Friday, April 18, 2025
Google search engine

Homeರಾಜ್ಯಸುದ್ದಿಜಾಲಕೆ.ಆರ್.ನಗರ :ಮೊಹಮ್ಮದ್ ಹಾರಿಸ್ ಸುಮೈರ್ ನೇತೃತ್ವದಲ್ಲಿ ಪುರಸಭೆ ಮುಖ್ಯಾಧಿಕಾರಿ ಡಾ.ಜಯಣ್ಣ ಬಜೆಟ್ ಮಂಡನೆ

ಕೆ.ಆರ್.ನಗರ :ಮೊಹಮ್ಮದ್ ಹಾರಿಸ್ ಸುಮೈರ್ ನೇತೃತ್ವದಲ್ಲಿ ಪುರಸಭೆ ಮುಖ್ಯಾಧಿಕಾರಿ ಡಾ.ಜಯಣ್ಣ ಬಜೆಟ್ ಮಂಡನೆ

ವರದಿ : ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಕೆ.ಆರ್.ನಗರ ಪಟ್ಟಣದ ಪುರಸಭೆಯ ಅಧ್ಯಕ್ಷರ ಅವದಿ ಮುಕ್ತಾಯಗೊಂಡು ೯ ತಿಂಗಳು ಕಳೆದರೂ ಜನಪ್ರತಿನಿಧಿಗಳ ಆಡಳಿತ ಇನ್ನೂ ಜಾರಿಯಾಗದ ಹಿನ್ನೆಲೆಯಲ್ಲಿ ಆಡಳಿತಾಧಿಕಾರಿಯೂ ಆದ ಉಪವಿಭಾಗಾಧಿಕಾರಿ ಮೊಹಮ್ಮದ್ ಹಾರಿಸ್ ಸುಮೈರ್ ಅವರ ನೇತೃತ್ವದಲ್ಲೆ ಪುರಸಭೆ ಮುಖ್ಯಾಧಿಕಾರಿ ಡಾ.ಜಯಣ್ಣ ಬಜೆಟ್ ಮಂಡಿಸಿದರು.

ಪಟ್ಟಣಸದ ಪುರಸಭಾ ಸಭಾಂಗಣದಲ್ಲಿ ೨೦೨೪-೨೫ ನೇ ಸಾಲಿನ ಆಯ-ವ್ಯಯದ ಬಜೆಟ್ ಅಂದಾಜು ೧೨.೧೬ ಕೋಟಿ ಇದ್ದು ಇದರಲ್ಲಿ ಉಳಿತಾಯ ೨೬.೧೩ ಲಕ್ಷಗಳು ಮಾತ್ರ ಎಂದು ತಿಳಿಸಿದ ಅವರು ಪುರಸಭೆ ಸ್ವಂತ ಅಂದಾಜು ಆದಾಯ ಆಸ್ತಿ ತೆರಿಗೆಯಿಂದ ೨.೮೦ ಕೋಟಿ, ನೀರಿನ ತೆರಿಗೆ ೯೨ ಲಕ್ಷ, ವಾಣಿಜ್ಯ ಮಳಿಗೆಗಳಿಂದ ಬಾಡಿಗೆ ೯೯ ಲಕ್ಷ, ಉದ್ದಿಮೆ ಪರವಾನಿಗಿ ೧೫.೮ ಲಕ್ಷ, ಹಾಗೂ ಇತರೆ ಮೂಲಗಳಿಂದ ೧.೮೦ ಕೋಟಿ ಆದಾಯ ಬರುವ ನಿರೀಕ್ಷೆ ಇದೆ ಎಂದರು.

