ಕೆ ಆರ್ ನಗರ: ನಗರದ ರೇಡಿಯೋ ಮೈದಾನದಲ್ಲಿ ಕಾರ್ಮಿಕರ ದಿನಾಚರಣೆಯ ಅಂಗವಾಗಿ ಪುರಸಭೆಯ ವತಿಯಿಂದ ಪೌರಕಾರ್ಮಿಕರಿಗೆ ಕ್ರೀಡಾಕೂಟ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಪುರಸಭಾ ಸದಸ್ಯರು ಅಧಿಕಾರಿಗಳು ಉದ್ಘಾಟಿಸಿದರು.
ನಂತರ ಮಾತನಾಡಿದ ಮಾಜಿ ಪುರಸಭಾ ಅಧ್ಯಕ್ಷ ಕೋಳಿ ಪ್ರಕಾಶ್, ಪೌರಕಾರ್ಮಿಕರು ನಮ್ಮ ಪಟ್ಟಣ ಸ್ವಚ್ಛತೆಗಾಗಿ ಹಗಲು ಇರಲು ಎನ್ನದೆ ಕೆಲಸ ಮಾಡುತ್ತಿದ್ದು, ಅವರಿಗೆ ಧೈರ್ಯ ಮತ್ತು ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಒಂದು ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಈ ಒಂದು ಕ್ರೀಡಾಕೂಟದಲ್ಲಿ ಎಲ್ಲ ರೀತಿಯ ಕ್ರೀಡೆಗಳಲ್ಲಿ ಪೌರಕಾರ್ಮಿಕರು ಪಾಲ್ಗೊಂಡು ಮನರಂಜನೆಯನ್ನು ಪಡೆದು ಕೊಂಡಿದ್ದಾರೆ ಎಂದರು.
ಸರ್ಕಾರವು ಕೂಡ ಪೌರಕಾರ್ಮಿಕರಿಗೆ ಬದ್ಧತೆಯನ್ನು ನೀಡುವ ಕಾನೂನನ್ನು ರಚಿಸಬೇಕು ಎಂದು ಈ ಮೂಲಕ ಒತ್ತಾಯಿಸಿದರು.