ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪರ ಪ್ರಚಾರದ ವೇಳೆ ವಸತಿ ಹಾಗೂ ವಕ್ಫ್ ಸಚಿವ ಬಿ. ಝಡ್. ಜಮೀರ್ ಅಹಮ್ಮದ್ ಖಾನ್ ಭಾಷಣದ ಮಧ್ಯೆ “ಕರಿಯ ಕುಮಾರಸ್ವಾಮಿ” ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಈ ಮೂಲಕ ಕಪ್ಪು ವರ್ಣದ ಜನಾಂಗೀಯ ನಿಂದನೆ ಮಾಡಿದ್ದಾರೆ ಎಂದು ಕೆ.ಆರ್.ನಗರ ಮತ್ತು ಸಾಲಿಗ್ರಾಮ ಆವಳಿ ತಾಲ್ಲೂಕಿನ ಜೆಡಿಎಸ್ ಅಧ್ಯಕ್ಷರು, ಮುಖಂಡರು, ಕಾರ್ಯಕರ್ತರು ಸಚಿವ ಜಮೀರ್ ಅಹಮ್ಮದ್ ಖಾನ್ ವಿರುದ್ದ ಪಟ್ಟಣದ ತಾಲ್ಲೂಕು ಆಡಳಿತ ಸೌದದ ಕಚೇರಿ ಮುಂಬಾಗ ಪ್ರತಿಭಟನೆ ನೆಡೆಸಿ ಸಚಿವ ಸ್ಥಾನದಿಂದ ವಜಾ ಗೊಳಿಸುವಂತೆ ರಾಜ್ಯಪಾಲರಿಗೆ ತಹಸೀಲ್ದಾರ್ ಮೂಲಕ ಮನವಿ ಪತ್ರ ನೀಡಲಾಯಿತು.

ಈ ವೇಳೆ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಮಾತನಾಡಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಭಾನುವಾರ ರಾತ್ರಿ ಪ್ರಚಾರದ ವೇಳೆ ಬಹಿರಂಗ ಸಭೆಯಲ್ಲಿ ಸಾರ್ವಜನಿಕವಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು, ಜಮೀರ್ ಅಹ್ಮದ್ ಖಾನ್ “ಕಾಲಾ ಕುಮಾರಸ್ವಾಮಿ” (ಕರಿಯ ಕುಮಾರಸ್ವಾಮಿ) ಎಂದು ಉರ್ದು ಭಾಷೆಯಲ್ಲಿ ನಿಂದಿಸಿದ್ದಾರೆ. ಈ ಮೂಲಕ ಕಪ್ಪು ವರ್ಣದವರ ಜನಾಂಗೀಯ ನಿಂದನೆ ಮಾಡಿ ವರ್ಣಭೇದ ತಾರತಮ್ಯ ಎಸಗಿದ್ದಾರೆ. ಅಷ್ಟೆ ಅಲ್ಲದೇ ಒಂದು ಸಮುದಾಯವನ್ನು ಎತ್ತಿಕಟ್ಟಿ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಹದಗೆಡಲು ಜನರನ್ನು ಪ್ರಚೋದಿಸಿರುವ ಸಚಿವ ಜಮೀರ್ ಅಹಮದ್ ಖಾನ್ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸ ಬೇಕು, ಇಷ್ಟೆಲ್ಲ ಅವಹೇಳನಕಾರಿಯಾಗಿ ಮಾತನಾಡಿದ್ದರು ರಾಜ್ಯ ಚುನಾವಣಾ ಆಯೋಗ ಕೇಸು ದಾಖಲಿಸದೆ ಇದ್ದಾರೆ ಈ ಕೂಡಲೇ ಜಮೀರ್ ಅಹಮದ್ ಖಾನ್ ವಿರುದ್ಧ ಕೇಸು ದಾಖಲಿಸಿ ಎಂದು ಒತ್ತಾಯಿಸಿದರು.