ಆದಾಯ ಮೂಲಗಳಲ್ಲಿ ಸಿಂಹಪಾಲು ಸರ್ಕಾರದ ವಿವಿಧ ಮೂಲಗಳಿಂದ ಬರುವ ಅನುದಾನಗಳದ್ದೆ ಆಗಿದ್ದು ಇದರಿಂದ ಅಂದಾಜು ೧೨ ಕೋಟಿ ರೂ. ನಿರೀಕ್ಷೆ ಮಾಡಲಾಗಿದೆ. ಪುರಸಭೆಯ ಸ್ವಂತ ಮೂಲಗಳಿಂದ ೫.೧೨ ಕೋಟಿ ರೂ. ನಿರೀಕ್ಷಿಸಲಾಗಿದೆ. ಸರಕಾರದ ವಿಶೇಷ ಅನುದಾನ ೫ ಕೋಟಿ ರೂ. ಸ್ವಚ್ಛಭಾರತ್ ಮಿಷನ್ ಯೋಜನೆಯಡಿ ಡಿಪಿಆರ್ ಅನುಷ್ಠಾನಕ್ಕಾಗಿ ಅನುದಾನ ೧.೩೦ ಕೋಟಿ ರೂ ಎಸ್‌ಎಫ್‌ಸಿ ವೇತನ ಅನುದಾನ ೩.೨೫ ಕೋಟಿ ಹಾಗೂ ವಿದ್ಯುತ್ ಶುಲ್ಕ ಪಾವತಿಗಾಗಿ ತಲಾ ೧.೫೦ ಕೋಟಿ ರೂ. ಹಾಗೂ ಎಸ್‌ಎಫ್‌ಸಿ ಮುಕ್ತನಿಧಿ ಹಾಗೂ ೧೫ನೇ ಹಣಕಾಸು ಅನುದಾನದಿಂದ ೧.೬೦ ಕೋಟಿ ರೂ. ನಿರೀಕ್ಷೆ ಮಾಡಲಾಗಿದೆ.

ಪುರಸಭೆಯಿಂದ ೨೦೨೪-೨೫ ನೇ ಸಾಲಿನಲ್ಲಿ ಭರಿಸ ಬೇಕಾದ ಅಂದಾಜು ಖರ್ಚುಗಳು:- ಪುರಸಭೆಯ ಕಛೇರಿಯ ನಿರ್ವಹಣೆಗೆ ೬೫ ಲಕ್ಷ ರೂ. ಬೇಕಿದ್ದು, ಕಟ್ಟಡ, ರಸ್ತೆಗಳು, ಚರಂಡಿಗಳು ಮ್ಯಾನ್‌ಹೋಲ್‌ಗಳ ದುರಸ್ತಿಗಾಗಿ ೭೦ ಲಕ್ಷ , ಬೀದಿ ದೀಪ ನಿರ್ವಹಣೆ ೩೫ ಲಕ್ಷ, ಪುರಸಭೆ ಸದಸ್ಯ ಅಧ್ಯಯನ ಪ್ರವಾಸಕ್ಕೆ ೧೦ ಲಕ್ಷ, ಪುರಸಭೆ ವಾಹನಗಳ ಇಂಧನ ಮತ್ತು ದುರಸ್ತಿಗೆ ಹಾಗೂ ನಿರ್ವಹಣೆಗೆ ೨೫ ಲಕ್ಷ, ಹೊರಗುತ್ತಿಗೆ ನೌಕರರು ಹಾಗೂ ನೇರಪಾವತಿ ನೌಕರರ ವೇತನ ೫೮ ಲಕ್ಷ, ಪೌರ ಕಾರ್ಮೀಕರ ಆರೋಗ್ಯ ತಪಾಸಣೆ ೩ ಲಕ್ಷ, ಪೌರ ಕಾರ್ಮಿಕರ ಬೆಳಗಿನ ಉಪಹಾರ ೧೦ಲಕ್ಷ, ಪೌರ ಕಾರ್ಮೀಕರಿಗೆ ವಿಮೆ ೬ ಲಕ್ಷ, ನೀರು ಸರಬರಾಜು ವಿಭಾಗದ ದುರಸ್ತಿ, ನಿರ್ವಹಣೆ, ಪೈಪ್ ಗಳ ಸಬರಾಜು, ಹೊರಗುತ್ತಿಗೆ ನೌಕರರ ವೇತನ, ಯುಜಿಡಿ ನಿರ್ವಹಣೆ ಸೇರಿದಂತೆ ೯೪ ಲಕ್ಷ ಸೇರಿದ್ದು, ಕಛೇರಿ ಯಂತ್ರೋಪಕರಣಗಳು, ೧೧ ಲಕ್ಷ, ರಸ್ತೆಗಳು ನಿರ್ವಹಣೆ ೨ ಕೋಟಿ, ಚರಂಡಿ ನಿರ್ಮಾಣ ಕ್ಕೆ ೧ ಕೋಟಿ, ಮಳೆ ನೀರು ಚರಂಡಿ ನಿರ್ಮಾಣ ೧೮ ಲಕ್ಷ, ಸ್ಮಶಾನಕ್ಕೆ ೩೦ ಲಕ್ಷ, ಘನತ್ಯಾಜ್ಯ ವಸ್ತು ವಿಲೇವಾರಿ ಘಟಕದ ಅಭಿವೃದ್ಧಿಗೆ ೧.೩೮ ಕೋಟಿ, ನೀರು ಸರಬರಾಜು ವಿಭಾಗಕ್ಕೆ ೫೦ ಲಕ್ಷ, ಯುಜಿಡಿ ಸಂಪರ್ಕ ಕಲ್ಪಿಸಲು ೨೦ ಲಕ್ಷ, ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ೧ ಕೋಟಿ, ಉದ್ಯಾನವನಗಳ ಅಭಿವೃದ್ಧಿಗೆ ೫೦ ಲಕ್ಷ ಖರ್ಚು ಮಾಡಲಾಗುವುದು ಎಂದ ಮಂಡಿಸಿದರು.

