ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಕೆ.ಆರ್.ನಗರ ಪಟ್ಟಣದ ಪುರಸಭೆ ಆಡಳಿತ ಮಂಡಳಿಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಕಳೆದ ೨೦ ತಿಂಗಳಿನಿoದ ಚುನಾವಣೆ ನಡೆಯದೆ ಗ್ರಹಣ ಬಡಿದ್ದಂತಾಗಿತ್ತು ಇದಕ್ಕೆ ಈಗ ಮುಕ್ತಿ ದೊರೆತ್ತಿದ್ದು ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲು ನಿಗದಿ ಪಡಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಜ.೧೩ರಂದು ವರಿಷ್ಟರ ಆಯ್ಕೆಗೆ ಚುನಾವಣೆ ನಡೆಯಲಿದ್ದು, ೨೩ ಸದಸ್ಯರ ಪೈಕಿ ೮ನೇ ವಾರ್ಡಿನಿಂದ ಕಾಂಗ್ರೆಸ್‌ನಿoದ ಚುನಾಯಿತರಾಗಿರುವ ಪರಿಶಿಷ್ಟ ಪಂಗಡದ ಏಕೈಕ ಸದಸ್ಯ ಶಿವುನಾಯಕ್ ಹೊರತು ಪಡಿಸಿ ಯಾರು ಇಲ್ಲದ ಕಾರಣ ಶಿವುನಾಯಕ್ ಅವರೇ ಅಧ್ಯಕ್ಷರಾಗುವುದು ಖಚಿತವಾಗಿದೆ.
ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳೆರಡು ಖಾಲಿ ಇದ್ದುದರಿಂದ ಕಳೆದ ಹಲವು ತಿಂಗಳಿoದ ಪಟ್ಟಣದ ಅಭಿವೃದ್ಧಿಗೆ ಹಿನ್ನಡೆಯಾಗಿತ್ತು. ಅಲ್ಲದೆ ಇದರೊಂದಿಗೆ ಸಾರ್ವಜನಿಕರ ಕೆಲಸಗಳು ಸರಿಯಾಗಿ ಆಗುತ್ತಿಲ್ಲ ಎಂಬ ದೂರು ಕೇಳಿ ಬಂದಿತ್ತು. ಇದನ್ನು ಅರಿತ ಶಾಸಕ ಡಿ. ರವಿಶಂಕರ್, ರಾಜ್ಯ ಸರ್ಕಾರ ಮತ್ತು ಸಂಬoಧಿತ ಸಚಿವರ ಮೇಲೆ ಒತ್ತಡ ಹೇರಿ ಮೀಸಲಾತಿ ನಿಗದಿ ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ ಪುರುಷನಿಗೆ ಮೀಸಲಾಗಿದ್ದು ಆ ವರ್ಗಕ್ಕೆ ಸೇರಿದ ಒಬ್ಬರೇ ಸದಸ್ಯ ಇರುವುದರಿಂದ ಅವಿರೋಧ ಆಯ್ಕೆ ಖಚಿತವಾಗಿದೆ. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಿರುವುದರಿಂದ ಇದಕ್ಕೆ ಹಲವು ಸದಸ್ಯರು ಪೈಪೋಟಿ ನಡೆಸಿದರು ಪಕ್ಷದ ಹೈಕಮಾಂಡ್ ಆದ
ಶಾಸಕ ಡಿ.ರವಿಶಂಕರ್, ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡರ ತೀರ್ಮಾನವೇ ಅಂತಿಮವಾಗಿದೆ. ಪಟ್ಟಣದ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನದ ಚುನಾವಣೆ ಜ. ೧೩ರಂದು ಸೋಮವಾರ ನಡೆಯಲಿದ್ದು ಅಧ್ಯಕ್ಷರಾಗಲಿರುವ ಶಿವುನಾಯಕ್ ಈಗಾಗಲೇ ಪಕ್ಷದ ಮುಖಂಡರೊoದಿಗೆ ಪಟ್ಟಣದಾದ್ಯಂತ
ಪ್ಲೇಕ್ಸ್ಗಳನ್ನು ಹಾಕಿಸಿದ್ದಾರೆ.
