Monday, April 7, 2025
Google search engine

Homeರಾಜ್ಯಸುದ್ದಿಜಾಲಕೆ.ಆರ್.ನಗರ: ಸಂತ ಅಂತೋಣಿಯವರ ಜಾತ್ರೆ, ವಾರ್ಷಿಕ ಮಹೋತ್ಸವ

ಕೆ.ಆರ್.ನಗರ: ಸಂತ ಅಂತೋಣಿಯವರ ಜಾತ್ರೆ, ವಾರ್ಷಿಕ ಮಹೋತ್ಸವ

ಕೆ.ಆರ್.ನಗರ: ತಾಲ್ಲೂಕಿನ ಪ್ರಮುಖ ಧಾರ್ಮಿಕ ಕೇಂದ್ರವಾಗಿರುವ ಇತಿಹಾಸ ಪ್ರಸಿದ್ದ ಡೋರ್ನಹಳ್ಳಿಯ ಸಂತ ಅಂತೋಣಿಯವರ ಜಾತ್ರೆ ಮತ್ತು ವಾರ್ಷಿಕ ಮಹೋತ್ಸವವು ಜೂ. ೪ ರಿಂದ ಆರಂಭವಾಗಿದ್ದು ೧೩ ರವರೆಗೆ ನಡೆಯಲಿದೆ.

ಗ್ರಾಮದಲ್ಲಿರುವ ಸಂತ ಅಂತೋಣಿಯವರ ಬಸಿಲಿಕಾದಲ್ಲಿ ಯೇಸುಕ್ರಿಸ್ತ ನಿಧನ ಹೊಂದಿದ ದಿನವಾದ ಜೂ, ೧೩ರಂದು ಭಕ್ತಿ ಭಾವದಿಂದ ಪೂಜೆ ಸಲ್ಲಿಸುವ ಮೂಲಕ ವಿಶೇಷ ಪ್ರಾರ್ಥನೆಗಳು, ಪ್ರಭೋಧನೆಗಳು, ಮೆರವಣಿಗೆ ಹಾಗೂ ಪರಮ ಪ್ರಸಾದದೊಂದಿಗೆ ಭವ್ಯ ಮೆರವಣಿಗೆಯು ನಡೆಯಲಿದೆ.

  ಜೂನ್ ೪ ರಿಂದ ಪ್ರತಿದಿನ   ಬೆಳಿಗ್ಗೆ ಮತ್ತು ಸಂಜೆ ವಿವಿದ ಚರ್ಚುಗಳ ಧರ್ಮ ಗುರುಗಳ ಸಾನ್ನಿಧ್ಯದಲ್ಲಿ ಬಲಿಪೂಜೆಯನ್ನು ನಡೆಸಲಾಗುತ್ತದೆ.

ಕ್ಷೇತ್ರದ ಹಿನ್ನೆಲೆ- ಸುಮಾರು ೨೦೫ ವರ್ಷಗಳ ಹಿಂದೆ ಹಿಂದು ರೈತನೊಬ್ಬನು ಹೊಲವನ್ನು ಉಳುಮೆ ಮಾಡುತ್ತಿದ್ದಾಗ ಅವನ ನೇಗಿಲಿಗೆ ವಸ್ತುವೊಂದು ಸಿಕ್ಕಿದಂತಾದಾಗ ಎತ್ತುಗಳನ್ನು ನಿಲ್ಲಿಸಿ ನೋಡಿದಾಗ   ಮನುಷ್ಯಾಕೃತಿಯ   ಮರದ ಪ್ರತಿಮೆಯಾಗಿತ್ತು ಅದನ್ನು ಆಟದ ಬೊಂಬೆ ಎಂದುಕೊAಡು ಭಾವಿಸಿ  ರೈತ ತನ್ನ ಮಕ್ಕಳಿಗೆ ಆಟವಾಡಲು ನೀಡಿದನೆನ್ನಲಾಗಿದೆ.

ಒಂದು ರಾತ್ರಿ ರೈತನಿಗೆ  ಕನಸಿನಲ್ಲಿ ಪ್ರತಿಮೆಯಂತೆ ಬಟ್ಟೆಯುಟ್ಟ ಸಂತನೊಬ್ಬನು ಬಂದು ಕ್ರೈಸ್ತರು ಭಕ್ತಿ ಆದರಗಳಿಂದ ಗೌರವಿಸುತ್ತಿರುವ ಪ್ರಸಿದ್ದ ಸಂತರ ಪ್ರತಿಮೆಯನ್ನು ಹೀನಾಯವಾಗಿ ಕಾಣದೇ ಪ್ರತಿಮೆ ದೊರಕಿದ ಸ್ಥಳದಲ್ಲೆ ತನಗಾಗಿ ಒಂದು ಪ್ರತ್ಯೇಕ ದೇವಾಲಯವನ್ನು ಕಟ್ಟಿಸಬೇಕೆಂದು  ಆಲಯ ನಿರ್ಮಿಸದೇ ನಿರ್ಲಕ್ಷ್ಯ  ತೋರಿದರೆ ನಿನ್ನ ಕುಟುಂಬಕ್ಕೆ ತೊಂದರೆಯಾಗುತ್ತದೆ  ಎಂದು ನುಡಿದಂತಾಯಿತು.

