ಕೆ.ಆರ್.ನಗರ: ಪಿಎಲ್‌ಡಿ ಬ್ಯಾಂಕ್ ಪ್ರಭಾರ ಅಧ್ಯಕ್ಷರಾಗಿ ಪುಷ್ಪರೇವಣ್ಣ ಅಧಿಕಾರ ಸ್ವೀಕಾರ ಮಾಡಿದರು. ಈವರೆಗೆ ಅಧ್ಯಕ್ಷರಾಗಿದ್ದ ಕೆ.ಟಿ.ಚಂದ್ರೇಗೌಡರವರ ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವವರೆಗೆ ಉಪಾಧ್ಯಕ್ಷರಾಗಿರುವ ಪುಷ್ಪರೇವಣ್ಣ ಪ್ರಭಾರ ಅಧ್ಯಕ್ಷರಾಗಿದ್ದು ಇವರನ್ನು ನಿರ್ದೇಶಕರಾದ ಪ್ರೇಮಕುಳ್ಳಬೋರೇಗೌಡ, ಕಲಾವತಿ, ಎಂ.ಎಸ್.ಹರಿಚಿದoಬರ, ಎನ್.ಸಿ.ಪ್ರಸಾದ್, ಮಲ್ಲಿಕಾರ್ಜುನ, ರಮೇಶ್, ರಾಮೇಗೌಡ, ಬಿ.ಸಿದ್ದೇಗೌಡ, ಚಂದ್ರಶೇಖರ್, ಹೆಚ್.ಕೆ.ಪ್ರದೀಪ್‌ಕುಮಾರ್, ವ್ಯವಸ್ಥಾಪಕಿ ಗಾಯಿತ್ರಮ್ಮ ಅಭಿನಂದಿಸಿದರು.
ಆನಂತರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಾಸಕ ಡಿ.ರವಿಶಂಕರ್ ಅವರನ್ನು ಭೇಟಿ ಮಾಡಿದ ಪ್ರಭಾರ ಅಧ್ಯಕ್ಷರು ಶಾಸಕರಿಗೆ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬ್ಯಾಂಕ್‌ನ ನಿರ್ದೇಶಕರು, ಮುಖಂಡರಾದ ಜಿ.ಎಂ.ಲೋಹಿತ್, ಹರೀಶ್, ರಾಜನಾಯಕ, ಸುರೇಶ್, ಎಲ್.ಎಂ.ಸಣ್ಣಪ್ಪ, ರಾಹುಲ್, ಮಂಜುನಾಥ್ ಇದ್ದರು.