬಂದಿಲ್ಲ ಇದರ ಬಗ್ಗೆ ಕಾರ್ಯಕರ್ತರು ನಿರಾಸೆ ಆಗ ಬೇಡಿ ಇದೀಗ ಕ್ಷೇತ್ರಕ್ಕೆ ನೂರಾರು ಕೋಟಿ ಅನುಧಾನ ಬಿಡುಗಡೆ ಮಾಡಿಸಿದ್ದು ಅತಿ ಶೀಘ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನ ಕರೆಸಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು
ಡಿ.ರವಿಶಂಕರ್, ಶಾಸಕರು .ಕೆ.ಆರ್.ನಗರ