ರೈತನು ಕನಸಿನ ವಿಚಾರಕ್ಕೆ ಬೆಲೆ ಕೊಡದ ಕಾರಣ ಪ್ರತಿಮೆಯು ಮಕ್ಕಳ ಗೊಂಬೆಯಾಗಿಯೇ ಉಳಿಯಿತು ಆದರೆ ಮಕ್ಕಳು ತಮಗೆ ಇಷ್ಟ ಬಂದAತೆ ಆ ಪ್ರತಿಮೆಯನ್ನು ಬಳಸಿ ಚಲ್ಲಾಟವಾಡಿದರು ಆದರೆ ಒಂದು ವರ್ಷದೊಳಗೆ ತನ್ನ ಎರಡು ಎತ್ತುಗಳು ಸತ್ತು ಹೋದವು.

ಆನಂತರ ಆತನ   ಕುಟುಂಬದಲ್ಲಿ ಒಬ್ಬರನಂತರ ಇನ್ನೊಬ್ಬರು ತೀರಿಕೊಂಡರು ಇದಕ್ಕೆ ಯಾವ ಕಾಯಿಲೆಯೂ ಕಾರಣವಾಗಿರಲಿಲ್ಲ ಈ ಅಕಾಲಿಕ ಮೃತ್ಯುವಿಗೆ ಕನಸಿನಲ್ಲಿ ಸಂತನು ಆಜ್ಞಾಪಿಸಿದ ಕರ್ತವ್ಯವನ್ನು ಈಡೇರಿಸದೆ ಇದ್ದದ್ದು ಹಾಗೂ ಕೊಟ್ಟ ಎಚ್ಚರಿಕೆಯನ್ನು ನಿರ್ಲಕ್ಷಿಸಿದ ಕಾರಣ ತನಗೆ ಈ ದುರಂತ ಒದಗಿದೆ ಎಂದು   ರೈತ  ಮನಗಂಡನು.

ಕನಸಿನಲ್ಲಿ ಸಂತನು ಆಜ್ಞಾಪಿಸಿದ ಕರ್ತವ್ಯವನ್ನು ಈಡೇರಿಸದೇ ಇದ್ದದ್ದು ಹಾಗೂ ಕೊಟ್ಟ ಎಚ್ಚರಿಕೆಯನ್ನು ನಿರ್ಲಕ್ಷಿಸಿದ ಕಾರಣಗಳಿಂದ ಈ ದುರಂತಗಳು ಸರಪಳಿ ರೀತಿಯಲ್ಲಿ ಸಂಭವಿಸುತ್ತಿವೆ ಎಂದು ಮನಗಂಡು  ಇಷ್ಟಾರ್ಥಗಳನ್ನು ನೆವೇರಿಸಲು ಸಿದ್ದನಾದ. 

ಈ ಸಮಯದಲ್ಲಿ ಪಾಂಡಿಚೇರಿಯ ಮೂಲದ ಕ್ರೆöÊಸ್ತ ಗುರುವೊಬ್ಬರನ್ನು   ರೈತ ಭೇಟಿ ಮಾಡಿ ತನಗೆ   ಉಳೆಮೆಯ ಸಮ ಸಿಕ್ಕ ಮರದ ಪ್ರತಿಮೆ ಕನಸಿನಲ್ಲಿ ಸಂತ ನೀಡಿದ ಆದೇಶ ಹಾಗೂ ಎಚ್ಚರಿಕೆಯನ್ನು ನಿರ್ಲಕ್ಷಿಸಿದ ಪರಿಣಾಮ ಉಂಟಾದ ದುರಂತಗಳನ್ನು ವಿವರಿಸಿದ.

ಗುರುಗಳ ಮಾರ್ಗದರ್ಶನದಲ್ಲಿ ಒಂದು ಪುಟ್ಟ  ದೇವಾಲಯ ನಿರ್ಮಿಸಿದ ಆನಂತರ ಎರಡು ಶತಮಾನಗಳಿಂದ ನಂಬಿಕೆ ಹಾಗೂ ತಮ್ಮ  ಕಷ್ಠ ಕಾರ್ಪಣ್ಯಗಳನ್ನು ಈಡೇರಿಸುವಂತೆ ಪ್ರಾರ್ಥನೆ ಸಲ್ಲಿಸಿದ ಭಕ್ತ ವೃಂದಕ್ಕೆ ಸಂತ ಅಂಥೋಣಿಯವರು ಇಷ್ಟಾರ್ಥಗಳನ್ನು ನೆವೇರಿಸುತ್ತಾರೆ ಎಂದು ಇಂದಿಗೂ ನಡೆದುಬಂದಿದ್ದು ೧೯೭೭ರಲ್ಲಿ ಮಂಗಳೂರಿನ ಚಂಗಪ್ಪಚೆಟ್ಟಿ ಎಂಬುವವರು ಶಿಥಿಲಾವಸ್ಥೆಯಲ್ಲಿದ್ದ ದೇವಾಲಯವನ್ನು ನವೀಕರಿಸಿ ಅದೇ ಸ್ಥಳದಲ್ಲಿ ಪುನರುಜ್ಜೀವನಗೊಳಿಸಿದರು ಎಂದು ಇಲ್ಲಿನ ದಾಖಲೆಗಳು ಹೇಳುತ್ತವೆ.

RELATED ARTICLES
- Advertisment -
Google search engine

Most Popular