Saturday, April 19, 2025
Google search engine

Homeಅಪರಾಧಕೆ.ಆರ್.ನಗರ: ಓರ್ವ ವ್ಯಕ್ತಿ ಅನುಮಾನಸ್ಪದವಾಗಿ ಸಾವು

ಕೆ.ಆರ್.ನಗರ: ಓರ್ವ ವ್ಯಕ್ತಿ ಅನುಮಾನಸ್ಪದವಾಗಿ ಸಾವು

ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ವ್ಯಕ್ತಿ ಓರ್ವ ಬೆಂಕಿ ಹತ್ತಿ ಸಾವನ್ನಪ್ಪಿದಂತೆ ಅನುಮಾನಸ್ಪದವಾಗಿ ಮೃತಪಟ್ಟಿರುವ ಘಟನೆ ಸಾಲಿಗ್ರಾಮ ತಾಲೂಕಿನ ಹೊಸಕೋಟೆ ಕೊಪ್ಪಲು ಸಮೀಪದ ಅರಣ್ಯದಲ್ಲಿ ನಡೆದಿದೆ.
ಘಟನೆಯಲ್ಲಿ ಹುಣಸೂರು ತಾಲೂಕಿನ ಹರವೆ ಗ್ರಾಮದ ಲೇಟ್ ಚಿಕ್ಕ ಶೆಟ್ಟಿ ಎಂಬುವರ ಪುತ್ರ ಎಚ್.ಸಿ. ಹರೀಶ್(40) ಎಂಬುವರೇ ಅನುಮಾಸ್ಪದವಾಗಿ ಸಾವನ್ನಪ್ಪಿದವರಾಗಿದ್ದಾರೆ ಮೃತರಿಗೆ ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಇದ್ದಾರೆ.

ಮೃತರು ಸಾಲಿಗ್ರಾಮ ತಾಲೂಕಿನ ದೊಡ್ಡಕೊಪ್ಪಲು ಗ್ರಾಮದಲ್ಲಿ ಚಿಲ್ಲರೇ ಅಂಗಡಿ ನಡೆಸುತ್ತಿದ್ದು ರಾತ್ರಿ ಅಂಗಡಿ ಬಾಗಿಲು ಹಾಕಿ ಹರವೆ ಗ್ರಾಮಕ್ಕೆ ತೆರಳಿದವರು ಸುಟ್ಟ ರೀತಿಯಲ್ಲಿ ಇವರ ಶವ ಪತ್ತೆಯಾಗಿದೆ.ಸಾಲಿಗ್ರಾಮ ತಾಲೂಕಿನ ಕುಪ್ಪೆ ಫಾರೆಸ್ಟ್ ಮಳಲಿ- ಹೊಸಕೋಟೆ ರಸ್ತೆಯ ಪಕ್ಕದಲ್ಲಿ ಬಳಿ ಬೈಕ್ ಸಮೇತ ಅರ್ಧಂಬರ್ಧ ಸುಟ್ಟು ಸಾವನ್ನಪ್ಪಿದಂತೆ ಶವ ಪತ್ತೆಯಾಗಿದೆ.ಇವರು ಮನೆಗೆ ಬಾರದ ಹಿನ್ನಲೆಯಲ್ಲಿ ಮನೆಯವರು ರಾತ್ರಿಯಲ್ಲಾ ಹುಡುಕಿದರು ಇವರು ಪತ್ತೆಯಾಗಲಿಲ್ಲ.

ಬೆಳಿಗ್ಗೆ ಈ ಅರಣ್ಯದ ಬಳಿ ಸುಟ್ಟ ರೀತಿಯಲ್ಲಿ ಶವ ಪತ್ತೆಯಾಗಿದೆ.ಕೆಲ ದಿನಗಳ ಹಿಂದೆ ಹುಣಸೂರು ಮೂಲದ ವಾಲೆ ರವಿ ಎಂಬುವರು ಸಾಲದ ಹಣ ಕೊಡದ ಬಗ್ಗೆ ದೊಡ್ಡಕೊಪ್ಪಲು ಗ್ರಾಮಕ್ಕೆ ಬಂದು ಹರೀಶ್ ಅವರ ಮೇಲೆ ಹಲ್ಲೆ ನಡೆಸಿ ಸಾಲ ವಾಪಸ್ಸ್ ನೀಡುವಂತೆ ದಮಕಿ ಹಾಕಿದ್ದು ಈತನೇ ಇವರನ್ನು ಕೊಲೆ ಮಾಡಿರಬಹುದು ಎಂದು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.ಸಾಲಿಗ್ರಾಮ ಪೊಲೀಸ್ ಠಾಣೆಯ ನಿರೀಕ್ಷ ಕೃಷ್ಣರಾಜು, ಸಿಬ್ಬಂದಿಗಳಾದ ಚೇತನ್, ಬಸವರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು ಘಟನೆಯ ಸಂಬಂಧ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular