ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಸಾಲಿಗ್ರಾಮದ ಎಪಿಎಂಸಿ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಪ್ರಕ್ರಿಯೆ ಗುರುವಾರ ಶುರುವಾಯಿತು. 30 ಮಂದಿ ರೈತರಿಂದ 400 ಕ್ವಿಂಟಾಲ್ ರಾಗಿಯನ್ನು ಮೊದಲ ದಿನ ಖರೀದಿಸಲಾಯಿತು. ‘ಏಪ್ರಿಲ್ 20 ರವರೆಗೆ ಒಟ್ಟು 530 ಮಂದಿ ರೈತರಿಗೆ ಈ ಖರೀದಿ ಕೇಂದ್ರಕ್ಕೆ ರಾಗಿ ಬಿಡಲು ಟೋಕನ್ ನೀಡಲಾಗಿದೆ. ಪ್ರತಿದಿನ 30 ರಿಂದ 40 ಮಂದಿ ರೈತರಿಂದ ರಾಗಿ ಖರೀದಿಸಲಾಗುತ್ತಿದೆ.
2800 ಮಂದಿ ರೈತರು ಈ ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಿಕೊಂಡಿದ್ದು,45,000 ಕ್ವಿಂಟಾಲ್ ರಾಗಿ ಖರೀದಿಸಲಾಗುವುದು’ನೋಂದಣಿ ಮಾಡಿಸಿರುವ ಎಲ್ಲಾ ರೈತರಿಂದಲೂ ಖರೀದಿಸಲಾಗುವುದು’ ಎಂದು ಖರೀದಿ ಅಧಿಕಾರಿ ನಿತಿನ್ ನಾಯಕ್ ತಿಳಿಸಿದ್ದಾರೆ.