ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಹಣಕಾಸು ವಿಚಾರವಾಗಿ ಯುವಕನನ್ನು ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ಸಿದ್ದನಕೊಪ್ಪಲು ಗ್ರಾಮದಲ್ಲಿ ನಡೆದಿದ್ದು ಕೊಲೆಯಾದ ಯುವಕ ತಾಲ್ಲೂಕಿನ ಬ್ಯಾಡರಹಳ್ಳಿ ಗ್ರಾಮದ ರಾಜೇಗೌಡರ ಮಗ ಚಂದ್ರಹಾಸ್ (35) ಎನ್ನಲಾಗಿದೆ.
ಬ್ಯಾಡರಹಳ್ಳಿ ಗ್ರಾಮದ ಚಂದ್ರಹಾಸ ಹಣಕಾಸು ವ್ಯವಹಾರ ನಡೆಸುತ್ತಿದ್ದು ಇದರಿಂದಾಗಿ ಬಂದ ಹಣದಿಂದ ತನ್ನ ಆರೋಗ್ಯಕ್ಕೆ ಖರ್ಚು ಮಾಡುತ್ತಿದ್ದು, ಈ ಸಂಬಂಧ ಸೋಮವಾರ ರಾತ್ರಿ ತಾಯಿ ಸರೋಜಮ್ಮ ಅವರಿಗೆ ಸಿದ್ದನಕೊಪ್ಪಲು ಗ್ರಾಮದ ಚಾಟಿ ಪಾಪಣ್ಣ ಅವರಿಗೆ ಸಾಲ ಕೊಟ್ಟಿದ್ದು ಅವರು ನನಗೆ ಹಣ ಕೊಡಬೇಕು ವಸೂಲಿ ಮಾಡಿ ಕೊಂಡು ಬರುತ್ತೇನೆ ಎಂದು ಹೇಳಿ ಹೋಗಿದ್ದು ಬೆಳಗ್ಗೆ ಕೊಲೆಯಾಗಿರುವ ಬಗ್ಗೆ ಸಿದ್ದನಕೊಪ್ಪಲು ಗ್ರಾಮದ ಶಬರಿಮಲೈಗೆ ಹೋಗುವರು ನಮ್ಮಗೆ ಸುದ್ದಿ ತಿಳಿಸಿದ್ದು ಕೂಡಲೇ ನಾವೆಲ್ಲರೂ ಸಿದ್ದನಕೊಪ್ಪಲು ಗ್ರಾಮದ ಆರಳಿಕಟ್ಟೆ ಬಳಿ ಹೋಗಿ ನೋಡಲಾಗಿ ನನ್ನ ಮಗ ರಕ್ತದ ಮಡುವಿನಲ್ಲಿ ಮೃತಪಟ್ಟಿದ್ದಾನೆ ಎಂದು ಕೊಲೆಯಾದ ಚಿಕ್ಕಪ್ಪನ ಮಗ ಕಾರ್ತಿಕ್ ಸಿದ್ದನಕೊಪ್ಪಲು ಗ್ರಾಮದ ಚಾಟಿ ಪಾಪಣ್ಣ ಕೊಲೆ ಮಾಡಿದ್ದು ಎಂದು ಈ ಸಂಬಂದ ಕೆ.ಆರ್.ನಗರ ಪೊಲೀಸ್ ಠಾಣೆಗೆ ದೂರ ದಾಖಲಿಸಿದ್ದಾರೆ.
ಕೊಲೆಯಾದ ಯುವಕ ಚಂದ್ರಹಾಸನಿಗೆ ವಯಸ್ಸಾದ ತಂದೆತಾಯಿ ಇದ್ದು, ಓರ್ವ ತಂಗಿಯನ್ನು ಮದುವೆ ಮಾಡಲಾಗಿದ್ದು, ಕುಟುಂಬಸ್ಥರ ಅಕ್ರಂಧನ ಮುಗಿಲು ಮುಟ್ಟಿತ್ತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ : ಬೆಳ್ಳಂಬೆಳಗ್ಗೆ ಸಿದ್ದನಕೊಪ್ಪಲು ಗ್ರಾಮದಲ್ಲಿ ಕೊಲೆಯಾಗಿರುವ ಸುದ್ದಿ ಪಟ್ಟಣದಲ್ಲಿ ಕಾಡ್ಗಿಚ್ಚಿನಂತೆ ಹರಡಿದೆ. ಇನ್ನೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಮತ್ತು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಲ್.ನಾಗೇಶ್, ಡಿವೈಎಸ್ ಪಿ ಕರೀಂ ರಾವ್ ತರ್ ಪಟ್ಟಣದ ಪೊಲೀಸ್ ಇನ್ಸ್ ಪೆಕ್ಟರ್ ಶಿವಪ್ರಕಾಶ್ ಬೇಟಿ ನೀಡಿ ಸ್ಥಳ ಪರೀಶಿಲಿಸಿ ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರನ್ನು ಕರೆಸಲಾಗಿತ್ತು ಓರ್ವ ಆರೋಪಿ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.