ನಿಮ್ಮ ಕುಟುಂಬವನ್ನೇ ಖರೀದಿ ಖಂಡನೆ :
ಚನ್ನಪಟ್ಟಣದಲ್ಲಿ ಮಾತನಾಡಿದ್ದ ಜಮೀರ್, “ಈ ಹಿಂದೆ ಹಿಜಾಬ್ ಬೇಡ ಅಂದಿದ್ದೀರಿ. ಈಗ ನಿನಗೆ ಮುಸಲ್ಮಾನರ ಮತ ಬೇಕಾ, ಕುಮಾರಸ್ವಾಮಿ ಬಿಜೆಪಿಗೆ ಹೋಗಿ ಮುಸಲ್ಮಾನರನ್ನು ಖರೀದಿ ಮಾಡುತ್ತಾನಂತೆ. ಏ ಕುಮಾರಸ್ವಾಮಿ ನಿನ್ ರೇಟು ಹೇಳು, ಮುಸಲ್ಮಾನರು ಒಂದೊಂದ್ ಪೈಸೆ ಹಾಕಿ ಇಡೀ ನಿನ್ನ ಕುಟುಂಬವನ್ನೇ ಖರೀದಿ ಮಾಡುತ್ತಾರೆ’ ಎಂಬ ಹೇಳಿಕೆಯನ್ನು ಜೆಡಿಎಸ್ ನ ನಗರ ಕಾರ್ಯದರ್ಶಿ ರುದ್ರೇಶ್ (ಅಯ್ಯ) ಖಂಡಿಸಿದರು.
ಸಾಲಿಗ್ರಾಮ ತಾಲ್ಲೂಕಿನ ಜೆಡಿಎಸ್ ಉಪಾಧ್ಯಕ್ಷ ಲಾಲೂಸಾಬ್ ಮಾತನಾಡಿ ಮಾಜಿ ಪ್ರಧಾನಿಗಳಾದ ಹೆಚ್‌ಡಿ.ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡಲು ಮುಸ್ಲಿಂ ಸಮುದಾಯದ ಯಾವ ಹಕ್ಕನ್ನು ನಿಮಗೆ ನೀಡಿಲ್ಲ ಯಾವ ನೈತಿಕತೆಯಿಂದ ಮಾತನಾಡಿದ್ಸಿರಿ ಜಮೀರ್ ಅಹಮದ್ ಖಾನ್ ಅವರೇ, ಈ ನಿಮ್ಮ ಹೇಳಿಯನ್ನು ಮುಸ್ಲಿಂ ಸಮುದಾಯದ ಪರವಾಗಿ ನಾನು ಖಂಡಿಸುತ್ತೇನೆ ಎಂದರು.
ನಿಮ್ಮಂತಹ ರಾಜಕಾರಣಿಗಳಿಂದ ಸಮಾಜ ಒಡೆಯುವ ಕೆಲಸವಾಗುತ್ತಿದೆ, ರಾಜಕಾರಣ ಕಲಿಸಿದ್ದೆ ದೇವೇಗೌಡರು, ನೀವು ಹಿಂದೆ ಹೇಗೆ ಬದುಕುತ್ತಿದ್ಸಿರಿ ಎಂದು ಮುಸ್ಲಿಂ ಸಮಾಜಕ್ಕೆ ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆವಳಿ ತಾಲ್ಲೂಕಿನ ಜಾದಳ ಅಧ್ಯಕ್ಷರಾದ ಹಂಪಾಪುರ ಕುಮಾರ್, ಮೆಡಿಕಲ್ ರಾಜಣ್ಣ, ಜಿ.ಪಂ.ಮಾಜಿ ಸದಸ್ಯ ಎಂ.ಟಿ.ಕುಮಾರ್, ಪುರಸಭಾ ಸದಸ್ಯರಾದ ಉಮೇಶ್, ಕೆ.ಎಲ್.ಜಗದೀಶ್, ತಾ.ಯುವ ಜೆಡಿಎಸ್ ಮಾಜಿ ಅಧ್ಯಕ್ಷ ಹೊಸೂರು ಮಧುಚಂದ್ರ, ತಾ.ಜೆಡಿಎಸ್ ರೈತ ಘಟಕದ ಅಧ್ಯಕ್ಷ ಜಿ.ಪಿ.ಮಂಜುನಾಥ್, ಜೆಡಿಎಸ್ ಮುಖಂಡರಾದ ಎಸ್.ಕೆ.ಮಧುಚಂದ್ರ, ಬಂಗಾರಿ, ಹಂಪಾಪುರಸೂರಿ, ಮಿರ್ಲೆ ರಾದಕೃಷ್ಣ, ಜೆಡಿಎಸ್ ನಗರ ಮಹಿಳಾ ಘಕಟದ ಕಾರ್ಯದರ್ಶಿ ಭಾಗಮ್ಮ, ರೂಪಸತೀಶ್, ಆಟೋ ಕಾಂತರಾಜ್ ಮೋಹನ, ಸಾತಿಗ್ರಾಮ ಗಣೇಶ್, ಫಣೀಶ್, ನಾರಾಯಣಪುರ ಬಾಬು, ದೀಪಾಹರೀಶ್, ಕೃಷ್ಣಶೆಟ್ಟಿ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.