ಬಜೆಟ್ ಮೇಲಿನ ಚರ್ಚೆಯಲ್ಲಿ ಸದಸ್ಯ ಉಮೇಶ್ ಮಾತನಾಡಿ ೪೦ ಸಾವಿರ ಜನ ಸಂಖ್ಯೆ ಹೊಂದಿರುವ ಪಟ್ಟಣದಲ್ಲಿ ೩೦ ಗುಂಟೆ ಜಮೀನಿನಲ್ಲಿ ಮೃತರ ಅಂತ್ಯ ಸಂಸ್ಕಾರ ಮಾಡಲಾಗುತ್ತಿದೆ, ಪಕ್ಕದಲ್ಲಿ ಇರುವ ಖಾಸಾಗಿ ಅವರ ಜಮೀನು ಸ್ಮಶಾನಕ್ಕೆ ಕೊಡಲು ಸಿದ್ದರಿದ್ದಾರೆ ಮೊದಲು ಖರೀದಿಸಿ ಶವಗಳನ್ನು ಹೂತಿರುವ ಸ್ಥಳದಲ್ಲಿ ಮತ್ತೆ ಶವಗಳನ್ನು ಹೂಳ ಬೇಕಿದೆ ಎಂದು ಪುರಸಭೆ ಆಡಳಿತ ಅಧಿಕಾರಿ ಆದ ಉಪ ವಿಭಾಗಾಧಿಕಾರಿ ಮೊಹಮ್ಮದ್ ಹ್ಯಾರಿಸ್ ಸುಮೈರ್ ಅವರಿಗೆ ಮನದಟ್ಡು ಮಾಡಿದಾಗ ಆಡಳಿತ ಅಧಿಕಾರಿಗಳು ಒಪ್ಪಿಗೆ ಸೂಚಿಸಿ ಕೂಡಲೇ ತಹಸೀಲ್ದಾರ್ ಅವರಿಗೆ ಸ್ಥಳ ಪರಿಶೀಲಿಸುವಂತೆ ಸೂಚಿಸಿ ಭೂಸ್ವಾದೀನ ಅಥವಾ ಖರೀದಿ ಕ್ರಮ ವಹಿಸಿಲಾಗುವುದು ಎಂದು ಪ್ರಕಟಿಸಿದರು.

ಪುರಸಭೆಯ ಸದಸ್ಯರಾದ ನಟರಾಜು, ಕೆ.ಎಲ್.ಜಗದೀಶ್, ವೀಣಾವೃಷಬೇಂದ್ರಪ್ಲ, ತೋಂಟದಾರ್ಯ ಅವರಗಳು ಪಟ್ಟಣದಲ್ಲಿ ನಿತ್ಯ ಸಮಸ್ಯೆ ಆಗುತ್ತಿರುವ ಯುಜಿಡಿ ಸಂಪರ್ಕದಿoದ ಮ್ಯಾನ್ ಹೋಲ್ ಗಳ ಸಮಸ್ಯೆ ಹಾಗೂ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಜರುವ ಬಗ್ಗೆ ಗಮನ ಹರಿಸಿ ಎಂದು ಬಜೆಟ್ ಮಂಡನೆ ಸಭೆಯಲ್ಲಿ ತಮ್ಮ ಅಹವಾಲುಗಳನ್ನು ಮಂಡಿಸಿದರು.

ಪುರಸಭೆ ಸದಸ್ಯ ಉಮೇಶ್ ಮಾತನಾಡಿದರು

ಬಳಿಕ ಪುರಸಭೆ ಆಡಳಿತ ಅಧಿಕಾರಿ ಆದ ಉಪ ವಿಭಾಗಾಧಿಕಾರಿ ಮೊಹಮ್ಮದ್ ಹಾರಿಸ್ ಸುಮೈರ್ ಮಾತನಾಡಿ ಪಟ್ಟಣದ ಅಭಿವೃದ್ಧಿಗೆ ಆಗಬೇಕಾಗಿರುವದನ್ನು ಪಟ್ಟಿ ಮಾಡಿ ಸರ್ಕಾರಕ್ಕೆ ಅಂದಾಜು ಪಟ್ಟಿ ಕಳುಹಿಸಲಾಗುವುದು ಇವಾಗ ಕೆಲವೊಂದು ಸಮಸ್ಯೆಗಳನ್ನು ತಿಳಿಸಿದ್ದಿರಿ. ಆದ್ದರಿಂದ ಮುಂದಿನ ವಾರ ಮರ್ತೆ ಸರ್ವ ಸದಸ್ಯರ ಸಭೆ ಕರೆಯಾಲಾಗುವುದು ಆ ಸಭೆಗೆ ತಪ್ಪದೇ ಹಾಜರಾಗಿ ಎಂದು ತಿಳಿಸಿದರು.

ಪುರಸಭೆಯ ಬಜೆಟ್ ಮಂಡನೆ ಸಭೆಯಲ್ಲಿ ಸದಸ್ಯರಾದ ಸೌಮ್ಯಲೋಕೇಶ್, ಶಿವುನಾಯಕ್, ಶಂಕರ್‌ಸ್ವಾಮಿ, ಮಿಕ್ಸರ್ ಶಂಕರ್, ಶಾರದನಾಗೇಶ್, ಅಫ್ರೋಜ್ ಉನ್ನಿಸಾ, ವಾಹಿದಾಭಾನು, ಪುರಸಭೆ ಇಂಜಿನಿಯರ್ ಚಂದ್ರಶೇಖರ್, ವ್ಯವಸ್ಥಾಪಕಿ ಸುಧಾರಾಣಿ, ಅಕೌಂಟೆoಟ್ ಸ್ವಪ್ನ, ಕಂದಾಯ ರಮೇಶ್, ಹಿರಿಯ ಆರೋಗ್ಯಾಧಿಕಾರಿ ರಾಜೇಂದ್ರ, ಕಿರಿಯ ಆರೋಗ್ಯಾಧಿಕಾರಿ ಲೋಕೇಶ್ ಮತ್ತೀತರರು ಇದ್ದರು.

RELATED ARTICLES
- Advertisment -
Google search engine

Most Popular