Saturday, April 19, 2025
Google search engine

Homeರಾಜ್ಯಸುದ್ದಿಜಾಲಕೆ.ಆರ್.ನಗರ:ತೋಪಮ್ಮ ದೇವಾಲಯದಲ್ಲಿ ದೇವರ ಹೊಸ ಮೂರ್ತಿಯ ಪುನರ್ ಪ್ರತಿಷ್ಠಾಪನೆ

ಕೆ.ಆರ್.ನಗರ:ತೋಪಮ್ಮ ದೇವಾಲಯದಲ್ಲಿ ದೇವರ ಹೊಸ ಮೂರ್ತಿಯ ಪುನರ್ ಪ್ರತಿಷ್ಠಾಪನೆ

ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ:
ಕೆ.ಆರ್.ನಗರ ಪಟ್ಟಣದ ಹಾಸನ ಮೈಸೂರು ರಸ್ತೆಯಲ್ಲಿರುವ ತೋಪಮ್ಮನವರ ದೇವಾಲಯದಲ್ಲಿ ಮಂಗಳವಾರ ದೇವರ ಹೊಸ ಮೂರ್ತಿಯ ಪುನರ್ ಪ್ರತಿಷ್ಠಾಪನೆ ಮಾಡಲಾಯಿತು.
ಆದಿಶಕ್ತಿ ತೋಪಮ್ಮನವರ ದೇವಸ್ಥಾನದ ಸೇವಾ ಟ್ರಸ್ಟ್ ಮತ್ತು ಸುತ್ತಮುತ್ತಲ ೯ ಗ್ರಾಮಗಳ ಗ್ರಾಮಸ್ಥರು ಹಾಗೂ ಭಕ್ತರ ಸಮ್ಮುಖದಲ್ಲಿ ಈ ಧಾರ್ಮಿಕ ಕಾರ್ಯ ನಡೆಯಿತು.

ಇದಕ್ಕೆ ಪೂರ್ವಭಾವಿಯಾಗಿ ಕಳೆದ ಎರಡು ದಿನಗಳಿಂದ ದೇವಾಲಯದಲ್ಲಿ ಹೋಮ-ಹವನ ಮತ್ತು ವಿಶೇಷ ಪೂಜೆಗಳು ನಡೆದವು. ಪುನರ್ ಪ್ರತಿಷ್ಠಾಪನೆ ಅಂಗವಾಗಿ ಸೋಮವಾರ ಮತ್ತು ಮಂಗಳವಾರ ದೇವಾಲಯದ ಆವರಣದಲ್ಲಿ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತ್ತಲ್ಲದೆ, ವಿವಿಧ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.

ಮೂರನೇ ದಿನವಾದ ಇಂದು ಕೆಪಿಸಿಸಿ ಕರ‍್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ ದೇವಸ್ಥಾನದ ಸೇವಾ ಟ್ರಸ್ಟ್ ವತಿಯಿಂದ ಹೊರ ತಂದಿರುವ ಕ್ಯಾಲೆಂಡರನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಅವರಿಗೆ ಮನವಿ ಸಲ್ಲಿಸಿದ ಟ್ರಸ್ಟ್ ಪದಾಧಿಕಾರಿಗಳು ದೇವಾಲಯದ ಸಮುದಾಯ ಭವನದ ಅಭಿವೃದ್ದಿಗೆ ಶಾಸಕರಿಂದ ಅಗತ್ಯ ಅನುದಾನ ಕೊಡಿಸಬೇಕು ಎಂದು ಕೋರಿದರು. ಕೆ.ಆರ್.ನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಮಂದಿ ಭಕ್ತರು ದೇವಾಲಯಕ್ಕೆ ಆಗಮಿಸಿ ತೋಪಮ್ಮನವರ ರ‍್ಶನ ಪಡೆದರಲ್ಲದೆ ಪೂಜೆ ಸಲ್ಲಿಸಿ ಹರಕೆ ತೀರಿಸಿದರು.

ಟ್ರಸ್ಟ್ ನವರ ಮನವಿ: ದೇವಾಲಯದಲ್ಲಿ ಮಂಗಳವಾರ ತೋಪಮ್ಮನವರ ಪುನರ್ ಪ್ರತಿಷ್ಠಾಪನೆಯಾಗಿರುವುದರಿಂದ ೪೮ ದಿನಗಳ ವರೆಗೆ ವಿವಿಧ ಪೂಜಾ ವಿಧಿ ವಿಧಾನಗಳು ನಡೆಯುವುದರಿಂದ ಭಕ್ತರು ಇಲ್ಲಿ ಯಾವುದೇ ಪ್ರಾಣಿ ಬಲಿ ನೀಡಬಾರದು ಮತ್ತು ಮಾಂಸಹಾರ ಸೇವೆ ಮಾಡಬಾರದು ಎಂದು ದೇವಾಲಯದ ಟ್ರಸ್ಟ್ ನವರು ಮನವಿ ಮಾಡಿದ್ದಾರೆ. ಆದಿ ಶಕ್ತಿ ತೋಪಮ್ಮನವರ ದೇವಸ್ಥಾನದ ಸೇವಾ ಟ್ರಸ್ಟ್ ಗೌರವಾಧ್ಯಕ್ಷ ಅಣ್ಣಯ್ಯನಾಯಕ, ಅಧ್ಯಕ್ಷ ಸಿ.ಎ.ರಾಜಣ್ಣ, ಕಾರ್ಯದರ್ಶಿಕೆ.ಪಿ.ಜಗದೀಶ್, ಖಜಾಂಚಿ ಪರಶಿವಮೂರ್ತಿ, ಸದಸ್ಯರಾದ ಯೋಗೀಶ್, ಚನ್ನಬಸಪ್ಪ, ಮೋಟೇಗೌಡ, ಕುಂದೂರುಮಹದೇವ, ನಂಜುಂಡ, ಜವರೇಗೌಡ, ಚನ್ನಕೇಶವ ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular